ಚಿಕ್ಕಬಳ್ಳಾಪುರ: ‘ಕೇಂದ್ರದೊಂದಿಗೆ ಘರ್ಷಣೆ ಮೂಲಕ ಎಲ್ಲವನ್ನೂ ಪಡೆದುಕೊಳ್ಳಲು ಆಗುವುದಿಲ್ಲ. ಕಾಂಗ್ರೆಸ್‌ನವರಿಗೆ ಪದೇ ಪದೇ ಘರ್ಷಣೆ ಮಾಡಿ ಅಭ್ಯಾಸವಾಗಿದೆ. ನಮಗೆ ಯಾವ ರೀತಿ ಹಣ ತರಬೇಕು, ಅಭಿವೃದ್ಧಿ ಮಾಡಬೇಕು ಎಂಬುದು ಗೊತ್ತಿದೆ’ ಎಂದು ವೈದ್ಯಕೀಯ ಶಿಕ್ಷಣ ಸಚಿವ ಡಾ.ಕೆ.ಸುಧಾಕರ್ ಹೇಳಿದರು.

ನಗರದಲ್ಲಿ ಬುಧವಾರ ಸುದ್ದಿಗಾರರೊಂದಿಗೆ ಮಾತನಾಡಿದ ಅವರು, ‘ರಾಜ್ಯದ ಆರ್ಥಿಕ ಪರಿಸ್ಥಿತಿಯಲ್ಲಿ ಜಿಎಸ್‌ಟಿ ಖೋತಾ ಆಗುತ್ತಿದೆ. ಕೇಂದ್ರದಿಂದ ನಮ್ಮ ಜಿಎಸ್‌ಟಿ ಪಾಲು ಪಡೆಯುವ ನಿಟ್ಟಿನಲ್ಲಿ ಈಗಾಗಲೇ ನಮ್ಮ ಕೇಂದ್ರ ಸಚಿವರು ಮತ್ತು ಮುಖ್ಯಮಂತ್ರಿ ಅವರು ಕೇಂದ್ರದೊಂದಿಗೆ ಮಾತುಕತೆ ನಡೆಸಿದ್ದಾರೆ. ಮನವಿ ಮಾಡಿ ನಮ್ಮ ಪಾಲು ಪಡೆದುಕೊಳ್ಳುತ್ತೇವೆ’ ಎಂದು ತಿಳಿಸಿದರು.

‘ಕಳೆದ ಆರು ತಿಂಗಳಿಂದ ವಿವಿಧ ದೇಶಗಳಂತೆ ರಾಜ್ಯದಲ್ಲಿ ಕೂಡ ಆರ್ಥಿಕ ಸ್ಥಿತಿ ಹದಗೆಟ್ಟಿದೆ. ಸಂಸದರ ಅನುದಾನದಲ್ಲಿ ಕೂಡ ಖೋತಾ ಆಗಿದೆ. ಆರ್ಥಿಕ ಇತಿಮಿತಿ ಒಳಗೆ ಮುಖ್ಯಮಂತ್ರಿ ಅವರು ಎಲ್ಲ ಶಾಸಕರ ಕ್ಷೇತ್ರಗಳ ಅಭಿವೃದ್ಧಿಗೆ ಅನುದಾನ ಕೊಡಲು ಪ್ರಾಮಾಣಿಕ ಪ್ರಯತ್ನ ಮಾಡುತ್ತಿದ್ದಾರೆ. ಸರ್ಕಾರಗಳು ಸುಸ್ಥಿರ, ಸುಭಿಕ್ಷವಾಗಿದ್ದಾಗಲೂ ಯಾವ ಸರ್ಕಾರವೂ ಸಕಾಲಕ್ಕೆ ಶಾಸಕರ ಕ್ಷೇತ್ರಾಭಿವೃದ್ಧಿ ಅನುದಾನ ನೀಡಿದ್ದಿಲ್ಲ’ ಎಂದು ಪ್ರಶ್ನೆಯೊಂದಕ್ಕೆ ಉತ್ತರಿಸಿದರು.

ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ವಾಟ್ಸ್ಆ್ಯಪ್, ಎಕ್ಸ್, ಫೇಸ್‌ಬುಕ್ ಮತ್ತು ಇನ್ಸ್ಟಾಗ್ರಾಂನಲ್ಲಿ ಪ್ರಜಾವಾಣಿ ಫಾಲೋ ಮಾಡಿ.