ಸೋಮವಾರ, 29 ಏಪ್ರಿಲ್ 2024
×
ADVERTISEMENT
ಈ ಕ್ಷಣ :
ADVERTISEMENT
ADVERTISEMENT

ಗೌರಿಬಿದನೂರ| ಜನತೆ ಬದಲಾವಣೆ ಬಯಸಿದ್ದಾರೆ: ಎನ್.ಜ್ಯೋತಿ ರೆಡ್ಡಿ

Published 24 ಏಪ್ರಿಲ್ 2023, 11:23 IST
Last Updated 24 ಏಪ್ರಿಲ್ 2023, 11:23 IST
ಅಕ್ಷರ ಗಾತ್ರ

ಗೌರಿಬಿದನೂರು : ತಾಲ್ಲೂಕಿನ ತೊಂಡೇಬಾವಿ ಹೋಬಳಿಯ ಬೇವಿನಹಳ್ಳಿ ಗ್ರಾಮ ಪಂಚಾಯತಿ ವ್ಯಾಪ್ತಿಯಲ್ಲಿನ ಎರ್ರಗುಂಟೆ ಗ್ರಾಮದಲ್ಲಿ ಕೆ.ಎಚ್.ಪಿ ತಂಡದ ಕಾರ್ಯಕರ್ತರ ಸಭೆ ನಡೆಸಿದರು.

ಈ ವೇಳೆ ಮಾಜಿ ಶಾಸಕಿ ಎನ್.ಜ್ಯೋತಿ ರೆಡ್ಡಿ ಮಾತನಾಡಿ, ಕ್ಷೇತ್ರದಲ್ಲಿ ಜನತೆ 25 ವರ್ಷಗಳ ಸರ್ವಾಧಿಕಾರಿ ದೋರಣೆಯ ಅಧಿಕಾರದಿಂದ ಬೇಸತ್ತಿದ್ದಾರೆ. ಬದಲಾವಣೆಯನ್ನು ಬಯಸಿ ಕೆ.ಎಚ್.ಪುಟ್ಟಸ್ವಾಮಿಗೌಡ ರನ್ನು ಬೆಂಬಲಿಸಲು ಮುಂದಾಗಿದ್ದಾರೆ. ಪ್ರತೀ ಗ್ರಾಮದಲ್ಲಿ ಗೌಡರ ಸೇವಾ ಕಾರ್ಯಗಳ ಪ್ರಯೋಜನ ಪಡೆದಿರುವ ಕುಟುಂಬಗಳಿವೆ. ಇದರಿಂದಾಗಿ ಈ ಬಾರಿಯ ಚುನಾವಣೆಯಲ್ಲಿ ಗೌಡರ ಪರವಾಗಿ ಸಾಕಷ್ಟು ಮಂದಿ ಕಾರ್ಯಕರ್ತರು ಸ್ವಯಂಪ್ರೇರಿತವಾಗಿ ಸೇರ್ಪಡೆಯಾಗುತ್ತಿದ್ದಾರೆ. ಬದಲಾವಣೆಯನ್ನು ಬಯಸಿರುವ ಜನತೆ ಕಾಂಗ್ರೆಸ್ ಗೆ ತಕ್ಕ ಪಾಠ ಕಲಿಸಲಿದ್ದಾರೆ ಎಂದು ಹೇಳಿದರು.

ಮುಖಂಡರಾದ ಬಿ.ವಿ.ಗೋಪಿನಾಥ್ ಮಾತನಾಡಿ, ಕ್ಷೇತ್ರದಲ್ಲಿ ಕಳೆದ ಮೂರು ದಶಕಗಳ ರಾಜಕಾರಣವನ್ನು ಅರಿತಿದ್ದೇವೆ. ಆದರೆ ಈ ಬಾರಿಯ ಚುನಾವಣೆಯಲ್ಲಿ ಜನತೆ ಒಮ್ಮತದಿಂದ ಗೌಡರ ಪರವಾಗಿ ಕಾರ್ಯನಿರ್ವಹಿಸಲು ಬದ್ದವಾಗಿದ್ದು, ವಿರೋಧಿಗಳಿಗೆ ತಕ್ಕ ಪಾಠ ಕಲಿಸುತ್ತಾರೆ. ಬದಲಾವಣೆಯನ್ನು ಬಯಸಿರುವ ಜನರ ನಿರೀಕ್ಷೆ ಸಾಕಾರಗೊಳ್ಳಲಿದೆ ಎಂದು ಹೇಳಿದರು.

