ಶುಕ್ರವಾರ, 19 ಜುಲೈ 2024
×
ADVERTISEMENT
ಈ ಕ್ಷಣ :
ADVERTISEMENT

ಬಿ.ಕಾಂ ಪದವಿ: ಬಿ.ವಿ.ಸುನೀತಾಗೆ ದ್ವಿತೀಯ ರ‍್ಯಾಂಕ್‌

Published 10 ಜುಲೈ 2024, 14:42 IST
Last Updated 10 ಜುಲೈ 2024, 14:42 IST
ಅಕ್ಷರ ಗಾತ್ರ

ಚಿಂತಾಮಣಿ: ನಗರದ ವಿಕ್ರಮ್ ಕಾಲೇಜಿನ ವಿದ್ಯಾರ್ಥಿನಿ ಬಿ.ವಿ.ಸುನೀತ ಬೆಂಗಳೂರು ಉತ್ತರ ವಿಶ್ವವಿದ್ಯಾಲಯದ ಬಿ.ಕಾಂ ಪರೀಕ್ಷೆಯಲ್ಲಿ ದ್ವಿತೀಯ ರ‍್ಯಾಂಕ್‌ ಪಡೆದಿದ್ದಾರೆ.

ಸುನೀತ ಶೇ 96.22 ಫಲಿತಾಂಶ ಪಡೆದಿದ್ದಾರೆ. ತಾಲ್ಲೂಕಿನ ಅಂಬಾಜಿದುರ್ಗ ಹೋಬಳಿಯ ಬೂರಮಾಕಲಹಳ್ಳಿಯ ಕೃಷಿ ಕುಟುಂಬಕ್ಕೆ ಸೇರಿದ ವೆಂಕಟೇಶಪ್ಪ ಮತ್ತು ದ್ಯಾವಮ್ಮ ದಂಪತಿಯ ಮಗಳಾಗಿದ್ದಾರೆ. ಪೋಷಕರ ಸಹಕಾರ, ಪರಿಶ್ರಮ, ಉಪನ್ಯಾಸಕರ ಸಹಕಾರದಿಂದ ಉನ್ನತ ಫಲಿತಾಂಶ ಗಳಿಸಲು ಸಾಧ್ಯವಾಯಿತು ಎಂದು ಸುನೀತಾ ಹೇಳಿದರು.

ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ವಾಟ್ಸ್ಆ್ಯಪ್, ಎಕ್ಸ್, ಫೇಸ್‌ಬುಕ್ ಮತ್ತು ಇನ್‌ಸ್ಟಾಗ್ರಾಂನಲ್ಲಿ ಪ್ರಜಾವಾಣಿ ಫಾಲೋ ಮಾಡಿ.

ADVERTISEMENT
ADVERTISEMENT
ADVERTISEMENT
ADVERTISEMENT