ಮಂಗಳವಾರ, 30 ಏಪ್ರಿಲ್ 2024
×
ADVERTISEMENT
ಈ ಕ್ಷಣ :
ADVERTISEMENT
ADVERTISEMENT

ಕೋಚಿಮುಲ್‌: ವಿಮೆ ಹಣದ ಚೆಕ್ ವಿತರಣೆ

Published 9 ಮಾರ್ಚ್ 2024, 14:14 IST
Last Updated 9 ಮಾರ್ಚ್ 2024, 14:14 IST
ಅಕ್ಷರ ಗಾತ್ರ

ಶಿಡ್ಲಘಟ್ಟ: ‘ಬೇಸಿಗೆ ಕಾಲದಲ್ಲಿ ಮೇವಿಗೆ ಸಮಸ್ಯೆ ಆಗಬಹುದು ಅಂದ ಮಾತ್ರಕ್ಕೆ ಹಾಲು ಕೊಡುವ ರಾಸುಗಳನ್ನು ಮಾರಾಟ ಮಾಡಬೇಡಿ’ ಎಂದು ಕೋಲಾರ-ಚಿಕ್ಕಬಳ್ಳಾಪುರ ಹಾಲು ಒಕ್ಕೂಟದ ಶಿಡ್ಲಘಟ್ಟ ಶಿಬಿರ ಕಚೇರಿಯ ಉಪ ವ್ಯವಸ್ಥಾಪಕ ಡಾ.ಬಿ.ಆರ್.ರವಿಕಿರಣ್ ಮನವಿ ಮಾಡಿದರು.

ನಗರದಲ್ಲಿನ ಕೋಚಿಮುಲ್ ಶಿಬಿರ ಕಚೇರಿ ಸಭಾಂಗಣದಲ್ಲಿ ಗುರುವಾರ ನಡೆದ ಕಾರ್ಯಕ್ರಮದಲ್ಲಿ ಮೃತಪಟ್ಟ ಸೀಮೆ ಹಸುಗಳ ವಿಮೆ ಹಣದ ಚೆಕ್ ವಿತರಿಸಿ ಮಾತನಾಡಿದರು.

ಈ ವರ್ಷ ಕಳೆದ ವರ್ಷಗಳಿಗೆ ಹೋಲಿಕೆ ಮಾಡಿದರೆ ಸ್ವಲ್ಪ ಮೇವಿನ ಸಮಸ್ಯೆ ಎದುರಾಗಬಹುದು. ಅದು ಕೇವಲ ತಾತ್ಕಾಲಿಕ. ಸರ್ಕಾರವೂ ಸಹ ರೈತರ ಜತೆಗಿದ್ದು ಮೇವಿನ ಸಮಸ್ಯೆ ಆಗದಂತೆ ಅಗತ್ಯ ಕ್ರಮ ಕೈಗೊಳ್ಳುತ್ತಿದೆ ಎಂದು ಧೈರ್ಯ ತುಂಬಿದರು.

ರೈತರು ತಪ್ಪದೆ ತಮ್ಮ ಸೀಮೆ ಹಸುಗಳಿಗೆ ವಿಮೆ ಮಾಡಿಸಿ, ಒಂದೊಮ್ಮೆ ರಾಸುಗಳು ಮೃತಪಟ್ಟರೆ ವಿಮೆ ಹಣವಾದರೂ ಕಷ್ಟಕ್ಕೆ ನೆರವಾಗುತ್ತದೆ ಎಂದು ವಿಮೆಯ ಮಹತ್ವವನ್ನು ವಿವರಿಸಿದರು. 30 ಮಂದಿ ರೈತರಿಗೆ ₹17 ಲಕ್ಷ ವಿಮೆಯ ಚೆಕ್‌ ವಿತರಿಸಲಾಯಿತು. ಕೋಚಿಮುಲ್ ಮೇಲ್ವಿಚಾರಕರು, ರೈತರು ಹಾಜರಿದ್ದರು.

ತಾಜಾ ಸುದ್ದಿಗಾಗಿ ಪ್ರಜಾವಾಣಿ ಟೆಲಿಗ್ರಾಂ ಚಾನೆಲ್ ಸೇರಿಕೊಳ್ಳಿ | ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ನಮ್ಮ ಫೇಸ್‌ಬುಕ್ ಪುಟ ಫಾಲೋ ಮಾಡಿ.

ADVERTISEMENT
ADVERTISEMENT
ADVERTISEMENT
ADVERTISEMENT
ADVERTISEMENT