ಇದೇ ವೇಳೆ ಮುಖಂಡರಾದ ಶ್ರೀನಿವಾಸಗೌಡ್ರು, , ಜೆ.ಕಾಂತರಾಜ್, ಗೋಪಿ, ಜಿ.ರೇವಣಸಿದ್ದೇಶ್ವರ, ಕೆ.ಎಸ್.ಚಂದ್ರಶೇಖರ್, ಕುದುರೆಬ್ಯಾಲ್ಯ ಕೃಷ್ಣಮೂರ್ತಿ, ನರಸಮ್ಮ, ನಿಜಲಿಂಗಪ್ಪ, ನರಸೇಗೌಡ, ಮೈಲಪ್ಪ, ಚಿಕ್ಕಮೈಲಾರಪ್ಪ, ದೊಡ್ಡಮೈಲಾರಪ್ಪ, ರಾಜು ವೈ.ಎನ್.ಲಘುಮಪ್ಪ, ಸಿದ್ದರಾಮಪ್ಪ, ಚಿಕ್ಕ ಅಂಜಿನಪ್ಪ, ಚಂದ್ರಣ್ಣ, ಶಾಂತಕುಮಾರ್, ನಾರಾಯಣಪ್ಪ, ಮೈಲಾರಪ್ಪ, ಶ್ರೀನಿವಾಸ, ಶಿವಪ್ಪ, ಗಂಗಾಧರ, ಶ್ರೀಕಾಂತ್, ಅಂಜಿನಪ್ಪ, ಎಚ್.ಗುರಪ್ಪ, ಅಶ್ವತಪ್ಪ, ಕದಿರೇಗೌಡ, ಶಿವಾಜಿರಾವ್, ಕೃಷ್ಣ, ರಘುನಾಥ್, ವೆಂಕಟೇಶಪ್ಪ, ವೆಂಕಟೇಶ್, ಸಿದ್ದೇಗೌಡ, ಸೋಮೇಶಪ್ಪ, ಶ್ರೀರಾಮಪ್ಪ, ಉಮಾಶಂಕರ್, ನಾಗರಾಜ್, ಮಹದೇವ್, ನಾಗಪ್ಪ, ಬಸವರಾಜ್, ಗೋವಿಂದರೆಡ್ಡಿ, ಬಾಬುರೆಡ್ಡಿ, ಶಂಕ್ರಪ್ಪ ಇದ್ದರು.

ಗೌರಿಬಿದನೂರು ತಾಲ್ಲೂಕಿನ ಯರ್ರಗುಂಟೆ ಗ್ರಾಮದಲ್ಲಿ ಕಾರ್ಯಕರ್ತರೊಂದಿಗೆ ಮಾಜಿ ಶಾಸಕಿ ಎನ್.ಜ್ಯೋತಿರೆಡ್ಡಿ
ಗೌರಿಬಿದನೂರು ತಾಲ್ಲೂಕಿನ ಯರ್ರಗುಂಟೆ ಗ್ರಾಮದಲ್ಲಿ ಕಾರ್ಯಕರ್ತರೊಂದಿಗೆ ಮಾಜಿ ಶಾಸಕಿ ಎನ್.ಜ್ಯೋತಿರೆಡ್ಡಿ

ತಾಜಾ ಸುದ್ದಿಗಾಗಿ ಪ್ರಜಾವಾಣಿ ಟೆಲಿಗ್ರಾಂ ಚಾನೆಲ್ ಸೇರಿಕೊಳ್ಳಿ | ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ನಮ್ಮ ಫೇಸ್‌ಬುಕ್ ಪುಟ ಫಾಲೋ ಮಾಡಿ.

ADVERTISEMENT
ADVERTISEMENT
ADVERTISEMENT
ADVERTISEMENT
ADVERTISEMENT