ಭಾನುವಾರ, ಸೆಪ್ಟೆಂಬರ್ 19, 2021
30 °C

ಲೋಕ ಅದಾಲತ್: ಸಾವಿರ ಪ್ರಕರಣ ಇತ್ಯರ್ಥ

ಪ್ರಜಾವಾಣಿ ವಾರ್ತೆ Updated:

ಅಕ್ಷರ ಗಾತ್ರ : | |

Prajavani

ಗೌರಿಬಿದನೂರು: ಕಾನೂನು ಸೇವೆಗಳ ಪ್ರಾಧಿಕಾರದಿಂದ ಆಯೋಜಿಸುವ ಮೆಗಾ ಲೋಕ ಅದಾಲತ್‍ನಲ್ಲಿ ರಾಜಿಸಂಧಾನದ ಮೂಲಕ ಪ್ರಕರಣಗಳನ್ನು ಇತ್ಯರ್ಥ ಪಡಿಸಿಕೊಳ್ಳುವುದರಿಂದ ಕಕ್ಷಿದಾರರ ಸಮಯ, ಹಣ ಉಳಿತಾಯವಾಗುತ್ತದೆ ಎಂದು ಹಿರಿಯ ಶ್ರೇಣಿ ನ್ಯಾಯಾಧೀಶೆ ರೇಣುಕಾ ದೇವಿದಾಸ್
ರಾಯ್ಕರ್ ತಿಳಿಸಿದರು.

ನಗರದ ನ್ಯಾಯಾಲಯದಲ್ಲಿ ತಾಲ್ಲೂಕು ಕಾನೂನು ಸಮಿತಿ, ವಕೀಲರ ಸಂಘ ಹಾಗೂ ಕಾನೂನು ಸೇವೆಗಳ ಪ್ರಾಧಿಕಾರದಿಂದ ಆಯೋಜಿಸಿದ್ದ ಮೆಗಾ ಲೋಕ ಅದಾಲತ್‌ಗೆ ಚಾಲನೆ ನೀಡಿ ಮಾತನಾಡಿದರು.

ಅನೇಕ ವರ್ಷಗಳಿಂದ ಇತ್ಯರ್ಥವಾಗದೆ ಇರುವ ಪ್ರಕರಣಗಳನ್ನು ರಾಜಿ ಸಂಧಾನದ ಮೂಲಕ ಇತ್ಯರ್ಥ ಮಾಡಲಾಗುತ್ತದೆ. ಸುಮಾರು 3 ಸಾವಿರ ಪ್ರಕರಣಗಳು ಅದಾಲತ್‌ಗೆ ಬಂದಿದ್ದು, ಅದರಲ್ಲಿ ರಾಜಿ ಸಂಧಾನದ ಮೂಲಕ ಒಂದು ಸಾವಿರಕ್ಕೂ ಹೆಚ್ಚು ಪ್ರಕರಣಗಳನ್ನು ಇತ್ಯರ್ಥ ಮಾಡಲಾಗಿದೆ. ಎಲ್ಲ ಪ್ರಕರಣಗಳಿಂದ ಒಂದು ಕೋಟಿ ಹಣ ಸಂಗ್ರಹವಾಗಿದೆ. ಈ ಬಾರಿ ವಿಶೇಷವಾಗಿ 100ಕ್ಕೂ ಹೆಚ್ಚು ಪ್ರಕರಣಗಳು ಸುಮಾರು 20 ವರ್ಷಗಳಿಂದ ಇತ್ಯರ್ಥವಾಗದೆ ಇರುವ ಪ್ರಕರಣಗಳನ್ನು ಸಂಧಾನ ಮೂಲಕ ಇತ್ಯರ್ಥ ಮಾಡಲಾಗಿದೆ
ಎಂದರು.

ಸಿವಿಲ್ ಕ್ರಿಮಿನಲ್, ಬ್ಯಾಂಕ್‍ ಪ್ರಕರಣ, ವಿಚ್ಛೇದನ ಪ್ರಕರಣ, ಜಮೀನು ವ್ಯಾಜ್ಯಗಳು, ರೈಲ್ವೆ ಟೆಲಿಕಾಂ ಪ್ರಕರಣಗಳು, ಶಿಕ್ಷಣ ಇಲಾಖೆಯ ಹುಟ್ಟಿದ ದಿನಾಂಕ (ಹುಟ್ಟಿದ ದಿನಾಂಕದ ಪ್ರಮಾಣ ಪತ್ರ) ಪ್ರಕರಣಗಳು ಇತ್ಯರ್ಥ ಮಾಡಲಾಗಿದೆ
ಎಂದರು.

ಅದಾಲತ್‌ನಲ್ಲಿ ವಕೀಲ ಸಂಘದ ಅಧ್ಯಕ್ಷ‌ ಡಿ.ರಾಮದಾಸ್, ಉಪಾಧ್ಯಕ್ಷ ಬಿ.ಲಿಂಗಪ್ಪ, ದಯಾನಂದ್, ನಾಗರಾಜು, ವಿ.ಗೋಪಾಲ್, ರಾಜಿ ಸಂಧಾನಕಾರರಾಗಿ ವಕೀಲರಾದ ವಸಂತ್‍ಕುಮಾರ್, ಶ್ರೀನಾಥ್, ನರಸಿಂಹಮೂರ್ತಿ, ವಕೀಲ ಮಲ್ಲಿಕಾರ್ಜುನ, ಎಚ್.ಎಲ್.ವೆಂಕಟೇಶ್, ಪಾರ್ಶ್ವನಾಥ್, ರಂಗನಾಥ್, ಗುಂಡಾಪುರ ಆನಂದ್, ನಟರಾಜು, ರಾಮಚಂದ್ರ, ದೀನೇಶ್, ಅಶೋಕ್ ಕುಮಾರ್,
ಆದಿನಾರಾಯಣಗೌಡ, ಚೆನ್ನಮಲ್ಲಿಕಾರ್ಜುನ, ಪ್ರಭಾಕರ್, ನ್ಯಾಯಾಲಯ ಸಿಬ್ಬಂದಿ ನರಸಿಂಹಮೂರ್ತಿ, ಸಂಧ್ಯಾ ಇದ್ದರು.

ತಾಜಾ ಮಾಹಿತಿ ಪಡೆಯಲು ಪ್ರಜಾವಾಣಿ ಟೆಲಿಗ್ರಾಂ ಚಾನೆಲ್ ಸೇರಿಕೊಳ್ಳಿ

ತಾಜಾ ಸುದ್ದಿಗಳಿಗಾಗಿ ಪ್ರಜಾವಾಣಿ ಆ್ಯಪ್ ಡೌನ್‌ಲೋಡ್ ಮಾಡಿಕೊಳ್ಳಿ: ಆಂಡ್ರಾಯ್ಡ್ ಆ್ಯಪ್ | ಐಒಎಸ್ ಆ್ಯಪ್

ಪ್ರಜಾವಾಣಿ ಫೇಸ್‌ಬುಕ್ ಪುಟವನ್ನುಫಾಲೋ ಮಾಡಿ.

ಈ ವಿಭಾಗದಿಂದ ಇನ್ನಷ್ಟು