ಬಾಳೆಹೊನ್ನೂರು: ಇಲ್ಲಿಗೆ ಸಮೀಪದ ಕಗ್ಗನಳ್ಳ-ತನೂಡಿ ಸುತ್ತಮುತ್ತ ಇತ್ತೀಚೆಗೆ ಕೆಂಪು ಬಾಲದ ಸೀಳುನಾಯಿಗಳು ತಿರುಗಾಡುತ್ತಿವೆ ಎಂದು ಸ್ಥಳೀಯರು ತಿಳಿಸಿದ್ದಾರೆ.

ಸುಮಾರು 1,700 ಎಕರೆ ದಟ್ಟವಾದ ಕಾಡಿರುವ ಈ ಪ್ರದೇಶದಲ್ಲಿ ಈ ಹಿಂದೆ ಯಾವತ್ತೂ ಈ ಪ್ರಾಣಿ ಕಂಡಿರಲಿಲ್ಲ. ಇತ್ತೀಚೆಗೆ ಕೆಂಪು ಬಾಲದ ಸೀಳುನಾಯಿಗಳು 2–3 ಒಟ್ಟೊಟ್ಟಾಗಿ ಅಲ್ಲಲ್ಲಿ ಕಂಡು ಬರುತ್ತಿವೆ. ಮನುಷ್ಯರು ಕಾಣುತ್ತಿದ್ದಂತೆ ಕಾಡಿನಲ್ಲಿ ಮರೆಯಾಗುತ್ತವೆ. ಕಾಡು ಕೋಳಿ, ಕಡವೆಗಳನ್ನು ಹಿಡಿದು ತಿನ್ನುವ ಇವು ಈ ಭಾಗದಲ್ಲಿ ಕಂಡು ಬರುತ್ತಿರುವುದು ವಿಶೇಷ ಎಂದು ಹೇಳಿದ್ದಾರೆ.

ಕುದುರೆಮುಖ ಕಾಡಿನಲ್ಲಿ ಕೆಂಪು ದೇಹ ಹಾಗೂ ಬಾಲ ಹೊಂದಿರುವ ಸೀಳುನಾಯಿಗಳು ಹಿಂದಿನಿಂದಲೂ ಇವೆ. ಆದರೆ, ತನೂಡಿ ಭಾಗದಲ್ಲಿ ಇರುವುದು ಇದೇ ಮೊದಲ ಬಾರಿಗೆ ಗೊತ್ತಾಗಿದೆ. ಈ ಬಗ್ಗೆ ಪರಿಶೀಲಿಸಲಾಗುವುದು ಎಂದು ಕಳಸ ಆರ್ಎಫ್ಒ ನಿಶ್ಚಿತ್ ತಿಳಿಸಿದರು.

ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ವಾಟ್ಸ್ಆ್ಯಪ್, ಎಕ್ಸ್, ಫೇಸ್ಬುಕ್ ಮತ್ತು ಇನ್ಸ್ಟಾಗ್ರಾಂನಲ್ಲಿ ಪ್ರಜಾವಾಣಿ ಫಾಲೋ ಮಾಡಿ.