ಭಾನುವಾರ, 16 ಜೂನ್ 2024
×
ADVERTISEMENT
ಈ ಕ್ಷಣ :
ADVERTISEMENT
ADVERTISEMENT

ಕೊಪ್ಪ | ಕೆರೆ ಹೂಳು ತೆಗೆಯುವಲ್ಲಿ ಅವ್ಯವಹಾರ ಆರೋಪ: ಬ್ಯಾನರ್ ಅಳವಡಿಕೆ

Published 9 ಜೂನ್ 2024, 14:25 IST
Last Updated 9 ಜೂನ್ 2024, 14:25 IST
ಅಕ್ಷರ ಗಾತ್ರ

ಕೊಪ್ಪ: ತಾಲ್ಲೂಕಿನ ಹರಂದೂರು ಗ್ರಾಮ ಪಂಚಾಯಿತಿ ವ್ಯಾಪ್ತಿ ಗುಣವಂತೆ ಗ್ರಾಮದ ವಡ್ಡನಮಕ್ಕಿ ಕೆರೆಯಲ್ಲಿ ಸಮರ್ಪಕವಾಗಿ ಹೂಳು ತೆಗೆಯದೆ ಅವ್ಯವಹಾರ ನಡೆಸಲಾಗಿದೆ ಎಂದು ಆರೋಪಿಸಿ ಕೆರೆ ಬಳಿ ಬ್ಯಾನರ್ ಅಳವಡಿಸಲಾಗಿದೆ.

'ಕೆರೆ ಅಭಿವೃದ್ಧಿಯೋ..? ಎಂಜಿನಿಯರ್ ಅಭಿವೃದ್ಧಿಯೋ..? ಎಂದು ಬ್ಯಾನರ್‌ನಲ್ಲಿ ಪ್ರಶ್ನಿಸಲಾಗಿದೆ. ₹3.79 ಲಕ್ಷ ಮೊತ್ತ ಬಿಲ್ ಮಾಡಲಾಗಿದ್ದು, ಕನಿಷ್ಠ ₹60 ಸಾವಿರ ಮೊತ್ತದಷ್ಟು ಕೂಡ ಕೆಲಸ ನಡೆದಿಲ್ಲ. ಪ್ರಜ್ಞಾವಂತ ಊರಿನ ಹಿರಿಯರು, ಚುನಾಯಿತ ಪ್ರತಿನಿಧಿಗಳು ಇದರ ವಿರುದ್ಧ ಕ್ರಮ ತೆಗೆದುಕೊಳ್ಳುವಂತೆ ಮನವಿ ಮಾಡಲಾಗಿದೆ.

'ಹೂಳನ್ನು ತೆಗೆಯಲು ಕೊಪ್ಪದ ಬಾಳಗಡಿಯಲ್ಲಿನ ಜಿಲ್ಲಾ ಪಂಚಾಯತ್ ಎಂಜಿನಿಯರಿಂಗ್ ಕಚೇರಿಯಲ್ಲಿನ ಎಂಜಿನಿಯರ್ ನೀಡಿದ ಭರವಸೆಯನ್ನು ನಂಬಿ ಗ್ರಾಮದ ಜನರಿಗೆ ಉತ್ತಮ ನೀರು ಕೊಡಲು ಒಪ್ಪಿಕೊಂಡೆ. ಆದರೆ, ಬಿಲ್ ಮಾಡಿ ಹಣ ಪಡೆದಿದ್ದಾನೆ. ಇದರಿಂದ ನನಗೆ ನನ್ನ ಗ್ರಾಮದ ಜನರಿಗೆ ಅನ್ಯಾಯವಾಗಿದೆ' ಎಂಬುದಾಗಿ ವಡ್ಡನಮಕ್ಕಿ ಕೆರೆಯೇ ಪ್ರಶ್ನಿಸುತ್ತಿರುವಂತೆ ಬ್ಯಾನರ್ ಅಳವಡಿಸಲಾಗಿದೆ.

ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ವಾಟ್ಸ್ಆ್ಯಪ್, ಎಕ್ಸ್, ಫೇಸ್‌ಬುಕ್ ಮತ್ತು ಇನ್‌ಸ್ಟಾಗ್ರಾಂನಲ್ಲಿ ಪ್ರಜಾವಾಣಿ ಫಾಲೋ ಮಾಡಿ.

ADVERTISEMENT
ADVERTISEMENT
ADVERTISEMENT
ADVERTISEMENT
ADVERTISEMENT