ಭಾನುವಾರ, 28 ಏಪ್ರಿಲ್ 2024
×
ADVERTISEMENT
ಈ ಕ್ಷಣ :
ADVERTISEMENT
ADVERTISEMENT

ಶೃಂಗೇರಿ: ಮಾರುತಿ ಬೆಟ್ಟದಲ್ಲಿ 32 ಅಡಿ ಎತ್ತರದ ಶಂಕರಾಚಾರ್ಯರ ಮೂರ್ತಿ ಅನಾವರಣ

Published 10 ನವೆಂಬರ್ 2023, 23:30 IST
Last Updated 10 ನವೆಂಬರ್ 2023, 23:30 IST
ಅಕ್ಷರ ಗಾತ್ರ

ಶೃಂಗೇರಿ (ಚಿಕ್ಕಮಗಳೂರು): ಇಲ್ಲಿನ ಶಾರದಾ ಮಠದಿಂದ 2 ಕಿ.ಮೀ ದೂರದಲ್ಲಿರುವ ಮಾರುತಿ ಬೆಟ್ಟದಲ್ಲಿ  ನಿರ್ಮಿಸಿರುವ ಆದಿ ಶಂಕರಾಚಾರ್ಯರ 32 ಅಡಿ ಎತ್ತರದ ಮೂರ್ತಿಯನ್ನು ಪೀಠದ ಉಭಯ ಗುರುಗಳಾದ ಭಾರತಿತೀರ್ಥ ಸ್ವಾಮೀಜಿ ಮತ್ತು ವಿಧುಶೇಖರಭಾರತಿ ಸ್ವಾಮೀಜಿ ಅವರು ಶುಕ್ರವಾರ ಅನಾವರಣಗೊಳಿಸಿದರು. ‘ಆದಿಶಂಕರ ಬೆಟ್ಟ’ ಪ್ರವಾಸಿ ತಾಣವನ್ನು ಉದ್ಘಾಟಿಸಿದರು.

ಬೆಳಿಗ್ಗೆ ತುಂಗಾನದಿಯಲ್ಲಿ ಗಂಗಾಪೂಜೆ ನೇರವೆರಿಸಿ, ಶಂಕರಾಚಾರ್ಯರ ಉತ್ಸವ ಮೂರ್ತಿಯನ್ನು ಬೆಳ್ಳಿ ರಥದಲ್ಲಿರಿಸಿ ಬೆಟ್ಟಕ್ಕೆ ತರಲಾಯಿತು. ಶಂಕರಾಚಾರ್ಯರ ನಾಲ್ವರು ಶಿಷ್ಯರಾದ ಸುರೇಶ್ವರಾಚಾರ್ಯ, ಪದ್ಮಪಾದಾಚಾರ್ಯ, ಹಸ್ತಾಮಲಕಾಚಾರ್ಯ, ತೋಟಕಾಚಾರ್ಯರು ಮತ್ತು ಶೃಂಗೇರಿ ಶಾರದಾ ಪೀಠದ 12ನೇ ಗುರುಗಳಾದ ವಿದ್ಯಾರಣ್ಯರ ಮೂರ್ತಿಗಳನ್ನು ಬೆಟ್ಟದಲ್ಲಿ ಅನಾವರಣಗೊಳಿಸಲಾಯಿತು.

‘ಮಠದ ಹಿರಿಯ ಗುರುಗಳಾದ ಭಾರತೀತೀರ್ಥ ಸ್ವಾಮೀಜಿ ಸನ್ಯಾಸ ಸ್ವೀಕಾರಿಸಿ 50 ವರ್ಷವಾಗಿದೆ. ಈ ಸುವರ್ಣ ಮಹೋತ್ಸವದ ವರ್ಷದಲ್ಲಿ ಶಂಕರಾಚಾರ್ಯರ ಪ್ರತಿಮೆ ಅನಾವರಣಗೊಂಡಿದೆ. ಈ ಸುವರ್ಣ ಮಹೋತ್ಸವವನ್ನು ಇಡೀ ವರ್ಷ ಆಚರಣೆ ಮಾಡಲಾಗುವುದು’ ಎಂದು ವಿಧುಶೇಖರಭಾರತಿ ಸ್ವಾಮೀಜಿ  ಹೇಳಿದರು.

