ಶುಕ್ರವಾರ, 9 ಜೂನ್ 2023
×
ADVERTISEMENT
ಈ ಕ್ಷಣ :
ADVERTISEMENT
ADVERTISEMENT

ಶಿಡ್ಲಘಟ್ಟ: ಬರಡು ರಾಸು ತಪಾಸಣಾ ಶಿಬಿರ

Last Updated 23 ಅಕ್ಟೋಬರ್ 2021, 4:16 IST
ಅಕ್ಷರ ಗಾತ್ರ

ಶಿಡ್ಲಘಟ್ಟ: ಸಾಕು ಪ್ರಾಣಿಗಳಲ್ಲಿ ಮಾತ್ರವಲ್ಲದೇ ವನ್ಯಮೃಗಗಳಲ್ಲೂ ಕಂಡುಬರುವ ‘ಗಳಲೆ ರೋಗ’ (ಗಂಟಲು ಬೇನೆ- ಪಾಸ್ಚುರೆಲ್ಲಾ ಮಲ್ಟೋಸಿಡಾ) ಬಂದಾಗ ಅಸಡ್ಡೆ ತೋರಿದರೆ ಅದು ಜಾನುವಾರು ಪ್ರಾಣಕ್ಕೂ ಕುತ್ತಾಗಬಹುದು. ಎಷ್ಟೋ ಬಾರಿ ಈ ಸಮಸ್ಯೆ ಆರಂಭ ಆಗಿರುವುದು ರೈತರಿಗೆ ತಿಳಿಯುವುದೇ ಇಲ್ಲ. ಇತ್ತೀಚಿನ ದಿನಗಳಲ್ಲಿ ಆಗ್ಗಾಗ್ಗೆ ಕಂಡುಬರುತ್ತಿರುವ ಈ ರೋಗದ ಕುರಿತಾಗಿ ಮಾಹಿತಿ ತಿಳಿದಿರಬೇಕು ಎಂದು ವಿಜ್ಞಾನಿ ಪಿ.ಎಚ್. ರಾಮಾಂಜಿನಿ ಗೌಡ ತಿಳಿಸಿದರು.

ತಾಲ್ಲೂಕಿನ ಅಪ್ಪೆಗೌಡನಹಳ್ಳಿಯಲ್ಲಿ ಗ್ರಾಮೀಣ ಕೃಷಿ ಕಾರ್ಯಾನುಭವ ಚಟುವಟಿಕೆ ಅಡಿಯಲ್ಲಿ ಗಾಂಧಿ ಕೃಷಿ ವಿಜ್ಞಾನ ಕೇಂದ್ರದ ವಿದ್ಯಾರ್ಥಿಗಳಿಂದ ಆಯೋಜಿಸಿದ್ದ ಬರಡು ರಾಸುಗಳ ತಪಾಸಣಾ ಹಾಗೂ ಪಶು ಆರೋಗ್ಯ ಚಿಕಿತ್ಸಾ ಶಿಬಿರದಲ್ಲಿ ಅವರು ಮಾತನಾಡಿದರು.

ಈ ರೋಗ ಹರಡಿಸುವ ರೋಗಾಣು ಆಹಾರ ಮತ್ತು ನೀರಿನ ಮುಖಾಂತರ ಪ್ರಾಣಿಗಳ ದೇಹ ಪ್ರವೇಶಿಸುತ್ತದೆ. ಈ ರೋಗಾಣು ಪ್ರಾಣಿಯ ದೇಹದಲ್ಲಿ ಪ್ರವೇಶ ಮಾಡಿದ ನಂತರ ವಾತಾವರಣದ ವೈಪರೀತ್ಯದಿಂದ ಇದು ದೇಹವನ್ನು ಆಕ್ರಮಿಸಿಕೊಂಡು ಪ್ರಾಣಿಗಳ ಪ್ರಾಣಕ್ಕೆ ಕುತ್ತು ತರುತ್ತದೆ ಎಂದರು.

ಸುಮಾರು ಒಂದು ನೂರು ಹಸುಗಳನ್ನು ತಪಾಸಣೆ ಮಾಡಲಾಯಿತು. ಉಚಿತ ಚಿಕಿತ್ಸೆ ಮತ್ತು ಔಷಧಿ ವಿತರಿಸಲಾಯಿತು. ಅಪ್ಪೆಗೌಡನಹಳ್ಳಿ, ಗಂಗನಹಳ್ಳಿ, ಕಂಬದಹಳ್ಳಿ ಸೇರಿದಂತೆ ಸುತ್ತಮುತ್ತಲಿನ ರೈತರು ತಮ್ಮ ಹಸುಗಳನ್ನು ತಪಾಸಣೆ ಮಾಡಿಸಿದರು.

ಕೃಷಿ ವಿಸ್ತರಣ ಅಧಿಕಾರಿ ಡಾ.ವೈ.ಎನ್. ಶಿವಲಿಂಗಯ್ಯ, ಟಿ.ಎಂ. ಅರವಿಂದ, ದಯಾನಂದ, ಶ್ರೀರಾಮ, ಡಾ.ತಿಮ್ಮರಾಜು, ಡಾ.ಶ್ರೀನಿವಾಸ, ಡಾ.ಕೃಷ್ಣಮೂರ್ತಿ, ಡಾ.ಸುಚಿತ್ರಾ, ಡಾ.ಪೂಜಾರ ಸೂರಪ್ಪ, ಡಾ.ಆನಂದ್ ಮಾನೆಗಾರ್, ಡಾ.ಗಣೇಶಮೂರ್ತಿ, ಅಪ್ಪಾಜಿಗೌಡ, ಮುನಿರೆಡ್ಡಿ, ಎಂಪಿಸಿಎಸ್ ಮಧು, ಮುನೀಂದ್ರ ಹಾಜರಿದ್ದರು.

ತಾಜಾ ಮಾಹಿತಿ ಪಡೆಯಲು ಪ್ರಜಾವಾಣಿ ಟೆಲಿಗ್ರಾಂ ಚಾನೆಲ್ ಸೇರಿಕೊಳ್ಳಿ

ತಾಜಾ ಸುದ್ದಿಗಳಿಗಾಗಿ ಪ್ರಜಾವಾಣಿ ಆ್ಯಪ್ ಡೌನ್‌ಲೋಡ್ ಮಾಡಿಕೊಳ್ಳಿ: ಆಂಡ್ರಾಯ್ಡ್ ಆ್ಯಪ್ | ಐಒಎಸ್ ಆ್ಯಪ್

ಪ್ರಜಾವಾಣಿ ಫೇಸ್‌ಬುಕ್ ಪುಟವನ್ನುಫಾಲೋ ಮಾಡಿ.

ADVERTISEMENT
ADVERTISEMENT

ಇನ್ನಷ್ಟು ಸುದ್ದಿ

ಇನ್ನಷ್ಟು
ADVERTISEMENT
ADVERTISEMENT
ADVERTISEMENT
ಪ್ರಜಾವಾಣಿ ವಿಡಿಯೊ
ಸಿನಿಮಾ
ADVERTISEMENT