ಶುಕ್ರವಾರ, 26 ಏಪ್ರಿಲ್ 2024
×
ADVERTISEMENT
ಈ ಕ್ಷಣ :
ADVERTISEMENT
ADVERTISEMENT

‘ಪ್ರಚೋದನಕಾರಿ ಘೋಷಣೆ; ಎಚ್ಚರ ಇರಲಿ’

Last Updated 4 ಅಕ್ಟೋಬರ್ 2022, 6:07 IST
ಅಕ್ಷರ ಗಾತ್ರ

ಕಡೂರು: ಕಡೂರು ಪೊಲೀಸ್ ಠಾಣೆಯಲ್ಲಿ ಸೋಮವಾರ ಈದ್ ಮಿಲಾದ್ ಹಿನ್ನೆಲೆಯಲ್ಲಿ ಸೌಹಾರ್ದ ಸಭೆ ನಡೆಯಿತು.

ಡಿವೈಎಸ್ಪಿ ನಾಗರಾಜು ಮಾತನಾಡಿ, ‘ಆಚರಣೆಗಳು ಧಾರ್ಮಿಕ ಮಹತ್ವ ಪಡೆದಿರುವ ಹಿನ್ನೆಲೆಯಲ್ಲಿ ಮುಖಂಡರು ಎಚ್ಚರಿಕೆ ವಹಿಸಿ ಯಾವುದೇ ಪ್ರಚೋದನಕಾರಿ ಘೋಷಣೆಗಳನ್ನು ಕೂಗದಂತೆ ಎಲ್ಲರಿಗೂ ತಿಳಿಹೇಳಬೇಕು. ಮೆರವಣಿಗೆ ಸಂದರ್ಭದಲ್ಲಿ ಸುಪ್ರೀಂ ಕೋರ್ಟ್ ಆದೇಶ ಅನ್ವಯಿಸಿ, ಧ್ವನಿವರ್ಧಕ ಬಳಸುವ ಅವಕಾಶವಿದೆ. ಸಾರ್ವಜನಿಕರಿಗೆ ತೊಂದರೆಯಾಗದಂತೆ ಶಾಂತ ರೀತಿಯಲ್ಲಿ ಮೆರವಣಿಗೆ ನಡೆಸಬೇಕು ಎಂದು ಸೂಚಿಸಿದರು.

ಇನ್‌ಸ್ಪೆಕ್ಟರ್ ಶಿವಕುಮಾರ್ ಮಾತನಾಡಿ, ಪಟ್ಟಣದಲ್ಲಿ ಸೌಹಾರ್ದಕ್ಕೆ ಧಕ್ಕೆ ಬಾರದ ರೀತಿ ಹಬ್ಬಗಳ ಆಚರಣೆ ನಡೆಯಬೇಕಿದೆ. ಶಾಂತಿ ಸುವ್ಯವಸ್ಥೆಗೆ ಭಂಗ ಬಾರದಂತೆ, ತಮ್ಮ ಸಂಪ್ರದಾಯದಂತೆ ಧಾರ್ಮಿಕ ಆಚರಣೆ ನಡೆಸಬೇಕು ಎಂದು ಮನವಿ ಮಾಡಿದರು.

ಪಿಎಸೈ ರಮ್ಯಾ ಮಾತನಾಡಿ, ಮೆರವಣಿಗೆಯಲ್ಲಿ ಧಾರ್ಮಿಕವಾದ ಬಾವುಟಗಳನ್ನು ಮಾತ್ರ ಉಪಯೋಗಿಸ
ಬೇಕು. ಪಿಎಫ್ಐ, ಸಹ ಸಂಘಟನೆಗಳು ನಿಷೇಧವಾಗಿರುವ ಕಾರಣ ಅವುಗಳ ಪ್ರಸ್ತಾಪ, ನಿಷೇಧಿತ ಸಂಘಟನೆಗಳ ಬಾವುಟಗಳ ಪ್ರದರ್ಶನ ಮಾಡುವುದು ಕಾನೂನು ಬಾಹಿರ ಎಂಬುದನ್ನು ಗಮನದಲ್ಲಿಟ್ಟುಕೊಳ್ಳಬೇಕಿದೆ ಎಂದರು.

ಮುಖಂಡ ಭದ್ರಿಸ್ವಾಮಿ ಮಾತನಾಡಿ, ಈದ್ ಪ್ರಯುಕ್ತ ಮುಸ್ಲಿಂಮರು ಮೆರವಣಿಗೆ ಮಾಡಲು ಯಾವುದೇ ಅಭ್ಯಂತರವಿಲ್ಲ. ಕಡೂರಿನಲ್ಲಿ ಇಲ್ಲಿಯ ತನಕ ಯಾವುದೇ ಅಹಿತಕರ ಘಟನೆಗಳಾಗಿಲ್ಲ. ಮುಂದೆಯೂ ಈ ಸೌಹಾರ್ದ ಮುಂದುವರೆಯಬೇಕು ಎಂಬುದು ಆಶಯವಾಗಿದೆ ಎಂದರು.

ಮುಖಂಡರಾದ ದಾನಿ ಉಮೇಶ್, ನಾಗೇಂದ್ರ ಅಗ್ನಿ, ಚಿನ್ನರಾಜು, ಬಾಬು, ಸಯ್ಯದ್ ಯಾಸೀನ್, ಬಜರಂಗದಳ ತಾಲ್ಲೂಕು ಸಂಚಾಲಕ ಅಭಿಷೇಕ್, ಮುಸ್ಲಿಂ ಮುಖಂಡರು ಇದ್ದರು.

ತಾಜಾ ಸುದ್ದಿಗಾಗಿ ಪ್ರಜಾವಾಣಿ ಟೆಲಿಗ್ರಾಂ ಚಾನೆಲ್ ಸೇರಿಕೊಳ್ಳಿ | ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ನಮ್ಮ ಫೇಸ್‌ಬುಕ್ ಪುಟ ಫಾಲೋ ಮಾಡಿ.

ADVERTISEMENT
ADVERTISEMENT
ADVERTISEMENT
ADVERTISEMENT
ADVERTISEMENT