ಚಿಕ್ಕಬಳ್ಳಾಪುರ: ಓಡಿಶಾ ಉಪಮುಖ್ಯಮಂತ್ರಿ ಪ್ರವತಿ ಪರಿದಾ ಅವರು ತಾಲ್ಲೂಕಿನ ನಂದಿಗಿರಿಧಾಮಕ್ಕೆ ಮಂಗಳವಾರ ಭೇಟಿ ನೀಡಿ, ಗಿರಿಧಾಮದ ಸೌಂದರ್ಯಕ್ಕೆ ಅಪಾರ ಮೆಚ್ಚುಗೆ ವ್ಯಕ್ತಪಡಿಸಿದರು.

ಪ್ರವತಿ ಪರಿದಾ ಅವರು ಓಡಿಶಾ ಸರ್ಕಾರದ ಮಹಿಳಾ ಮತ್ತು ಮಕ್ಕಳ ಕಲ್ಯಾಣ ಹಾಗೂ ಪ್ರವಾಸೋದ್ಯಮ ಸಚಿವರೂ ಆಗಿದ್ದಾರೆ.

ಮಧ್ಯಾಹ್ನ ಗಿರಿಧಾಮಕ್ಕೆ ಬಂದ ಅವರು ನೆಹರೂ ನಿಲಯಯದ ವಿವಿಐಪಿ ಕೊಠಡಿಯಲ್ಲಿ ತಂಗಿದರು. ನಂದಿಗಿರಿಧಾಮದ ಬಗ್ಗೆ ಮತ್ತು ಗಿರಿಧಾಮದಲ್ಲಿ ಇರುವ ವಸತಿ ಸಂಕೀರ್ಣಗಳ ಬಗ್ಗೆ ಮಾಹಿತಿ ಪಡೆದರು. ‘ಮಹನೀಯರು ತಂಗಿದ ಜಾಗದಲ್ಲಿ ನಾವು ತಂಗಿದ್ದೇವೆ. ಇದು ಖುಷಿಯ ವಿಷಯ’ ಎಂದರು.

ಮಯೂರ ಹೋಟೆಲ್ನಲ್ಲಿ ಊಟ ಸೇವಿಸಿದ ಪ್ರವತಿ ಪರಿದಾ ಊಟ ಮತ್ತು ಆತಿಥ್ಯದ ಬಗ್ಗೆ ಮೆಚ್ಚುಗೆ ವ್ಯಕ್ತಪಡಿಸಿದರು. ಸರ್ಕಾರಿ ಸ್ವಾಮ್ಯದಲ್ಲಿ ನಡೆಯುತ್ತಿರುವ ಹೋಟೆಲ್ನಲ್ಲಿ ಗುಣಮಟ್ಟವಿದೆ ಎಂದು ಪ್ರಶಂಸಿಸಿದರು.

ನಂತರ ಗಿರಿಧಾಮದ ಸಭಾಂಗಣದಲ್ಲಿ ಪ್ರಭಾಸಿ ಓಡಿಯಾ ಪರಿವಾರವು ಹಮ್ಮಿಕೊಂಡಿದ್ದ ಸಭೆಯಲ್ಲಿ ಪಾಲ್ಗೊಂಡರು. ಬೆಂಗಳೂರಿನಲ್ಲಿ ನೆಲೆಸಿರುವ ಓಡಿಶಾ ಮೂಲದ ಜನರು ಈ ಸಭೆ ಹಮ್ಮಿಕೊಂಡಿದ್ದರು.

ಕರ್ನಾಟಕ ಪ್ರವಾಸೋದ್ಯಮ ಅಭಿವೃದ್ಧಿ ನಿಗಮದ ನಂದಿಗಿರಿಧಾಮದ ವ್ಯವಸ್ಥಾಪಕ ಮನೋಜ್ ಹಾಗೂ ಸಿಬ್ಬಂದಿ ಆತಿಥ್ಯ ನೀಡಿದರು.

ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ವಾಟ್ಸ್ಆ್ಯಪ್, ಎಕ್ಸ್, ಫೇಸ್ಬುಕ್ ಮತ್ತು ಇನ್ಸ್ಟಾಗ್ರಾಂನಲ್ಲಿ ಪ್ರಜಾವಾಣಿ ಫಾಲೋ ಮಾಡಿ.