ಸೋಮವಾರ, ಡಿಸೆಂಬರ್ 6, 2021
24 °C

ಯುವಕನ ಹತ್ಯೆ

ಪ್ರಜಾವಾಣಿ ‌ವಾರ್ತೆ Updated:

ಅಕ್ಷರ ಗಾತ್ರ : | |

ಗೌರಿಬಿದನೂರು: ತಾಲ್ಲೂಕಿನ ಮಂಚೇನ ಹಳ್ಳಿ ಹೋಬಳಿಯ ಗಿಡಗಾನಹಳ್ಳಿ ಹಾಗೂ ಪುರ ಗ್ರಾಮದ ನಡುವಿನ ವರವಣಿ ಕ್ರಾಸ್ ಬಳಿ ಸುಮಾರು 28 ವರ್ಷದ ಯುವಕನನ್ನು ಹತ್ಯೆ ಮಾಡಿ ಬೇಲಿಯಲ್ಲಿ ಶವ ಎಸೆದಿರುವ ಘಟನೆ ಗುರುವಾರ ಬೆಳಕಿಗೆ ಬಂದಿದೆ.

ಎಂದಿನಂತೆ ಸ್ಥಳೀಯ ‌ರೈತರು ತಮ್ಮ ಜಮೀನುಗಳಿಗೆ ತೆರಳುವ ವೇಳೆ ರಸ್ತೆ ಪಕ್ಕದ ಜಮೀನಿನ ಸಮೀಪವಿದ್ದ ಬೇಲಿಯಲ್ಲಿ ಬಿದ್ದಿದ್ದ ಶವ ನೋಡಿದ್ದಾರೆ. ಗಾಬರಿಗೊಂಡು ಅವರು ಕೂಡಲೇ ಮಂಚೇನಹಳ್ಳಿ ಪೊಲೀಸರಿಗೆ ಮಾಹಿತಿ‌ ನೀಡಿದ್ದಾರೆ. ಸ್ಥಳಕ್ಕೆ ಆಗಮಿಸಿದ ಪೊಲೀಸರು ಅಪರಿಚಿತ ಶವವನ್ನು ಬೇಲಿಯಿಂದ ಹೊರಗೆ ತೆಗೆದು ಪರಿಶೀಲಿಸಿದ್ದಾರೆ.

ತಾಜಾ ಮಾಹಿತಿ ಪಡೆಯಲು ಪ್ರಜಾವಾಣಿ ಟೆಲಿಗ್ರಾಂ ಚಾನೆಲ್ ಸೇರಿಕೊಳ್ಳಿ

ತಾಜಾ ಸುದ್ದಿಗಳಿಗಾಗಿ ಪ್ರಜಾವಾಣಿ ಆ್ಯಪ್ ಡೌನ್‌ಲೋಡ್ ಮಾಡಿಕೊಳ್ಳಿ: ಆಂಡ್ರಾಯ್ಡ್ ಆ್ಯಪ್ | ಐಒಎಸ್ ಆ್ಯಪ್

ಪ್ರಜಾವಾಣಿ ಫೇಸ್‌ಬುಕ್ ಪುಟವನ್ನುಫಾಲೋ ಮಾಡಿ.