ಶುಕ್ರವಾರ, 26 ಏಪ್ರಿಲ್ 2024
×
ADVERTISEMENT
ಈ ಕ್ಷಣ :
ADVERTISEMENT
ADVERTISEMENT

ಚಿಕ್ಕಬಳ್ಳಾಪುರ | ಸರಳವಾಗಿ ನಾಗರ ಪಂಚಮಿ ಆಚರಣೆ

Last Updated 25 ಜುಲೈ 2020, 9:40 IST
ಅಕ್ಷರ ಗಾತ್ರ

ಚಿಕ್ಕಬಳ್ಳಾಪುರ: ಶ್ರಾವಣ ಮಾಸದ ಮೊದಲ ಹಬ್ಬವಾದ ನಾಗರ ಪಂಚಮಿಯನ್ನು ಜಿಲ್ಲೆಯಾದ್ಯಂತ ಶನಿವಾರ ಶ್ರದ್ಧಾಭಕ್ತಿಯಿಂದ ಆಚರಿಸಲಾಯಿತು.

ಬೆಳಿಗ್ಗೆಯೇ ಮಾಸ್ಕ್‌ಧಾರಿ ಜನರು ನಾಗರ ಕಲ್ಲುಗಳಿಗೆ ಪೂಜೆ ಸಲ್ಲಿಸಿ ಹಾಲು ಎರೆಯುತ್ತಿದ್ದ ದೃಶ್ಯ ಎಲ್ಲೆಡೆ ಕಂಡುಬಂತು. ಕೋವಿಡ್‌ ಕಾರಣಕ್ಕೆ ಈ ಬಾರಿ ಪಂಚಮಿ ಹಬ್ಬದಲ್ಲಿ ಸಡಗರ ತೋರದೆ ಸರಳವಾಗಿ ಆಚರಿಸಲಾಯಿತು.

ನಗರದ ಎಚ್‌.ಎಸ್‌.ಗಾರ್ಡನ್‌ನಲ್ಲಿರುವ ಸಾಯಿಬಾಬಾ, ಸುಬ್ರಹ್ಮಣ್ಯೇಶ್ವರ ಮತ್ತು ಶನೈಶ್ವರ ದೇವಸ್ಥಾನ, ಗಾಂಧಿಕೊಳಾಯಿ ರಸ್ತೆಯಲ್ಲಿರುವ ಈಶ್ವರ ದೇವಾಲಯ, ಜೀವಾಂಜನೇಯ ದೇವಸ್ಥಾನ, ಪೇಟೆ ಆಂಜನೇಯ ದೇವಾಲಯ, ಸುಬ್ಬರಾಯನಪೇಟೆಯಲ್ಲಿರುವ ಸುಬ್ರಹ್ಮಣ್ಯೇಶ್ವರ ಸ್ವಾಮಿ ದೇವಸ್ಥಾನ, ನಗರದ ಹೊರವಲದ ರೈಲ್ವೆ ಗೇಟ್‌ ಬಳಿ ಇರುವ ನಾಗಲ ಮುದ್ದಮ್ಮ ದೇವಸ್ಥಾನ ಸೇರಿದಂತೆ ಪ್ರಮುಖ ದೇವಸ್ಥಾನ ಬಳಿ ಪಂಚಮಿ ಹಬ್ಬದ ಆಚರಣೆಗಳು ಗೋಚರಿಸಿದವು.

ಕೋವಿಡ್‌ ಕಾರಣಕ್ಕೆ ದೇಗುಲಗಳಲ್ಲಿ ಯಾವುದೇ ಧಾರ್ಮಿಕ ಕೈಂಕರ್ಯಗಳಿಗೆ ಅವಕಾಶವಿರಲಿಲ್ಲ. ಮಹಿಳೆಯರು ಶ್ರದ್ಧಾಭಕ್ತಿಯಿಂದ ನಾಗರ ಕಲ್ಲುಗಳಿಗೆ ಮತ್ತು ಹುತ್ತಗಳಿಗೆ ವಿಶೇಷ ಪೂಜೆ ಸಲ್ಲಿಸಿ, ನೈವೇದ್ಯ ಅರ್ಪಿಸಿ, ಹಾಲು ಎರೆದು ತಮ್ಮ ಇಷ್ಟಾರ್ಥ ಸಿದ್ಧಿಗಾಗಿ ಪ್ರಾರ್ಥಿಸುತ್ತಿದ್ದರು.

ತಾಜಾ ಸುದ್ದಿಗಾಗಿ ಪ್ರಜಾವಾಣಿ ಟೆಲಿಗ್ರಾಂ ಚಾನೆಲ್ ಸೇರಿಕೊಳ್ಳಿ | ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ನಮ್ಮ ಫೇಸ್‌ಬುಕ್ ಪುಟ ಫಾಲೋ ಮಾಡಿ.

ADVERTISEMENT
ADVERTISEMENT
ADVERTISEMENT
ADVERTISEMENT
ADVERTISEMENT