ಉದ್ಘಾಟನೆ ಸಮಾರಂಭದಲ್ಲಿ ದೇಶದ 10 ಮಂದಿ ವೇದಾಂತ ವಿದ್ವಾಂಸರಿಗೆ ತಲಾ ₹1 ಲಕ್ಷ  ನಗದು ನೀಡಿ ಸನ್ಮಾನಿಸಲಾಯಿತು.  ಶಿವಕುಮಾರ ಶರ್ಮ ಮತ್ತು ಸೀತಾರಾಮ ಶರ್ಮರವರ ನೇತೃತ್ವದಲ್ಲಿ ಧಾರ್ಮಿಕ ಕಾರ್ಯಕ್ರಮ ನಡೆದವು. ಶೃಂಗೇರಿ ಶಾಸಕ ಟಿ.ಡಿ ರಾಜೇಗೌಡ, ಶಿವಗಂಗಾ ಮಠದ ಪುರುಷೋತ್ತಮ ಭಾರತಿ ಸ್ವಾಮೀಜಿ, ನೆಲಮಾವು ಮಠದ ಮಾಧವನಂದಭಾರತಿ ಸ್ವಾಮೀಜಿ ಇದ್ದರು.

ಮೂರ್ತಿ ಅನಾವರಣ ಸಂದರ್ಭದಲ್ಲಿ ಸಾರ್ವಜನಿಕರಿಗೆ ಪ್ರವೇಶ ಇರಲಿಲ್ಲ. ಮಠದ ಭಕ್ತರು ರಸ್ತೆಯಲ್ಲಿ ನಿಂತು ಕಾರ್ಯಕ್ರಮ ವೀಕ್ಷಿಸಿದರು.

ಪ್ರವಾಸಿ ತಾಣವಾಗಿ ಅಭಿವೃದ್ಧಿ

₹45 ಕೋಟಿ ವೆಚ್ಚದಲ್ಲಿ ಸುಮಾರು 2 ಎಕರೆ ಜಾಗದಲ್ಲಿ ಆದಿಶಂಕರ ಬೆಟ್ಟ ಪ್ರವಾಸಿ ತಾಣವಾಗಿ ಅಭಿವೃದ್ಧಿಗೊಳ್ಳಲಿದೆ. ಪಶ್ಚಿಮಘಟ್ಟ ಪ್ರದೇಶದ ಹಸಿರು ಹೊದಿಕೆ ಸೂರ್ಯೋದಯ ಹಾಗೂ ಸುರ್ಯಾಸ್ತಮಾನದ ದೃಶ್ಯ ಇಲ್ಲಿಂದ ಕಾಣಲಿದೆ. ಬೆಟ್ಟ ಹತ್ತಲು ಎಕ್ಸಲೇಟರ್ ವ್ಯವಸ್ಥೆ ಇದೆ. ಆಂಜನೇಯ ದೇವಸ್ಥಾನ ಕಾರಂಜಿ ಗ್ರಂಥಾಲಯ ಪುಸ್ತಕ ಮಳಿಗೆ ಇದೆ. ಪ್ರವಾಸಿಗರಿಗೆ ವಾಸ್ತವ್ಯಕ್ಕೆ ಕೆಳಗಡೆ ವಸತಿ ಗೃಹಗಳು ನಿರ್ಮಾಣವಾಗುತ್ತಿವೆ.

