ಶುಕ್ರವಾರ, 3 ಮೇ 2024
×
ADVERTISEMENT
ಈ ಕ್ಷಣ :
ADVERTISEMENT
ADVERTISEMENT

‘ಕೃಷಿ, ತೋಟಗಾರಿಕೆ ಕಚೇರಿಗಳು ಸರ್ಕಾರಿ ಕಟ್ಟಡದಲ್ಲಿ ಇರಲಿ’

Last Updated 22 ಡಿಸೆಂಬರ್ 2022, 6:59 IST
ಅಕ್ಷರ ಗಾತ್ರ

ಕಳಸ: ಕೃಷಿ ಮತ್ತು ತೋಟಗಾರಿಕಾ ಇಲಾಖೆಯ ಕಚೇರಿಗಳು ಸರ್ಕಾರಿ ಕಟ್ಟಡದಲ್ಲಿ ಕಾರ್ಯನಿರ್ವಹಿಸಬೇಕು ಎಂದು ಬ್ಲಾಕ್ ಕಾಂಗ್ರೆಸ್ ಅಧ್ಯಕ್ಷ ಕೆ.ಎ.ಶ್ರೇಣಿಕ ಆಗ್ರಹಿಸಿದ್ದಾರೆ.

ಪಟ್ಟಣದ ಕೆ.ಎಂ.ರಸ್ತೆಯಲ್ಲಿ ಬಿಜೆಪಿ ಮುಖಂಡರ ಕಟ್ಟಡದಲ್ಲಿ ಇವರೆಡೂ ಕಚೇರಿಗಳು ಕಾರ್ಯನಿರ್ವಹಿಸುತ್ತಿವೆ. ಈ ಪೈಕಿ ತೋಟಗಾರಿಕಾ ಇಲಾಖೆಯ ಕಚೇರಿಗೆ ಕಳೆದ ತಿಂಗಳಿಂದ ವಿದ್ಯುತ್ ಸಂಪರ್ಕವೂ ಸ್ಥಗಿತ ಆಗಿದೆ. ಈ ಕಚೇರಿಗಳಿಗೆ ಬಿಜೆಪಿ ಕಾರ್ಯಕರ್ತರು ಹೊರತುಪಡಿಸಿ ಉಳಿದವರು ಹೋಗಲು ಮುಜುಗರ ಆಗುತ್ತಿದೆ. ಈ ಬಗ್ಗೆ ಎರಡೂ ಇಲಾಖೆ ಅಧಿಕಾರಿಗಳ ಗಮನ ಸೆಳೆದಿದ್ದೇವೆ ಎಂದು ಶ್ರೇಣಿಕ ತಿಳಿಸಿದ್ದಾರೆ.

ಈ ಬಗ್ಗೆ ಬಿಜೆಪಿ ಮುಖಂಡ ಶೇಷಗಿರಿ ಸ್ಪಷ್ಟನೆ ನೀಡಿದ್ದು, ರೈತ ಸಂಪರ್ಕ ಕೇಂದ್ರದ ಕಟ್ಟಡ ಕಾಮಗಾರಿ ನಡೆಯುತ್ತಿದ್ದು, ಕೃಷಿ ಇಲಾಖೆಗೆ ನಿಯಮದಂತೆ ಕಟ್ಟಡ ಬಾಡಿಗೆಗೆ ಕೊಟ್ಟಿದ್ದೇನೆ. ತೋಟಗಾರಿಕಾ ಇಲಾಖೆಯು ಹೊರನಾಡು ರೈತ ಉತ್ಪಾದಕರ ಸಂಸ್ಥೆ ಕಚೇರಿಯಲ್ಲಿ ಕಾರ್ಯ
ನಿರ್ವಹಿಸುತ್ತಿದೆ. ರೈತರ ಅನುಕೂಲಕ್ಕೆ ಉಚಿತವಾಗಿ ನೀಡಿದ್ದೇನೆ’ ಎಂದರು.

ಗ್ರಾಮೀಣ ಪ್ರದೇಶಕ್ಕೆ ತೋಟಗಾರಿಕಾ ಕಚೇರಿ ಸ್ಥಳಾಂತರ ಮಾಡಿದರೆ ರೈತರಿಗೆ ಅನಾನುಕೂಲ ಆಗುತ್ತದೆ ಎಂದು ಬಿಜೆಪಿ ಕಳಸ ಘಟಕದ ಅಧ್ಯಕ್ಷ ನಾಗಭೂಷಣ ತಿಳಿಸಿದ್ದಾರೆ.

ತಾಜಾ ಸುದ್ದಿಗಾಗಿ ಪ್ರಜಾವಾಣಿ ಟೆಲಿಗ್ರಾಂ ಚಾನೆಲ್ ಸೇರಿಕೊಳ್ಳಿ | ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ನಮ್ಮ ಫೇಸ್‌ಬುಕ್ ಪುಟ ಫಾಲೋ ಮಾಡಿ.

ADVERTISEMENT
ADVERTISEMENT
ADVERTISEMENT
ADVERTISEMENT
ADVERTISEMENT