ಮಂಗಳವಾರ, ಮೇ 18, 2021
30 °C

ಬಾಗೇಪಲ್ಲಿಯಲ್ಲಿ ಅ.23 ರಂದು ‘ಜನಸ್ಪಂದನ’ ಕಾರ್ಯಕ್ರಮ

ಪ್ರಜಾವಾಣಿ ವಾರ್ತೆ Updated:

ಅಕ್ಷರ ಗಾತ್ರ : | |

Prajavani

ಚಿಕ್ಕಬಳ್ಳಾಪುರ: ‘ಪ್ರಜಾವಾಣಿ’–‘ಡೆಕ್ಕನ್‌ ಹೆರಾಲ್ಡ್‌’ ಪತ್ರಿಕೆಗಳಿಂದ ಬಾಗೇಪಲ್ಲಿ ಪಟ್ಟಣದ ಕೊಡಿಕೊಂಡ ರಸ್ತೆಯಲ್ಲಿ ದರ್ಗಾ ಸರ್ಕಲ್ ಬಳಿಯ ಹೊಸ ಶಾದಿ ಮಹಲ್‌ನಲ್ಲಿ ಅ.23 (ಬುಧವಾರ) ರಂದು ‘ಜನಸ್ಪಂದನ’ ಕಾರ್ಯಕ್ರಮ ಆಯೋಜಿಸಲಾಗಿದೆ.

ಬೆಳಿಗ್ಗೆ 10ರಿಂದ ಮಧ್ಯಾಹ್ನ1ರ ವರೆಗೆ ಕಾರ್ಯಕ್ರಮ ನಡೆಯಲಿದೆ. ಬೆಳಿಗ್ಗೆ 9ರಿಂದ ಸಾರ್ವಜನಿಕರು ನೋಂದಣಿ ಮಾಡಿಕೊಳ್ಳಬಹುದು. ಕ್ಷೇತ್ರದಾದ್ಯಂತ ಇರುವ ಜ್ವಲಂತ ಸಮಸ್ಯೆಗಳಿಗೆ ನಾಗರಿಕರು ಪರಿಹಾರ ಕಂಡುಕೊಳ್ಳಲು ‘ಜನಸ್ಪಂದನ’ ಉತ್ತಮ ವೇದಿಕೆಯಾಗಿದೆ.

ರಸ್ತೆ ಗುಂಡಿಗಳು, ಕುಡಿಯುವ ನೀರು, ಕಸ ವಿಲೇವಾರಿ, ಟ್ರಾಫಿಕ್ ಸಮಸ್ಯೆ, ಕೆರೆಗಳ ಅಭಿವೃದ್ಧಿ, ಬಿಡಾಡಿ ದನ, ನಾಯಿಗಳ ಕಾಟ, ಸರಗಳ್ಳತನ ಸೇರಿದಂತೆ ಹಲವು ಕುಂದುಕೊರತೆ ಕುರಿತು ಕ್ಷೇತ್ರದ ಶಾಸಕರು, ವಿವಿಧ ವಾರ್ಡ್‌ಗಳ ಪುರಸಭೆ ಸದಸ್ಯರು, ಪೊಲೀಸ್, ಆರೋಗ್ಯ, ಶಿಕ್ಷಣ ಇಲಾಖೆ, ಕೆಎಸ್‌ಆರ್‌ಟಿಸಿ ಹಾಗೂ ಇತರ ಅಧಿಕಾರಿಗಳಲ್ಲಿ ನಾಗರಿಕರು ಅಹವಾಲು ಸಲ್ಲಿಸಬಹುದು. ಈ ಸಸಮಸ್ಯೆಗಳಿಗೆ ಅಧಿಕಾರಿಗಳು ಪರಿಹಾರ ಸೂಚಿಸಲಿದ್ದಾರೆ.

ಹೆಚ್ಚಿನ ಮಾಹಿತಿ ಸಂಪರ್ಕ: ಎನ್.ಪ್ರತಾಪ್‌ – 9606931760.

ಫಲಿತಾಂಶ 2021 ಪೂರ್ಣ ಮಾಹಿತಿ ಇಲ್ಲಿದೆ

ತಾಜಾ ಸುದ್ದಿಗಳಿಗಾಗಿ ಪ್ರಜಾವಾಣಿ ಆ್ಯಪ್ ಡೌನ್‌ಲೋಡ್ ಮಾಡಿಕೊಳ್ಳಿ: ಆಂಡ್ರಾಯ್ಡ್ ಆ್ಯಪ್ | ಐಒಎಸ್ ಆ್ಯಪ್

ಪ್ರಜಾವಾಣಿ ಫೇಸ್‌ಬುಕ್ ಪುಟವನ್ನುಫಾಲೋ ಮಾಡಿ.

ಈ ವಿಭಾಗದಿಂದ ಇನ್ನಷ್ಟು