ಶೃಂಗೇರಿಯ ಆದಿ ಶಂಕರಚಾರ್ಯ ಬೆಟ್ಟದಲ್ಲಿ ಶಂಕರಾಚಾರ್ಯರ 32 ಎತ್ತರದ ಶಿಲಾ ಪ್ರತಿಮೆಯನ್ನು ಶೃಂಗೇರಿ ಶಾರದಾ ಪೀಠದ ಉಭಯ ಗುರುಗಳಾದ ಭಾರತಿತೀರ್ಥ ಸ್ವಾಮೀಜಿ ಮತ್ತು ವಿಧುಶೇಖರಭಾರತಿ ಸ್ವಾಮೀಜಿ ಅನಾವರಣಗೊಳಿಸಿದರು
ಶೃಂಗೇರಿಯ ಆದಿ ಶಂಕರಚಾರ್ಯ ಬೆಟ್ಟದಲ್ಲಿ ಶಂಕರಾಚಾರ್ಯರ 32 ಎತ್ತರದ ಶಿಲಾ ಪ್ರತಿಮೆಯನ್ನು ಶೃಂಗೇರಿ ಶಾರದಾ ಪೀಠದ ಉಭಯ ಗುರುಗಳಾದ ಭಾರತಿತೀರ್ಥ ಸ್ವಾಮೀಜಿ ಮತ್ತು ವಿಧುಶೇಖರಭಾರತಿ ಸ್ವಾಮೀಜಿ ಅನಾವರಣಗೊಳಿಸಿದರು
ಶೃಂಗೇರಿಯ ಆದಿ ಶಂಕರಚಾರ್ಯ ಬೆಟ್ಟದಲ್ಲಿ ಶಂಕರಾಚಾರ್ಯರ 32 ಎತ್ತರದ ಶಿಲಾಪ್ರತಿಮೆಗೆ ಶೃಂಗೇರಿ ಶಾರದಾ ಪೀಠದ ಗುರುಗಳಾದ ವಿಧುಶೇಖರಭಾರತಿ  ಸ್ವಾಮೀಜಿ ಅಭಿಷೇಕ ಮಾಡಿದರು
ಶೃಂಗೇರಿಯ ಆದಿ ಶಂಕರಚಾರ್ಯ ಬೆಟ್ಟದಲ್ಲಿ ಶಂಕರಾಚಾರ್ಯರ 32 ಎತ್ತರದ ಶಿಲಾಪ್ರತಿಮೆಗೆ ಶೃಂಗೇರಿ ಶಾರದಾ ಪೀಠದ ಗುರುಗಳಾದ ವಿಧುಶೇಖರಭಾರತಿ  ಸ್ವಾಮೀಜಿ ಅಭಿಷೇಕ ಮಾಡಿದರು
ಶೃಂಗೇರಿಯ ಆದಿ ಶಂಕರಚಾರ್ಯ ಬೆಟ್ಟದಲ್ಲಿ ಶಾರದಾ ಪೀಠದ 12 ನೇ ಗುರುಗಳಾದ ವಿದ್ಯಾರಣ್ಯರ ಪ್ರತಿಮೆಯನ್ನು ಶೃಂಗೇರಿ ಶಾರದಾ ಪೀಠದ ಉಭಯ ಗುರುಗಳಾದ ಭಾರತಿತೀರ್ಥ ಸ್ವಾಮೀಜಿ ಮತ್ತು ವಿಧುಶೇಖರಭಾರತಿ ಸ್ವಾಮೀಜಿಯವರು ಪ್ರತಿಷ್ಠಾಪಿಸಿದರು
ಶೃಂಗೇರಿಯ ಆದಿ ಶಂಕರಚಾರ್ಯ ಬೆಟ್ಟದಲ್ಲಿ ಶಾರದಾ ಪೀಠದ 12 ನೇ ಗುರುಗಳಾದ ವಿದ್ಯಾರಣ್ಯರ ಪ್ರತಿಮೆಯನ್ನು ಶೃಂಗೇರಿ ಶಾರದಾ ಪೀಠದ ಉಭಯ ಗುರುಗಳಾದ ಭಾರತಿತೀರ್ಥ ಸ್ವಾಮೀಜಿ ಮತ್ತು ವಿಧುಶೇಖರಭಾರತಿ ಸ್ವಾಮೀಜಿಯವರು ಪ್ರತಿಷ್ಠಾಪಿಸಿದರು

ತಾಜಾ ಸುದ್ದಿಗಾಗಿ ಪ್ರಜಾವಾಣಿ ಟೆಲಿಗ್ರಾಂ ಚಾನೆಲ್ ಸೇರಿಕೊಳ್ಳಿ | ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ನಮ್ಮ ಫೇಸ್‌ಬುಕ್ ಪುಟ ಫಾಲೋ ಮಾಡಿ.

ADVERTISEMENT
ADVERTISEMENT
ADVERTISEMENT
ADVERTISEMENT
ADVERTISEMENT