ಶುಕ್ರವಾರ, 17 ಮೇ 2024
×
ADVERTISEMENT
ಈ ಕ್ಷಣ :
ADVERTISEMENT
ADVERTISEMENT

ಚಿಕ್ಕಬಳ್ಳಾಪುರ | ಚುನಾವಣಾ ಅಕ್ರಮ: ₹ 5.16 ಕೋಟಿ ವಶ

ಮಾದರಿ ನೀತಿ ಸಂಹಿತೆ ಉಲ್ಲಂಘನೆ; ಅಧಿಕಾರಿಗಳ ಕಾರ್ಯಾಚರಣೆ
Published 2 ಮೇ 2024, 15:15 IST
Last Updated 2 ಮೇ 2024, 15:15 IST
ಅಕ್ಷರ ಗಾತ್ರ

ಚಿಕ್ಕಬಳ್ಳಾಪುರ: ಚಿಕ್ಕಬಳ್ಳಾಪುರ ಲೋಕಸಭಾ ಕ್ಷೇತ್ರದಲ್ಲಿ ಮಾದರಿ ನೀತಿ ಸಂಹಿತೆ ಅನುಷ್ಠಾನದ ವೇಳೆ ದಾಖಲೆ ಇಲ್ಲದೇ ಸಾಗಾಟ ಹಾಗೂ ಸಂಗ್ರಹಿಸಿದ್ದ ಬರೋಬ್ಬರಿ ₹ 5.16 ಕೋಟಿ ಹಣವನ್ನು ಅಧಿಕಾರಿಗಳು ಜಪ್ತಿ ಮಾಡಿದ್ದಾರೆ.

ಹೌದು, ಚಿಕ್ಕಬಳ್ಳಾಪುರ ಲೋಕಸಭಾ ಕ್ಷೇತ್ರದಲ್ಲಿ ಮಾದರಿ ಚುನಾವಣಾ ನೀತಿ ಸಂಹಿತೆ ಅನುಷ್ಠಾನಕ್ಕೆ ನೇಮಕವಾಗಿದ್ದ ಎಫ್‌ಎಸ್‌ಟಿ, ಎಸ್‌ಎಸ್‌ಟಿ ಹಾಗೂ ಐಟಿ ಅಧಿಕಾರಿಗಳ ತಂಡ ಕ್ಷೇತ್ರದಲ್ಲಿ ವಿವಿಧಡೆಗಳಲ್ಲಿ ಕಾರ್ಯಾಚರಣೆ ನಡೆಸುವ ಮೂಲಕ ಅಕ್ರಮವಾಗಿ ಮತದಾರರಿಗೆ ಹಂಚಲು ಸಾಗಾಟ ಹಾಗೂ ಸಂಗ್ರಹಿಸಿದ್ದ ಕಂತೆ ಕಂತೆ ಹಣ ವಶಕ್ಕೆ ಪಡೆದಿದೆ.

ಹಣದ ಅಕ್ರಮ ಕ್ಷೇತ್ರದ ವ್ಯಾಪ್ತಿಗೆ ಸೇರುವ ಬೆಂಗಳೂರು ನಗರ ಜಿಲ್ಲೆಯ ಯಲಹಂಕ ಕ್ಷೇತ್ರದಲ್ಲಿ ನಡೆದಿದೆ. ಬಳಿಕ ದೇವನಹಳ್ಳಿ ವಿಧಾನಸಭಾ ಕ್ಷೇತ್ರ ಹಾಗೂ ಜಿಲ್ಲೆಯ ಬಾಗೇಪಲ್ಲಿ ಕ್ಷೇತ್ರದಲ್ಲಿ ನಡೆದಿದೆ. ಯಲಹಂಕ ವಿಧಾನಸಭಾ ಕ್ಷೇತ್ರದ ಒಂದರಲ್ಲಿಯೆ ₹ 4.81 ಕೋಟಿಯನ್ನು ಐಟಿ ಅಧಿಕಾರಿಗಳು ದಾಳಿ ನಡೆಸಿ ವಶಕ್ಕೆ ಪಡೆದಿದ್ದಾರೆ.

ಉಳಿದಂತೆ ದೇವನಹಳ್ಳಿಯಲ್ಲಿ ₹8.97 ಲಕ್ಷ , ಬಾಗೇಪಲ್ಲಿ ಕ್ಷೇತ್ರದಲ್ಲಿ ₹7.54 ಲಕ್ಷ, ಚಿಕ್ಕಬಳ್ಳಾಪುರದಲ್ಲಿ ₹5.54 ಲಕ್ಷ ಹಣವನ್ನು ಚೆಕ್ ಪೋಸ್ಟ್‌ಗಳಲ್ಲಿ ಅಧಿಕಾರಿಗಳು ಕಾರ್ಯಾಚರಣೆ ವೇಳೆ ವಾಹನಗಳಲ್ಲಿ ಸಾಗಾಟ ಮಾಡುವ ವೇಳೆ ತಮ್ಮ ವಶಕ್ಕೆ ಪಡೆದಿದ್ದಾರೆ.

