ಶನಿವಾರ, ಫೆಬ್ರವರಿ 22, 2020
19 °C
ಕಾಂಗ್ರೆಸ್‌ ಪ್ರಚಾರ ಸಭೆಯಲ್ಲಿ ಶಾಸಕ ಡಿ.ಕೆ.ಶಿವಕುಮಾರ್‌ ಭವಿಷ್ಯ

ಡಿ.9ರ ನಂತರ ಸರ್ಕಾರ ಪತನವಾಗಲಿದೆ: ಶಾಸಕ ಡಿ.ಕೆ. ಶಿವಕುಮಾರ್ ಭವಿಷ್ಯ

ಪ್ರಜಾವಾಣಿ ವಾರ್ತೆ Updated:

ಅಕ್ಷರ ಗಾತ್ರ : | |

prajavani

ಚಿಕ್ಕಬಳ್ಳಾಪುರ: 'ಡಿ.9 ರ ನಂತರ ರಾಜ್ಯದಲ್ಲಿ ಹೊಸ ಸರ್ಕಾರ ಅಧಿಕಾರಕ್ಕೆ ಬರುತ್ತದೆ. ಅನರ್ಹ ಶಾಸಕರು ಸೋತ ಮೇಲೆ ರಾಜ್ಯದ ಜನರಿಗೆ ನೆಮ್ಮದಿ ಸಿಗಲಿದೆ' ಎಂದು ಶಾಸಕ ಡಿ.ಕೆ. ಶಿವಕುಮಾರ್ ತಿಳಿಸಿದರು.

ತಾಲ್ಲೂಕಿನ ನಂದಿ ಗ್ರಾಮದಲ್ಲಿ ಚುನಾವಣೆ ಪ್ರಚಾರ ಸಭೆಯಲ್ಲಿ ಅವರು ಮಾತನಾಡಿ, 'ರಾಜಕಾರಣದಲ್ಲಿ ಕೆಟ್ಟ ಹುಳುಗಳನ್ನು ತೆಗೆದು ಹಾಕಬೇಕು. ಅಂತಹ ಕೆಲಸ ಮತದಾರರು ಮಾಡಬೇಕು. ಡಾ.ಕೆ. ಸುಧಾಕರ್ ಅವರನ್ನು ಗೆಲ್ಲಿಸಿದರೆ ಪ್ರಜಾಪ್ರಭುತ್ವಕ್ಕೆ ಅವಮಾನ' ಎಂದು ಹೇಳಿದರು.

'ಮುಖ್ಯ ಮಂತ್ರಿ ಬಿ.ಎಸ್. ಯಡಿಯೂರಪ್ಪ ಅವರು ಹೋದಲ್ಲಿ ಬಂದಲ್ಲಿ ಮತದಾರರಿಗೆ ಆಮಿಷ ಒಡ್ಡುತ್ತಿದ್ದಾರೆ. ಅವರ ವಿರುದ್ಧ ಚುನಾವಣಾ ಆಯೋಗ ಕ್ರಮ ತೆಗೆದುಕೊಳ್ಳಬೇಕು. ಅನರ್ಹರು ಹಣದ ಆಸೆಗೆ ಮಂತ್ರಿಸ್ಥಾನದ ಆಮಿಷಕ್ಕೆ ಬಲಿಯಾಗಿ ತಾಯಿಯಂತಹ ಕಾಂಗ್ರೆಸ್‌ ಪಕ್ಷಕ್ಕೆ ದ್ರೋಹ ಮಾಡಿದ್ದಾರೆ' ಎಂದು ವಾಗ್ದಾಳಿ ನಡೆಸಿದರು.

'ಜಾತ್ಯತೀತ ವ್ಯವಸ್ಥೆ ಉಳಿಸಿಕೊಳ್ಳಲು ಕುಮಾರಸ್ವಾಮಿ ಅವರಿಗೆ ಬೆಂಬಲ ಸೂಚಿಸಿ ಸರ್ಕಾರ ರಚಿಸಿಲಾಗಿತ್ತು, ಆದರೆ, ಯಡಿಯೂರಪ್ಪ ಏಳು ಬಾರಿ ಸಂಚು ರೂಪಿಸಿ ಕೊನೆಗೆ ಕಾಂಗ್ರೆಸ್ – ಜೆಡಿಎಸ್ ಸರ್ಕಾರವನ್ನು ಕೆಡುವಿದರು' ಎಂದು ಗುಡುಗಿದರು.

'ಬಿಜೆಪಿ ಸ್ನೇಹಿತರು ನನ್ನನ್ನು ಜೈಲಿಗೆ ಕಳುಹಿಸಿದಾಗ ಇದೇ ಜನ ನನ್ನನ್ನು ರಕ್ಷಿಸಿದ್ದೀರಿ. ಹೋರಾಟ, ಪೂಜಾ ಫಲದ ಮೂಲಕ ನಾನು ನಿಮ್ಮ ಸೇವೆಗಾಗಿ ಮತ್ತೆ ಬಂದಿದ್ದೀನಿ, ಮುಖ್ಯಮಂತ್ರಿ ಬಿ.ಎಸ್. ಯಡಿಯೂರಪ್ಪ ಅವರನ್ನು ಸುಧಾಕರ್ ಮಾರಿಕೊಳ್ಳುತ್ತಾನೆ. ಅಂತಹ ಕುಟಿಲ ಬುದ್ಧಿ ಉಳ್ಳ ವ್ಯಕ್ತಿ ಪರಿಸರ ಮಾಲಿನ್ಯ ನಿಯಂತ್ರಣ ಮಂಡಳಿ ಅಧ್ಯಕ್ಷರಾಗಿದ್ದಾಗ ಭ್ರಷ್ಟಾಚಾರ ಮಾಡಿದ್ದಾನೆ' ಎಂದು ಆರೋಪಿಸಿದರು.

ಪ್ರಜಾವಾಣಿ ಫೇಸ್‌ಬುಕ್ ಪುಟವನ್ನು ಲೈಕ್ ಮಾಡಿ, ಪ್ರಮುಖ ಸುದ್ದಿಗಳ ಅಪ್‌ಡೇಟ್ಸ್ ಪಡೆಯಿರಿ.

ಪ್ರಜಾವಾಣಿಯನ್ನು ಟ್ವಿಟರ್‌ನಲ್ಲಿ ಇಲ್ಲಿ ಫಾಲೋ ಮಾಡಿ.

ಟೆಲಿಗ್ರಾಂ ಮೂಲಕ ನಮ್ಮ ಸುದ್ದಿಗಳ ಅಪ್‌ಡೇಟ್ಸ್ ಪಡೆಯಲು ಇಲ್ಲಿ ಕ್ಲಿಕ್ ಮಾಡಿ.

ಪ್ರತಿಕ್ರಿಯಿಸಿ (+)

ಈ ವಿಭಾಗದಿಂದ ಇನ್ನಷ್ಟು