ಶುಕ್ರವಾರ, 26 ಏಪ್ರಿಲ್ 2024
×
ADVERTISEMENT
ಈ ಕ್ಷಣ :
ADVERTISEMENT
ADVERTISEMENT

ಮುಕ್ಕೋಟಿ ದ್ವಾದಶಿ ಗರುಡೋತ್ಸವ

ಆಲಂಬಗಿರಿಯ ಶ್ರೀಕಲ್ಕಿ ಲಕ್ಷ್ಮಿ ವೆಂಕಟರಮಣಸ್ವಾಮಿ ದೇಗುಲದಲ್ಲಿ ವಿಶೇಷ ಪೂಜೆ
Last Updated 27 ಡಿಸೆಂಬರ್ 2020, 1:54 IST
ಅಕ್ಷರ ಗಾತ್ರ

ಚಿಂತಾಮಣಿ: ತಾಲ್ಲೂಕಿನ ಪುರಾಣ ಪ್ರಸಿದ್ಧ ಯಾತ್ರಾಸ್ಥಳ ಆಲಂಬಗಿರಿಯ ಶ್ರೀಕಲ್ಕಿ ಲಕ್ಷ್ಮೀ ವೆಂಕಟರಮಣಸ್ವಾಮಿ ದೇವಾಲಯದಲ್ಲಿ ಶನಿವಾರ ಮುಕ್ಕೋಟಿ ದ್ವಾದಶಿ ಪ್ರಯುಕ್ತ ವಿಶೇಷ ಪೂಜಾ ಕೈಂಕರ್ಯಗಳು ವಿಜೃಂಭಣೆಯಿಂದ ನೆರವೇರಿದವು.

ಮುಕ್ಕೋಟಿ ದ್ವಾದಶಿ ಸಂದರ್ಭದಲ್ಲಿ ದೇವರಿಗೆ ವಿಶೇಷ ಅಲಂಕಾರ ಮಾಡಲಾಗಿತ್ತು. ಗರುಡವಾಹನದಲ್ಲಿ ಶ್ರೀದೇವಿ- ಭೂದೇವಿಸಮೇತ ವೆಂಕಟರಮಣಸ್ವಾಮಿಯ ಉತ್ಸವ ಮೂರ್ತಿಯನ್ನು ಕುಳ್ಳರಿಸಿ ವಿಶೇಷ ಪೂಜೆ ಸಲ್ಲಿಸಲಾಯಿತು. ಧಾರ್ಮಿಕ ವಿಧಿವಿಧಾನಗಳನ್ನು ಶಾಸ್ತ್ರೋಕ್ತವಾಗಿ ಸಮರ್ಪಿಸಲಾಯಿತು. ನಂತರ ಅಲಂಕರಿಸಿದ ಗರುಡೋತ್ಸವವನ್ನು ಊರಿನ ರಥದ ಬೀದಿಯಲ್ಲಿ ಮಂಗಳವಾದ್ಯ ಮತ್ತು ನಾಮ ಸಂಕೀರ್ತನೆಯೊಂದಿಗೆ ಮೆರವಣಿಗೆ ಮಾಡಲಾಯಿತು.

ಸದ್ಗುರು ಶ್ರೀಯೋಗಿನಾರೇಯಣ ಯತೀಂದ್ರರ ಉತ್ಸವ ಮೂರ್ತಿಯ ಮೆರವಣಿಗೆನಡೆಯಿತು. ಗರುಡೋತ್ಸವದಲ್ಲಿ ಕೈವಾರ ಕ್ಷೇತ್ರದ ಧರ್ಮಾಧಿಕಾರಿ ಡಾ.ಎಂ.ಆರ್. ಜಯರಾಂ ನೇತೃತ್ವದಲ್ಲಿ ಭಜನಾ ತಂಡಗಳು ಭಾಗವಹಿಸಿದ್ದವು. ಉತ್ಸವದುದ್ದಕ್ಕೂ ಭಜನೆ ಮಾಡುತ್ತಾ ಸಾಗಿದ ದೃಶ್ಯವು
ಮನಮೋಹಕವಾಗಿತ್ತು.

