ಮಂಗಳವಾರ, 16 ಏಪ್ರಿಲ್ 2024
×
ADVERTISEMENT
ಈ ಕ್ಷಣ :
ADVERTISEMENT
ADVERTISEMENT

ಬಾಗೇಪಲ್ಲಿ: ಬೀದಿನಾಯಿಗಳಿಂದ ಜಿಂಕೆ ರಕ್ಷಿಸಿದ ಗ್ರಾಮಸ್ಥರು

Published 24 ಮಾರ್ಚ್ 2024, 13:52 IST
Last Updated 24 ಮಾರ್ಚ್ 2024, 13:52 IST
ಅಕ್ಷರ ಗಾತ್ರ

ಬಾಗೇಪಲ್ಲಿ: ಬೀದಿನಾಯಿಗಳ ದಾಳಿಗೆ ಒಳಗಾಗಿದ್ದ ಜಿಂಕೆಯನ್ನು ತಾಲ್ಲೂಕಿನ ಜಿಲ್ಲಾಲಪಲ್ಲಿ ಭಾನುವಾರ ಗ್ರಾಮಸ್ಥರು ರಕ್ಷಣೆ ಮಾಡಿದ್ದಾರೆ.

ತಾಲ್ಲೂಕಿನ ಕೊತ್ತಕೋಟೆ ಗ್ರಾಮ ಪಂಚಾಯಿತಿ ವ್ಯಾಪ್ತಿಯ ಜಿಲ್ಲಾಲಪಲ್ಲಿ ಗ್ರಾಮಕ್ಕೆ ಪಕ್ಕದ ಅರಣ್ಯ ಪ್ರದೇಶದಿಂದ ಗಂಡು ಜಿಂಕೆಯೊಂದು ಆಹಾರ ಹಾಗೂ ಕುಡಿಯುವ ನೀರಿಗಾಗಿ ಬಂದಿದೆ. ಜಿಂಕೆಯ ಮೇಲೆ ಬೀದಿನಾಯಿಗಳು ದಾಳಿ ಮಾಡಿದೆ. ಕೂಡಲೇ ನೆರೆಯ ಗ್ರಾಮಸ್ಥರು ಬೀದಿನಾಯಿಗಳನ್ನು ಚದುರಿಸಿ, ಜಿಂಕೆಯನ್ನು ರಕ್ಷಣೆ ಮಾಡಿದ್ದಾರೆ. ಮೇವು, ನೀರು ಕುಡಿಸಿ ಉಪಚರಿಸಿದ್ದಾರೆ.

ಗ್ರಾಮಸ್ಥರು ಅರಣ್ಯ ಇಲಾಖೆ ಸಿಬ್ಬಂದಿಗೆ ಮಾಹಿತಿ ನೀಡಿದ್ದಾರೆ. ಕೂಡಲೇ ಅರಣ್ಯ ರಕ್ಷಕ ಶ್ರೀರಾಮಪ್ಪ ಹಾಗೂ ಕಾವಲುಗಾರ ಕದಿರಪ್ಪ ಗ್ರಾಮಕ್ಕೆ ಆಗಮಿಸಿ ದಾಳಿಯಿಂದ ಸಣ್ಣಪುಟ್ಟ ಗಾಯಗೊಂಡಿದ್ದ ಜಿಂಕೆಗೆ ಔಷಧಿ ಹಾಕಿ ಚಿಕಿತ್ಸೆ ನೀಡಿದ್ದಾರೆ. ಗ್ರಾಮಸ್ಥರ ಉತ್ತಮ ಸೇವೆಗೆ ಅರಣ್ಯ ಇಲಾಖೆಯ ಅಧಿಕಾರಿಗಳು ಪ್ರಶಂಸಿದ್ದಾರೆ.

ಡಿವೈಎಫ್‌ಐ ಮುಖಂಡ ಹುಸೇನ್, ವೆಂಕಟರಾಮಪ್ಪ, ಸತ್ಯಪ್ಪ, ನಾಗರಾಜ, ಕುಮಾರ, ಖಾಸಿಂಸಾಬ್, ದಾಸಪ್ಪಲ ಆದಿನಾರಾಯಣ, ಬಾಲಚಂದ್ರ ಇದ್ದರು.

ತಾಜಾ ಸುದ್ದಿಗಾಗಿ ಪ್ರಜಾವಾಣಿ ಟೆಲಿಗ್ರಾಂ ಚಾನೆಲ್ ಸೇರಿಕೊಳ್ಳಿ | ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ನಮ್ಮ ಫೇಸ್‌ಬುಕ್ ಪುಟ ಫಾಲೋ ಮಾಡಿ.

ADVERTISEMENT
ADVERTISEMENT
ADVERTISEMENT
ADVERTISEMENT
ADVERTISEMENT