ಶುಕ್ರವಾರ, 26 ಏಪ್ರಿಲ್ 2024
×
ADVERTISEMENT
ಈ ಕ್ಷಣ :
ADVERTISEMENT
ADVERTISEMENT

ಆಲಿಕಲ್ಲು ಮಳೆ, ಬೆಳೆಗಳಿಗೆ ಹಾನಿ

ಚಿಕ್ಕಬಳ್ಳಾಪುರ ತಾಲ್ಲೂಕಿನಲ್ಲಿ ಅಕಾಲಿಕ ಮಳೆಗೆ ದ್ರಾಕ್ಷಿ ಸೇರಿದಂತೆ ನೆಲ ಕಚ್ಚಿದ ವಿವಿಧ ಬೆಳೆಗಳು
Last Updated 20 ಮಾರ್ಚ್ 2020, 12:00 IST
ಅಕ್ಷರ ಗಾತ್ರ

ಚಿಕ್ಕಬಳ್ಳಾಪುರ: ತಾಲ್ಲೂಕಿನ ಕೆಲ ಹಳ್ಳಿಗಳಲ್ಲಿ ಶುಕ್ರವಾರ ಸಂಜೆ ದಿಢೀರ್‌ ಸುರಿದ ಆಲಿಕಲ್ಲು ಸಹಿತ ಅಕಾಲಿಕ ಮಳೆಗೆ ದ್ರಾಕ್ಷಿ ಸೇರಿದಂತೆ ಅನೇಕ ಬೆಳೆಗಳು ನೆಲ ಕಚ್ಚಿವೆ.

ಇತ್ತೀಚೆಗೆ ಜಿಲ್ಲೆಯ ಕೆಲ ಭಾಗಗಳಲ್ಲಿ ಎರಡ್ಮೂರು ಬಾರಿ ಸಾಧಾರಣ ಮಳೆ ಸುರಿದಿತ್ತು. ಶುಕ್ರವಾರ ಸಂಜೆ ದಿಬ್ಬೂರು, ಗಂಗರೇಕಾಲುವೆ, ಅಂಗರೇಖನಹಳ್ಳಿ, ಚಿಮನಹಳ್ಳಿ, ಪಾತೂರು, ಹಿರಿಯಣ್ಣಹಳ್ಳಿ, ಕಂಡಕನಹಳ್ಳಿ, ದೊಡ್ಡಪೈಲಗುರ್ಕಿ ಸೇರಿದಂತೆ ಸುತ್ತಲಿನ ಗ್ರಾಮಗಳಲ್ಲಿ ಆಲಿಕಲ್ಲು ಸಹಿತ ಬಿರುಸಿನ ಮಳೆ ಸುರಿದಿದೆ.

ಆಲಿಕಲ್ಲಿನ ಹೊಡೆತಕ್ಕೆ ನೂರಾರು ಎಕರೆಯಲ್ಲಿರುವ ದ್ರಾಕ್ಷಿ ಜತೆಗೆ ಹಿಪ್ಪುನೆರಳೆ, ಹೂವು, ದಾಳಿಂಬೆ ಮುಂತಾದ ಬೆಳೆಗಳು ಹಾನಿಗೊಂಡಿವೆ ಎಂದು ತಿಳಿದುಬಂದಿದೆ.

ತಾಜಾ ಸುದ್ದಿಗಾಗಿ ಪ್ರಜಾವಾಣಿ ಟೆಲಿಗ್ರಾಂ ಚಾನೆಲ್ ಸೇರಿಕೊಳ್ಳಿ | ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ನಮ್ಮ ಫೇಸ್‌ಬುಕ್ ಪುಟ ಫಾಲೋ ಮಾಡಿ.

ADVERTISEMENT
ADVERTISEMENT
ADVERTISEMENT
ADVERTISEMENT
ADVERTISEMENT