ಕಳಸ: ತಾಲ್ಲೂಕಿನಲ್ಲಿ ಎರಡು ತಿಂಗಳ ಸತತ ಮಳೆಯಿಂದಾಗಿ ಅಡಿಕೆ ಬೆಳೆಗೆ ಕೊಳೆ ರೋಗ ಶುರು ಆಗಿದೆ. ರೋಗ ನಿಯಂತ್ರಣಕ್ಕೆ ಔಷಧ ಸಿಂಪರಣೆ ಮಾಡಲು ಮಳೆ ಬಿಡುವು ನೀಡುತ್ತಿಲ್ಲ.

ಕಳಸದಲ್ಲಿ ಮೇ 15ರಿಂದ ಈವರೆಗೆ 2,500 ಮಿ.ಮೀ ಮಳೆ ದಾಖಲಾಗಿದೆ. ನೆಲ್ಲಿಬೀಡು, ಜಾಂಬಳೆ ಪ್ರದೇಶದಲ್ಲಿ 3,500 ಮಿ.ಮೀ ಮಳೆ ಆಗಿದೆ. ಜೂನ್ ಮೊದಲ ವಾರದ ಬಿಡುವು ಕೊಟ್ಟಿದ್ದು ಬಿಟ್ಟರೆ, ಆನಂತರ ಸೂರ್ಯನ ದರ್ಶನ ಅಪರೂಪ ಎಂಬಂತಾಗಿದೆ. ಇದರಿಂದ ಮಣ್ಣಿನಲ್ಲಿ ತೇವಾಂಶ ಮತ್ತು ವಾತಾವರಣದಲ್ಲಿ ಆರ್ದ್ರತೆ ಹೆಚ್ಚಾಗಿದೆ. ಶಿಲೀಂದ್ರಗಳ ಬೆಳವಣಿಗೆಗೆ ಇದು ಪೂರಕವಾಗಿದ್ದು, ಅಡಿಕೆಗೆ ಕೊಳೆ ರೋಗ ತಗುಲಿದೆ.

ಜೂನ್ ಮೊದಲ ವಾರದಲ್ಲಿ ಮೊದಲ ಸುತ್ತಿನ ಬೋರ್ಡೊ ಔಷಧ ಸಿಂಪರಣೆ ಮಾಡಿದ್ದ ಬೆಳೆಗಾರರು, ಈಗ ಎರಡನೇ ಸುತ್ತಿನ ಔಷಧ ಸಿಂಪರಣೆಗೆ ಸಜ್ಜಾಗಿದ್ದಾರೆ. ಆದರೆ, ಮಳೆ ಬಿಡುವು ನೀಡದೆ ಇರುವುದರಿಂದ ಔಷಧ ಸಿಂಪರಣೆ ಮಾಡಲು ಆಗುತ್ತಿಲ್ಲ. ಅನೇಕ ಕೃಷಿಕರು ಏಣಿ ಬಳಸಿ ಅಡಿಕೆ ಮರ ಹತ್ತಿ ಔಷಧ ಹೊಡೆಯುತ್ತಿದ್ದಾರೆ.

‘ಬೆಳಿಗ್ಗೆ ಔಷಧ ಹರಡುವಷ್ಟರಲ್ಲಿ ಮಳೆ ಶುರುವಾಗುತ್ತದೆ. ಪ್ರತಿದಿನ ತೋಟಕ್ಕೆ ಜನರನ್ನು ಕರೆದುಕೊಂಡು ಹೋಗಿ ಔಷಧ ಹೊಡೆಯಲು ಪ್ರಯತ್ನ ಮಾಡಿದರೂ ಆಗುತ್ತಿಲ್ಲ. ಔಷಧದ ಜತೆಗೆ ಕೂಲಿ ಹಣವೂ ವ್ಯರ್ಥವಾಗು ತ್ತಿದೆ’ ಎಂದು ಅಡಿಕೆ ಬೆಳೆಗಾರ ಗೋಪಾಲ ಭಟ್ ಹೇಳುತ್ತಾರೆ.

ಮಳೆಯಿಂದಾಗಿ ಅಡಿಕೆ ಮರ ಬಹಳ ಜಾರುತ್ತದೆ. ಮರ ಹತ್ತುವುದು ಬಹಳ ಕಷ್ಟ. ಮಳೆ ಬಿಟ್ಟಾಗ ಮರ ಹತ್ತುವ ಸೈಕಲ್ ಬಳಸಿ ಔಷಧ ಹೊಡೆಯುತ್ತಿದ್ದೇವೆ. ಆದರೆ ಕೆಲಸ ಸಾಗುತ್ತಿಲ್ಲ ಎಂದು ಔಷಧ ಸಿಂಪರಿಸುವ ಹೇರಡಿಕೆಯ ಗಣೇಶ್ ಹೇಳುತ್ತಾರೆ.

ಎಲೆಚುಕ್ಕೆ ರೋಗದಿಂದ ಈಗಾಗಲೇ ಬಹಳಷ್ಟು ಹಾನಿ ಆಗಿದೆ. ಇದರ ಜೊತೆಗೆ ಕೊಳೆರೋಗವೂ ಬಾಧಿಸಿದರೆ ಮುಂದಿನ ಫಸಲಿನ ಬಗ್ಗೆ ನಿರೀಕ್ಷೆ ಇಟ್ಟುಕೊಳ್ಳುವುದೇ ಬೇಡ ಎಂಬಂತಾಗಿದೆ ಎಂಬುದು ಎಳನೀರಿನ ಬೆಳೆಗಾರ ಮೃತ್ಯುಂಜಯ ನಾಯಕ್ ಅಭಿಪ್ರಾಯ.

ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ವಾಟ್ಸ್ಆ್ಯಪ್, ಎಕ್ಸ್, ಫೇಸ್ಬುಕ್ ಮತ್ತು ಇನ್ಸ್ಟಾಗ್ರಾಂನಲ್ಲಿ ಪ್ರಜಾವಾಣಿ ಫಾಲೋ ಮಾಡಿ.