ಭಾನುವಾರ, 19 ಮೇ 2024
×
ADVERTISEMENT
ಈ ಕ್ಷಣ :
ADVERTISEMENT
ADVERTISEMENT

ಐಮರೆಡ್ಡಿಹಳ್ಳಿ: ರಥೋತ್ಸವ 10ಕ್ಕೆ

Published 7 ಮೇ 2024, 13:54 IST
Last Updated 7 ಮೇ 2024, 13:54 IST
ಅಕ್ಷರ ಗಾತ್ರ

ಚಿಂತಾಮಣಿ: ತಾಲ್ಲೂಕಿನ ಊಲವಾಡಿ ಗ್ರಾಮ ಪಂಚಾಯಿತಿ ವ್ಯಾಪ್ತಿಯ ಐಮರೆಡ್ಡಿಹಳ್ಳಿಯಲ್ಲಿ ನೆರೆಸಿರುವ ಕಲ್ಯಾಣ ವೆಂಕಟೇಶ್ವರಸ್ವಾಮಿ  ರಥೋತ್ಸವವು ಮೇ 10 ರಂದು ಶುಕ್ರವಾರ ವಿಜೃಂಭಣೆಯಿಂದ ನೆರವೇರಲಿದೆ.

ರಥೋತ್ಸವ ಅಂಗವಾರಿ ಎರಡು ದಿನಗಳು ವಿವಿಧ ಧಾರ್ಮಿಕ ಕೈಂಕರ್ಯ ಶ್ರದ್ಧಾ,ಭಕ್ತಿ ಹಾಗೂ ಶಾಸ್ತ್ರೋಕ್ತವಾಗಿ ನಡೆಯಲಿವೆ. ಮೇ 9ರ ಬೆಳಗ್ಗೆ 7 ಗಂಟೆಗೆ ವಿಶ್ವಕಸೇನಾ ಮಹಾಮಂಗಳಾರತಿ ಪೂಜೆ, ವಾಸುದೇವ ಪುಣ್ಯಾವಾಚನ, ಮಹಾಸಂಕಲ್ಪ, ಮೃತ್ಸಮಗ್ರಣ, ಧ್ವಜಾರೋಣ, ಅಂಕುರಾರ್ಪಣೆ, ರಕ್ಷಾಬಂಧನ, ಮಹಾಮಂಗಳಾರತಿ, ತೀರ್ಥಪ್ರಸಾದ ವಿನಿಯೋಗ. ರಾತ್ರಿ 7ಕ್ಕೆ ಕಲ್ಯಾಣೋತ್ಸವ ನಡೆಯಲಿದೆ.

10ರಂದು ಬೆಳಗ್ಗೆ 8 ಕ್ಕೆ ತಿರುಕಲ್ಯಾಣೋತ್ಸವ, ಮೂಲಸ್ವಾಮಿಗೆ ಫಲಪಂಚಾಮೃತಾಭಿಷೇಕ, ಮಧ್ಯಾಹ್ನ 1.30 ಗಂಟೆಗೆ ರಥೋತ್ಸವ, ಅನ್ನಸಂತರ್ಪಣೆ, ಸಂಜೆ 6 ಗಂಟೆಗೆ ಧೋಳೋತ್ಸವ ನಡೆಯಲಿದೆ ಎಂದು ದೇವಸ್ಥಾನದ ಪ್ರಕಟಣೆ ತಿಳಿಸಿದೆ.

ತಾಜಾ ಸುದ್ದಿಗಾಗಿ ಪ್ರಜಾವಾಣಿ ಟೆಲಿಗ್ರಾಂ ಚಾನೆಲ್ ಸೇರಿಕೊಳ್ಳಿ | ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ನಮ್ಮ ಫೇಸ್‌ಬುಕ್ ಪುಟ ಫಾಲೋ ಮಾಡಿ.

ADVERTISEMENT
ADVERTISEMENT
ADVERTISEMENT
ADVERTISEMENT
ADVERTISEMENT