ಲಾಟರಿ ಮೂಲಕ ಒಲಿದ ಅಧ್ಯಕ್ಷ ಸ್ಥಾನ

ಶಿಡ್ಲಘಟ್ಟ: ಶಿಡ್ಲಘಟ್ಟ ತಾಲ್ಲೂಕಿನ ಭಕ್ತರಹಳ್ಳಿ ಹಾಲು ಉತ್ಪಾದಕರ ಸಹಕಾರ ಸಂಘದ ಅಧ್ಯಕ್ಷ ಹಾಗೂ ಉಪಾಧ್ಯಕ್ಷರ ಚುನಾವಣೆಯಲ್ಲಿ ಜೆಡಿಎಸ್ ಬೆಂಬಲಿತ ಅಭ್ಯರ್ಥಿಗೆ ಲಾಟರಿಯಲ್ಲಿ ಅಧ್ಯಕ್ಷ ಸ್ಥಾನ ಒಲಿದು ಬಂದಿದ್ದು, ಉಪಾಧ್ಯಕ್ಷ ಸ್ಥಾನ ಕಾಂಗ್ರೆಸ್ ಪಾಲಾಗಿದೆ.
ಅಧ್ಯಕ್ಷ ಸ್ಥಾನಕ್ಕಾಗಿ ಕಾಂಗ್ರೆಸ್‌ನಿಂದ ಬಿ.ಟಿ. ನಾಗೇಶ್ ಹಾಗೂ ಜೆಡಿಎಸ್‌ನಿಂದ ಬಿ.ಎನ್. ವಿಜಯ್‍ಕುಮಾರ್ ಹಾಗೂ ಉಪಾಧ್ಯಕ್ಷರ ಸ್ಥಾನಕ್ಕೆ ಕಾಂಗ್ರೆಸ್‌ನಿಂದ ಕೋಟೆ ಬಿ.ಕೆ. ಚನ್ನೇಗೌಡ ಹಾಗೂ ಜೆಡಿಎಸ್‌ನಿಂದ ರುಕ್ಮಿಣಿಯಮ್ಮ ನಾಮಪತ್ರ ಸಲ್ಲಿಸಿದ್ದರು.
ವಿಜಯ್‍ಕುಮಾರ್ ಮತ್ತು ನಾಗೇಶ್ ಪರವಾಗಿ ತಲಾ 6 ಮತಗಳು ಬಂದಿದ್ದವು. ಒಂದು ಮತ ತಿರಸ್ಕೃತಗೊಂಡಿತ್ತು. ಆದ್ದರಿಂದ ನಡೆದ ಲಾಟರಿ ಪ್ರಕ್ರಿಯೆಯಲ್ಲಿ ವಿಜಯ್‍ಕುಮಾರ್ ಅವರಿಗೆ ಅದೃಷ್ಟ ಒಲಿಯಿತು. ಉಪಾಧ್ಯಕ್ಷರ ಚುನಾವಣೆಯಲ್ಲಿ ಬಿ.ಕೆ. ಚನ್ನೇಗೌಡ ಅವರಿಗೆ 7 ಮತಗಳು ಬಂದಿತ್ತು. ಅವರು ರುಕ್ಮಿಣಿಯಮ್ಮ ಅವರನ್ನು ಒಂದು ಮತದ ಅಂತರದಿಂದ ಪರಾಭವಗೊಳಿಸಿ ಉಪಾಧ್ಯಕ್ಷರಾಗಿ ಆಯ್ಕೆಯಾದರು.
ಎಂಪಿಸಿಎಸ್ ನಿರ್ದೇಶಕರಾದ ಎ.ಸಿ.ಚಂದ್ರಶೇಖರ್, ಕೆ.ಸಿ.ಕೇಶವಮೂರ್ತಿ, ನಾರಾಯಣಸ್ವಾಮಿ, ರುಕ್ಮಿಣಿಯಮ್ಮ, ಛಲವಾದಿ ಆನಂದ್, ಭಕ್ತರಹಳ್ಳಿ ಗ್ರಾಮ ಪಂಚಾಯಿತಿ ಮಾಜಿ ಅಧ್ಯಕ್ಷ ಎಸ್.ಎನ್. ವೆಂಕಟೇಶ್, ಮಳ್ಳೂರು ಎಸ್‍ಎಫ್‍ಸಿಎಸ್ ಬ್ಯಾಂಕಿನ ಮಾಜಿ ಅಧ್ಯಕ್ಷ ಎಸ್. ನಾರಾಯಣಸ್ವಾಮಿ, ಜೆ.ವಿ.ಮುನಿರಾಜು, ಮಂಜುನಾಥ್, ರಘುರಾಜ್, ಎಂಪಿಸಿಎಸ್ ಮಂಜು ರವಿಚಂದ್ರ, ಹಾಲು ಪರಿವೀಕ್ಷಕ ಅಶೋಕ ಹಾಜರಿದ್ದರು.
ಪ್ರಜಾವಾಣಿ ಫೇಸ್‌ಬುಕ್ ಪುಟವನ್ನು ಲೈಕ್ ಮಾಡಿ, ಪ್ರಮುಖ ಸುದ್ದಿಗಳ ಅಪ್ಡೇಟ್ಸ್ ಪಡೆಯಿರಿ.
ಪ್ರಜಾವಾಣಿಯನ್ನು ಟ್ವಿಟರ್ನಲ್ಲಿ ಇಲ್ಲಿ ಫಾಲೋ ಮಾಡಿ.
ಟೆಲಿಗ್ರಾಂ ಮೂಲಕ ನಮ್ಮ ಸುದ್ದಿಗಳ ಅಪ್ಡೇಟ್ಸ್ ಪಡೆಯಲು ಇಲ್ಲಿ ಕ್ಲಿಕ್ ಮಾಡಿ.