ಬೀರೂರಿನ ಅಮೃತಮಹಲ್ ತಳಿ ಸಂವರ್ಧನಾ ಕೇಂದ್ರದಲ್ಲಿ ಬುಧವಾರ ಭಾಗವಹಿಸಿದ್ದ ಬಿಡ್‌ದಾರರು
ಶಿವಮೊಗ್ಗ ಜಿಲ್ಲೆ ಶಿಕಾರಿಪುರದ ಹೊಸೂರಿನ ಕೃಷಿಕ ವೀರೇಂದ್ರ ಪಾಟೀಲ್ ₹207500ಕ್ಕೆ ಬಿಡ್ ಮಾಡಿ ಪಡೆದು ಜೋಡಿಕರುಗಳ ಅತಿ ಹೆಚ್ಚಿನ ಬಿಡ್‌ದಾರ ಎನಿಸಿ ಪಶುಸಂಗೋಪನೆ ಮತ್ತು ಮೀನುಗಾರಿಕಾ ಇಲಾಖೆ ಕಾರ್ಯದರ್ಶಿ ವಿನೋದಪ್ರಿಯಾ ಅವರಿಂದ ಟ್ರೋಫಿ ಸ್ವೀಕರಿಸಿದರು
₹1.02 ಕೋಟಿ ಹಣ ಸಂಗ್ರಹ
ಹರಾಜಿನಲ್ಲಿ ಭಾಗವಹಿಸಿದವರು ಅಡ್ಡಗಟ್ಟೆಗಳ ಮೇಲೆ ಕುಳಿತು ಹರಾಜು ಮಾಡುವ ಬದಲು ವ್ಯವಸ್ಥಿತವಾಗಿ ಕುಳಿತು ಹರಾಜು ಕೂಗಲು ವ್ಯವಸ್ಥೆ ಕಲ್ಪಿಸಲಾಗಿತ್ತು. ಹರಾಜು ಕೂಗಿದ ಕರುಗಳನ್ನು 24 ಗಂಟೆಯೊಳಗೆ ಪೂರ್ಣ ಹಣ ಪಾವತಿಸಿ ಬಿಡ್ ಮಾಡಿದವರು ಪಡೆಯಬೇಕಿತ್ತು. ಪ್ರತಿ ಹರಾಜಿನಲ್ಲಿ ಭಾಗವಹಿಸಲು ₹20 ಸಾವಿರ ಪಾವತಿಸಿ ಟೋಕನ್ ಪಡೆಯಬೇಕಿದ್ದು ಹಣ ಪಾವತಿಸಿ ಟೋಕನ್ ಪಡೆಯಲು ನಾಲ್ಕು ಕೌಂಟರ್ ರಚಿಸಲಾಗಿತ್ತು. ಬುಧವಾರ ಸಂಜೆ ವೇಳೆಗೆ ಬಹಳಷ್ಟು ರಾಸುಗಳ ಬಿಡ್ ಮುಗಿದು ₹1.02 ಕೋಟಿ ಹಣ ಸಂಗ್ರಹವಾಗಿದೆ ಎಂದು ಹರಾಜು ಕೇಂದ್ರದ ಅಧಿಕಾರಿಗಳು ತಿಳಿಸಿದರು.
ಅಮೃತಮಹಲ್ ಹೋರಿಕರುಗಳ ಹರಾಜಿನಲ್ಲಿ ಅಜ್ಜಂಪುರ ಕೇಂದ್ರದ ‘ಎ24-37 ಗಂಗೆ ಎ24-40 ಗಾಳಿಕೆರೆ’ ಜೋಡಿ ಕರುಗಳು ಹೆಚ್ಚಿನ ಮೌಲ್ಯಕ್ಕೆ ಮಾರಾಟವಾದವು
ಅಮೃತಮಹಲ್ ತಳಿಯ ರಾಸುಗಳು ಹೆಚ್ಚು ಶಕ್ತಿಯುತ
‘ಅಮೃತಮಹಲ್ ತಳಿಯ ರಾಸುಗಳು ಹೆಚ್ಚು ಶಕ್ತಿಯುತವಾಗಿದ್ದು ಸಾಕುವವರ ನಂಬಿಕೆಗೆ ಪಾತ್ರವಾಗಿವೆ. ನಾವು ಕಳೆದ 15 ವರ್ಷಗಳಿಂದಲೂ ಹರಾಜಿನಲ್ಲಿ ಭಾಗವಹಿಸುತ್ತಿದ್ದು ಪಡೆದ ರಾಸುಗಳನ್ನು ಕೃಷಿ ಹಬ್ಬದಲ್ಲಿ ಕಿಚ್ಚು ಹಾಯಿಸುವುದು ಎತ್ತಿನ ಗಾಡಿ ಓಟದಲ್ಲಿ ಸ್ಪರ್ಧಿಸುವುದು ಮೊದಲಾದ ಚಟುವಟಿಕೆಗಳಲ್ಲಿ ಬಳಸುತ್ತೇವೆ’ ಎಂದು ಶಿಕಾರಿಪುರ ತಾಲ್ಲೂಕಿನ ಹಿರೇಕೋರನಹಳ್ಳಿಯ ಬಸವರಾಜ್ ಸಂಗಡಿಗರು ಪ್ರತಿಕ್ರಿಯಿಸಿದರು.