ಜಡಿ ಹಿಡಿದ ಮಳೆ, ಗರಿಗೆದರಿದ ಆಸೆ

5
ಮೋಡ, ಮಳೆಯ ಜುಗಲ್ಬಂದಿಯ ಪರಿಣಾಮ ಚಳಿ ಹೆಚ್ಚಿಸಿದ ತಂಗಾಳಿ

ಜಡಿ ಹಿಡಿದ ಮಳೆ, ಗರಿಗೆದರಿದ ಆಸೆ

Published:
Updated:
Deccan Herald

ಚಿಕ್ಕಬಳ್ಳಾಪುರ: ಕಳೆದ ಒಂದು ತಿಂಗಳಿಂದ ಜಿಲ್ಲೆಯಲ್ಲಿ ಕಾಣೆಯಾಗಿದ್ದ ಮಳೆ ಏಕಾಏಕಿ ಕಾಣಿಸಿಕೊಂಡು ಜಡಿ ಹಿಡಿದಿದೆ. ಕಳೆದ ಮೂರ್ನಾಲ್ಕು ದಿನಗಳಿಂದ ಮೋಡ ಮುಸುಕಿದ ವಾತಾವರಣ ಮನೆ ಮಾಡಿದ್ದು, ಅದರ ನಡುವೆಯೇ ಆಗಾಗ ವರುಣ ಸಿಂಚನವಾಗುತ್ತಿದೆ.

ಮೋಡ, ಮಳೆಯ ಈ ಜುಗಲ್ಬಂದಿಯ ಪರಿಣಾಮ ತಂಗಾಳಿ ಚಳಿಯನ್ನು ಹೆಚ್ಚಿಸಿದೆ. ಬೆಳಿಗ್ಗೆಯಿಂದಲೇ ಕವಿದ ಮೋಡಗಳು ಸಂಜೆಯಾದರೂ ಕರಗಲೇ ಇಲ್ಲ. ಆಗಾಗ ಸುರಿಯುವ ಮಳೆ, ಸುಳಿ ಸುಳಿದು ಬರುವ ತಂಗಾಳಿ ಬೆಚ್ಚನೆಯ ಉಡುಗೆಗಳನ್ನು ಹೊರಗೆ ತೆಗೆಯುವಂತೆ ಮಾಡಿವೆ.

ಈ ವರ್ಷ ಮುಂಗಾರು ಆರಂಭದಲ್ಲಿ ಚೆನ್ನಾಗಿತ್ತು. ಜೂನ್ ಮೊದಲ ವಾರದ ಬಳಿಕ ಮಳೆ ಕೊರತೆ ಕಾಣಿಸಿಕೊಳ್ಳುತ್ತ ಬಂದಿತ್ತು. ಇದರಿಂದಾಗಿ ಜಿಲ್ಲೆಯಲ್ಲಿ ಬಿತ್ತನೆ ಪ್ರಮಾಣ ಈ ಬಾರಿ ಶೇ40ರಷ್ಟಾಗಿತ್ತು. ಮುಂಚಿತವಾಗಿ ಬಿತ್ತನೆಯಾಗಿದ್ದ ಬೆಳೆಗಳಿಗೆ ಮಳೆಯ ಕೊರತೆಯಿಂದಾಗಿ ನೀರಿನ ಕೊರತೆ ಕಾಣಿಸಿಕೊಂಡು ರೈತರ ಮೊಗದಲ್ಲಿ ಆತಂಕದ ಛಾಯೆ ಮೂಡಿತ್ತು.

ಇದೀಗ ಪುನಃ ಕಾಣಿಸಿಕೊಂಡಿರುವ ಮಳೆಯಿಂದಾಗಿ ರೈತಾಪಿ ವರ್ಗದಲ್ಲಿ ಆಸೆ ಚಿಗುರೊಡೆದಿದ್ದು, ಉತ್ತಮ ಮಳೆ ಸುರಿದರೆ ರಾಗಿ, ಮುಸುಕಿನ ಜೋಳ ಬಿತ್ತನೆ ಮಾಡಬಹುದೆಂದು ರೈತರು ಚಾತಕ ಪಕ್ಷಿಗಳಂತೆ ಆಕಾಶದತ್ತ ದೃಷ್ಟಿ ನೆಟ್ಟಿದ್ದಾರೆ.

ಬರಹ ಇಷ್ಟವಾಯಿತೆ?

 • 1

  Happy
 • 0

  Amused
 • 0

  Sad
 • 0

  Frustrated
 • 0

  Angry

Comments:

0 comments

Write the first review for this !