ಮಸ್ತೇನಹಳ್ಳಿ ಮತ್ತು ಸಿದ್ದೇಪಲ್ಲಿ ಕೈಗಾರಿಕಾ ಪ್ರಾಂಗಣಗಳು ಅಭಿವೃದ್ಧಿಯಾದರೆ ಯುವಜನರಿಗೆ ಅನುಕೂಲವಾಗಲಿದೆ.
ಸಿ.ಎ.ರಮೇಶ್, ಚಿಂತಾಮಣಿ
ಕಳೆದ 10ವರ್ಷಗಳಿಂದ ಕೆ.ಸಿ ಮತ್ತು ಎಚ್.ಎನ್ ವ್ಯಾಲಿಯಿಂದ ಕೆರೆಗಳಿಗೆ ನೀರು ತುಂಬಿಸುವ ಯೋಜನೆಯಲ್ಲಿ ತಾಲ್ಲೂಕಿಗೆ ತಾರತಮ್ಯವಾಗಿದೆ. ಅನುಷ್ಠಾನಗೊಳಿಸಲು ಬಜೆಟ್‌ನಲ್ಲಿ ಅನುದಾನ ಮಂಜೂರು ಮಾಡಬೇಕು.
ರಘುನಾಥರೆಡ್ಡಿ, ರೈತ ಮುಖಂಡ, ಚಿಂತಾಮಣಿ
ಗ್ರಾಮೀಣ ಮಹಿಳೆಯರು ಆರ್ಥಿಕವಾಗಿ ಸಮಾಜದ ಮುಖ್ಯವಾಹಿನಿಗೆ ತರಲು ಗಾರ್ಮೆಮೆಂಟ್ ಉದ್ಯಮ ಪ್ರಾರಂಭಿಸಬೇಕು. ಗುಡಿ ಕೈಗಾರಿಕೆಗಳನ್ನು ಸ್ಥಾಪಿಸಲು ಬಜೆಟ್‌ನಲ್ಲಿ ಅನುದಾನ ನೀಡಬೇಕು.
ಲಕ್ಷ್ಮಿನರಸಮ್ಮ, ಕಾರ್ಯದರ್ಶಿ ಅಂಗನವಾಡಿ ನೌಕರರ ಸಂಘ
ಬಯಲುಸೀಮೆ ಜನರಿಗೆ ಶುದ್ಧ ಕುಡಿಯುವ ನೀರು ಒದಗಿಸಬೇಕು. ದುಡಿಯುವ ಯುವ ಜನರಿಗೆ ಉದ್ಯೋಗ ನೀಡುವ ಕೈಗಾರಿಕೆಗಳನ್ನು ಆರಂಭಿಸಬೇಕು