ನಾಮ ಸಂಕೀರ್ತನೆಯು ಭಕ್ತಿಭಾವದ ಸಂಚಲನವನ್ನುಂಟು ಮಾಡಿತು. ಉತ್ಸವದಲ್ಲಿ ವಿಶೇಷ ನಾದಸ್ವರ ವಾದನ ಮೂಡಿ ಬಂದಿತು. ಗರುಡೋತ್ಸವದ ಸಮಯದಲ್ಲಿ ಗರುಡಪಕ್ಷಿಯು ಪ್ರದಕ್ಷಿಣೆ ಹಾಕಿದ್ದು ಭಕ್ತರಲ್ಲಿ ಭಕ್ತಿಯ ರೋಮಾಂಚನ ಮೂಡಿಸಿತು. ದೇವಾಲಯದ ಒಳಗೆ ಹಾಗೂ ಹೊರಗೆ ವಿಶೇಷ
ಅಲಂಕಾರ ಮಾಡಲಾಗಿತ್ತು.

ಸ್ಥಳೀಯ ಸುತ್ತಮುತ್ತಲ ಗ್ರಾಮಗಳು, ಜಿಲ್ಲೆಯ ವಿವಿಧೆಡೆ ಹಾಗೂ ಬೆಂಗಳೂರಿನಿಂದ ಆಗಮಿಸಿದ್ದ ಭಕ್ತರು ಗರುಡೋತ್ಸವದಲ್ಲಿ ಭಾಗವಹಿಸಿದ್ದರು. ಬೆಳಿಗ್ಗೆಯಿಂದಲೇ ಭಕ್ತರು ದೇವಾಲಯದಲ್ಲಿ ಹಣ್ಣು ಕಾಯಿ ನೀಡಿ ಪೂಜೆ ಮಾಡಿಸುತ್ತಿದ್ದರು. ಕೈವಾರ ಯೋಗಿನಾರೇಯಣ ಮಠದಿಂದ ಭಕ್ತರಿಗೆ ಪ್ರಸಾದದ ವ್ಯವಸ್ಥೆ ಮಾಡಲಾಗಿತ್ತು.

ಶ್ರೀಯೋಗಿನಾರೇಯಣ ಸಂಕೀರ್ತನಾ ಯೋಜನೆಯ ಸಂಚಾಲಕ ಬಾಲಕೃಷ್ಣ ಭಾಗವತರ್, ಮಠದ ಉಪಾಧ್ಯಕ್ಷ ಜೆ. ವಿಭಾಕರರೆಡ್ಡಿ, ಖಜಾಂಚಿ ಆರ್.ಪಿ.ಎಂ. ಸತ್ಯನಾರಾಯಣ್, ಬಾಗೇಪಲ್ಲಿ ಕೆ. ನರಸಿಂಹಪ್ಪ, ಗಣೇಶ್ ಚಂದ್ರಪ್ಪ, ನಿವೃತ್ತ ಐಎಎಸ್ ಅಧಿಕಾರಿ ಬಿ.ಎನ್. ಕೃಷ್ಣಯ್ಯ ಹಾಗೂ ಗ್ರಾಮಸ್ಥರು ಭಾಗವಹಿಸಿದ್ದರು

ತಾಜಾ ಸುದ್ದಿಗಾಗಿ ಪ್ರಜಾವಾಣಿ ಟೆಲಿಗ್ರಾಂ ಚಾನೆಲ್ ಸೇರಿಕೊಳ್ಳಿ | ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ನಮ್ಮ ಫೇಸ್‌ಬುಕ್ ಪುಟ ಫಾಲೋ ಮಾಡಿ.

ADVERTISEMENT
ADVERTISEMENT
ADVERTISEMENT
ADVERTISEMENT
ADVERTISEMENT