ಲಕ್ಷಾಂತರ ಮೌಲ್ಯದ ವಸ್ತುಗಳ ವಶ: ಇನ್ನೂ ದಾಖಲೆಗಳಿಲ್ಲದೇ ಅಕ್ರಮವಾಗಿ ಮತದಾರರಿಗೆ ಸಾಗಾಟ ಮಾಡುವ ವೇಳೆ ಚೆಕ್ ಪೋಸ್ಟ್ ಗಳಲ್ಲಿ ಪೊಲೀಸರು ಲಕ್ಷಾಂತರ ಮೌಲ್ಯದ ವಸ್ತುಗಳನ್ನು ವಶಕ್ಕೆ ಪಡೆದಿದ್ದಾರೆ. ಪ್ರಮುಖವಾಗಿ ದೇವನಹಳ್ಳಿಯಲ್ಲಿ 1,411 ಪ್ಯಾನ್‌ಗಳು, ದೊಡ್ಡಬಳ್ಳಾಪುರದಲ್ಲಿ 1,991 ಸೀರೆ, ನೆಲಮಂಗಲದಲ್ಲಿ 199 ಟಿವಿಗಳನ್ನು ಎಫ್‌ಎಸ್‌ಟಿ ತಂಡ ಜಪ್ತಿ ಮಾಡಿದರೆ ಎಸ್‌ಎಸ್‌ಟಿ ಬಾಗೇಪಲ್ಲಿಯಲ್ಲಿ 96, ನೆಲಮಂಗಲದಲ್ಲಿ 28 ಸೀರೆಗಳನ್ನು ವಶಕ್ಕೆ ಪಡೆದಿದೆ.

ಗೌರಿಬಿದನೂರು ಹೊಸಕೋಟೆಯಲ್ಲಿ ಅಕ್ರಮ ಪತ್ತೆಯಾಗಿಲ್ಲ ಗೌರಿಬಿದನೂರು ಹೊಸಕೋಟೆಯಲ್ಲಿ ಅಕ್ರಮ ನಗದು ವಸ್ತುಗಳು ಪತ್ತೆ ಆಗಿಲ್ಲ. ಇನ್ನೂ ಈ ಬಾರಿ ಲೋಕಸಭಾ ಚುನಾವಣೆಯಲ್ಲಿ ಅತಿ ಹೆಚ್ಚು ದಾಖಲೆಯ ಮತದಾನ ಆಗಿರುವ ಹೋಸಕೋಟೆ ವಿಧಾನಸಭಾ ಕ್ಷೇತ್ರದಲಿ ಹಾಗೂ ಜಿಲ್ಲೆಯ ಗೌರಿಬಿದನೂರು ವಿಧಾನಸಭಾ ಕ್ಷೇತ್ರದ ವ್ಯಾಪ್ತಿಯಲ್ಲಿ ಚುನಾವಣೆ ಆರಂಭಗೊಂಡು ಮುಗಿಯುವವರೆಗೂ ಚುನಾವಣಾ ಅಕ್ರಮ ಹಣ ಯಾವುದೂ ಕೂಡ ವಶವಾಗಿಲ್ಲ. ಅಷ್ಟೇ ಅಲ್ಲ. ಮತದಾರರಿಗೆ ಹಂಚುವ ಯಾವ ವಸ್ತುಗಳು ಕೂಡ ಎಫ್‌ಎಸ್‌ಟಿ ಹಾಗೂ ಎಸ್‌ಎಸ್‌ಟಿ ತಂಡಕ್ಕೆ ಸಿಕ್ಕಿಲ್ಲ ಎನ್ನುವುದು ವಿಶೇಷ.

ತಾಜಾ ಸುದ್ದಿಗಾಗಿ ಪ್ರಜಾವಾಣಿ ಟೆಲಿಗ್ರಾಂ ಚಾನೆಲ್ ಸೇರಿಕೊಳ್ಳಿ | ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ನಮ್ಮ ಫೇಸ್‌ಬುಕ್ ಪುಟ ಫಾಲೋ ಮಾಡಿ.

ADVERTISEMENT
ADVERTISEMENT
ADVERTISEMENT
ADVERTISEMENT
ADVERTISEMENT