ಗುರುವಾರ, 28 ಮಾರ್ಚ್ 2024
×
ADVERTISEMENT
ಈ ಕ್ಷಣ :
ADVERTISEMENT
ADVERTISEMENT

ಸಿಪಿಎಂನಿಂದ ಮತಯಾಚನೆ

Last Updated 2 ಏಪ್ರಿಲ್ 2023, 6:26 IST
ಅಕ್ಷರ ಗಾತ್ರ

ಗುಡಿಬಂಡೆ: ಬಾಗೇಪಲ್ಲಿ ವಿಧಾನಸಭಾ ಕ್ಷೇತ್ರದ ಸಿಪಿಎಂ ಅಭ್ಯರ್ಥಿ ಡಾ.ಅನಿಲ್ ಕುಮಾರ್ ಅವರು, ಕಾರ್ಯಕರ್ತರು ಮುಖಂಡರೊಂದಿಗೆ ಸೋಮೇನಹಳ್ಳಿ ಹೋಬಳಿಯಲ್ಲಿ ಮತಯಾಚನೆ ನಡೆಸಿದರು.

ಸಿಪಿಎಂ ಪಕ್ಷದಿಂದ ಮನೆ ಮನೆಗೂ ತೆರಳಿ ಮತಯಾಚನೆ ಮಾಡಲಾಗುತ್ತಿದೆ. ಮತದಾರರು ಉತ್ತಮ ರೀತಿಯಲ್ಲಿ ಸ್ಪಂದಿಸುತ್ತಿದ್ದು ಬಾಗೇಪಲ್ಲಿ ವಿಧಾನಸಭಾ ಕ್ಷೇತ್ರದಲ್ಲಿ ಈ ಬಾರಿ ಕೆಂಪು ಬಾವುಟ ಹಾರಲಿದೆ ಎಂದು ವಿಶ್ವಾಸ ವ್ಯಕ್ತಪಡಿಸಿದರು.

ಬಾಗೇಪಲ್ಲಿ ಕ್ಷೇತ್ರದಲ್ಲಿ ಅನೇಕ ದಶಕಗಳಿಂದ ಸಿಪಿಎಂ ಜನಸಾಮಾನ್ಯರಿಗಾಗಿ ಹೋರಾಟ ನಡೆಸಿದೆ. ಪಕ್ಷ ಅಧಿಕಾರದಲ್ಲಿದ್ದಾಗ ನೂರಾರು ಶಾಶ್ವತ ಯೋಜನೆಗಳನ್ನು ಮಾಡಲಾಗಿದೆ ಎಂದರು.

ಕೂಲಿಕಾರರ, ಶ್ರಮಿಕರ, ರೈತರ, ಜನಸಾಮಾನ್ಯರ ಹಾಗೂ ಶೋಷಿತರ ಪರ ಹೋರಾಟ ನಡೆಸುತ್ತಿರುವ ಕಮ್ಯುನಿಸ್ಟ್ ಪಕ್ಷದ ಹಿತಾಸಕ್ತಿಯನ್ನು ಕಾಪಾಡುವಲ್ಲಿ ವಿಫಲವಾಗಿರುವ ಕೆಲ ನಾಯಕರು ಸ್ವಹಿತಾಸಕ್ತಿಗಾಗಿ ಪಕ್ಷ ತೊರೆದಿದ್ದಾರೆ ಎಂದರು.

ಎಲ್ಲ ರಾಜಕೀಯ ಪಕ್ಷಗಳ ನಾಯಕರು ಪಕ್ಷಾಂತರ ಮಾಡುವುದು ಸರ್ವೇಸಾಮಾನ್ಯ. ಆದರೆ ಕಮ್ಯುನಿಸ್ಟ್ ಪಕ್ಷದಲ್ಲಿದ್ದ ನಾಯಕರು ವೈಯಕ್ತಿಕ ಅಭಿವೃದ್ಧಿಗಾಗಿ ಕ್ಷೇತ್ರದ ಜನಸಾಮಾನ್ಯರ ಪರ ನಿಲ್ಲುವ ಪಕ್ಷ ಬಿಟ್ಟು ಅನ್ಯ ಪಕ್ಷಗಳತ್ತ ಮುಖ ಮಾಡಿರುವುದು ದುರದೃಷ್ಟಕರ ಎಂದರು.

ಸಿಪಿಎಂ ಪಕ್ಷವು ಕೇವಲ ಅಧಿಕಾರಕ್ಕಾಗಿ ಸ್ಥಾಪನೆಯಾದ ಪಕ್ಷವಲ್ಲ. ಇದು ಜನಸಾಮಾನ್ಯರ, ಶ್ರಮಿಕರ, ಕೂಲಿಕಾರರ, ರೈತರ, ಶೋಷಿತರ ಸರ್ವಾಂಗೀಣ ಅಭಿವೃದ್ಧಿಗಾಗಿ ಅನೇಕ ಹೋರಾಟಗಳ ಮೂಲಕ ರಚನೆಯಾದ ಪಕ್ಷ. ಇಂತಹ ಪಕ್ಷದಲ್ಲಿದ್ದ ಕೆಲ ನಾಯಕರ ಮನಸ್ಥಿತಿ ಮತ್ತು ಜೀವನ ಕ್ರಮ ಬದಲಾಗಿದ್ದರಿಂದ ಪಕ್ಷ ತೊರೆಯುವ ಮೂಲಕ ತಮ್ಮೊಳಗಿನ ಮನಸ್ಥಿತಿಯನ್ನು ಹೊರಹಾಕಿದ್ದಾರೆ ಎಂದರು.

ಸಿಪಿಎಂ ಜಿಲ್ಲಾ ಕಾರ್ಯದರ್ಶಿ ಮುನಿವೆಂಕಟಪ್ಪ, ತಾಲ್ಲೂಕು ಕಾರ್ಯದರ್ಶಿ ಜಯರಾಮರೆಡ್ಡಿ, ತಾ.ಸಮಿತಿ ಸದಸ್ಯ ಆದಿನಾರಾಯಣಸ್ವಾಮಿ, ಸೋಮೇನಹಳ್ಳಿ ಲಕ್ಷ್ಮಿನಾರಾಯಣ, ಉಪ್ಪಾರಹಳ್ಳಿ ಶ್ರೀನಿವಾಸ್, ಎಲ್.ಎ.ಬಾಬು, ಗಂಗರಾಜು, ಶೀನಪ್ಪ, ಅಶ್ವತ್ಥಪ್ಪ, ರಮಣ, ನರಸಿಂಹಮೂರ್ತಿ ಇದ್ದರು.

ತಾಜಾ ಸುದ್ದಿಗಾಗಿ ಪ್ರಜಾವಾಣಿ ಟೆಲಿಗ್ರಾಂ ಚಾನೆಲ್ ಸೇರಿಕೊಳ್ಳಿ | ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ನಮ್ಮ ಫೇಸ್‌ಬುಕ್ ಪುಟ ಫಾಲೋ ಮಾಡಿ.

ADVERTISEMENT
ADVERTISEMENT
ADVERTISEMENT
ADVERTISEMENT