ಅಭಿವೃದ್ಧಿ ಸಂಸ್ಕೃತಿ ಪರಿಚಯಿಸಿದ ನಾಡಪ್ರಭು

7

ಅಭಿವೃದ್ಧಿ ಸಂಸ್ಕೃತಿ ಪರಿಚಯಿಸಿದ ನಾಡಪ್ರಭು

Published:
Updated:
ಕಾರ್ಯಕ್ರಮದಲ್ಲಿ ಭಾಗವಹಿಸಿದ್ದ ಗಣ್ಯರು.

ಗೌರಿಬಿದನೂರು: 'ಯುದ್ಧ ಪರಂಪರೆ ತೊರೆದು ಶಾಂತಿ, ಸಂಸ್ಕೃತಿಯ ಅಭಿವೃದ್ಧಿಯನ್ನು ನಾಡಿಗೆ ಪರಿಚಯಿಸಿದ ನಾಡಪ್ರಭು ಕೆಂಪೇಗೌಡ ಸಾರ್ವಕಾಲಿಕ ಸ್ಮರಣೀಯ ವ್ಯಕ್ತಿಯಾಗಿದ್ದಾರೆ’ ಎಂದು ಕರ್ನಾಟಕ ರಾಜ್ಯ ಸರ್ಕಾರಿ ನೌಕರರ ಸಂಘದ ರಾಜ್ಯ ಪರಿಷತ್‌ ಸದಸ್ಯ ಆರ್.ಜಿ.ಜನಾರ್ದನ್ ಹೇಳಿದರು.

ಪಟ್ಟಣದ ಡಾ.ಎಚ್.ಎನ್. ಕಲಾಭವನದಲ್ಲಿ ಬುಧವಾರ ತಾಲ್ಲೂಕು ಆಡಳಿತ, ತಾಲ್ಲೂಕು ಪಂಚಾಯಿತಿ, ನಗರಸಭೆ ಹಾಗೂ ಹಿಂದುಳಿದ ವರ್ಗಗಳ ಕಲ್ಯಾಣ ಇಲಾಖೆ ವತಿಯಿಂದ ಏರ್ಪಡಿಸಿದ್ದ ನಾಡಪ್ರಭು ಕೆಂಪೇಗೌಡ ಜಯಂತಿ ಕಾರ್ಯಕ್ರಮದಲ್ಲಿ ಮಾತನಾಡಿದರು.

'ಕೆಂಪೇಗೌಡರು ಬೆಂಗಳೂರಿನಂತಹ ಬೃಹತ್ ನಗರ ನಿರ್ಮಿಸಿ ಲಕ್ಷಾಂತರ ಜನರ ನೆಲೆಗೆ ಕಾರಣವಾಗಿದ್ದಾರೆ. ಕೆರೆ, ಕಟ್ಟೆಗಳನ್ನು ನಿರ್ಮಿಸಿ ನೀರಿನ ಆಸರೆ ಕೊಟ್ಟ ಆಧುನಿಕ ಭಗೀರಥ ಎನಿಸಿದ್ದಾರೆ’ ಎಂದು ಅವರು ತಿಳಿಸಿದ್ದಾರೆ.

‘ಒಕ್ಕಲಿಗರ ಆರಾಧ್ಯ ದೈವರಾಗಿರುವ ಕೆಂಪೇಗೌಡರು ಸಮುದಾಯದಲ್ಲಿ ಒಗ್ಗಟ್ಟು ಮತ್ತು ಚೈತನ್ಯ ತುಂಬಿದ್ದಾರೆ. ಅವರ ಆದರ್ಶಗಳನ್ನು ತಿಳಿದು ಎಲ್ಲರೂ ಸತ್ಪ್ರಜೆಗಳಾಗಿ ಬಾಳಬೇಕು’ ಎಂದು ಸಲಹೆ ನೀಡಿದರು.

ತಾಲ್ಲೂಕು ಪಂಚಾಯಿತಿ ಮಾಜಿ ಉಪಾಧ್ಯಕ್ಷ ಎಚ್.ಎನ್. ಪ್ರಕಾಶ್ ರೆಡ್ಡಿ ಮಾತನಾಡಿ, ಕೆಂಪೇಗೌಡರ ಜನಪರ ಸೇವೆಗಳು ಎಲ್ಲರಿಗೂ ಮಾದರಿಯಾಗಿವೆ. ಅವರು ನಿರ್ಮಿಸಿದ್ದ ಕೆರೆಗಳು ನಗರೀಕರಣದ ಪ್ರಭಾವದಲ್ಲಿ ಒತ್ತುವರಿಯಾಗಿ ಮಾಯವಾಗುತ್ತಿವೆ. ಇದು ಎಲ್ಲ ಸಂಕಷ್ಟಕ್ಕೂ ಕಾರಣವಾಗುತ್ತಿದೆ ಎಂದು ಆತಂಕ ವ್ಯಕ್ತಪಡಿಸಿದರು.

ತಹಶೀಲ್ದಾರ್ ಎಚ್.ಶ್ರೀನಿವಾಸ್ ಮಾತನಾಡಿ, 'ಸಮಾಜದ ಒಳಿತಿಗಾಗಿ, ಜನರ ಶ್ರೇಯೋಭಿವೃದ್ಧಿಗಾಗಿ ಶ್ರಮಿಸಿದ ಮಹಾನ್‌ ವ್ಯಕ್ತಿ ಕೆಂಪೇಗೌಡರು. ಅವರ ಯೋಜನೆ, ಶ್ರದ್ಧೆ, ಕಾಳಜಿ ಯುವಜನರಿಗೆ ಮಾದರಿಯಾಗಬೇಕು’ ಎಂದು ತಿಳಿಸಿದರು.

ಜಿಲ್ಲಾ ಪಂಚಾಯಿತಿ ಸದಸ್ಯೆ ಎ. ಅರುಂಧತಿ, ತಾಲ್ಲೂಕು ಪಂಚಾಯಿತಿ ಉಪಾಧ್ಯಕ್ಷೆ ರತ್ನಮ್ಮ, ಹಿಂದುಳಿದ ವರ್ಗಗಳ ಮತ್ತು ಅಲ್ಪಸಂಖ್ಯಾತರ ಕಲ್ಯಾಣ ಇಲಾಖೆಯ ವಿಸ್ತರಣಾಧಿಕಾರಿ ಎ.ಎನ್.ಆದಿನಾರಾಯಣಪ್ಪ, ತಾಲ್ಲೂಕು ಪಂಚಾಯಿತಿ ಕಾರ್ಯ ನಿರ್ವಹಣಾಧಿಕಾರಿ ಡಾ. ಸಿ.ಎನ್. ನಾರಾಯಣಸ್ವಾಮಿ, ಮುಖಂಡರಾದ ಜೆ.ವಿ.ಹನುಮೇಗೌಡ, ತಿಮ್ಮಾರೆಡ್ಡಿ, ವಿವೇಕಾನಂದರೆಡ್ಡಿ, ಲಕ್ಷ್ಮಿಮನೋಹರ್, ಶಾರದಮ್ಮ ಭಾಗವಹಿಸಿದ್ದರು.

ಬರಹ ಇಷ್ಟವಾಯಿತೆ?

 • 0

  Happy
 • 0

  Amused
 • 0

  Sad
 • 0

  Frustrated
 • 0

  Angry

Comments:

0 comments

Write the first review for this !