ಹಲ್ಲೆ, ಕೊಲೆ ಬೆದರಿಕೆ: 10 ತಿಂಗಳು ಜೈಲು, ದಂಡ

7

ಹಲ್ಲೆ, ಕೊಲೆ ಬೆದರಿಕೆ: 10 ತಿಂಗಳು ಜೈಲು, ದಂಡ

Published:
Updated:

ಚಿಕ್ಕಮಗಳೂರು: ಅವಾಚ್ಯವಾಗಿ ನಿಂದನೆ, ಹಲ್ಲೆ, ಜೀವ ಬೆದರಿಕೆ ಪ್ರಕರಣದಲ್ಲಿ ಕೊಪ್ಪ ತಾಲ್ಲೂಕಿನ ಹಂಚಿನಹಕ್ಲುವಿನ ಮೇಲಿನಪೇಟೆಯ ಸುರೇಶ್‌ಗೆ 10 ತಿಂಗಳು ಜೈಲು, ₹ 5 ಸಾವಿರ ದಂಡವನ್ನು ಕೊಪ್ಪದ ಹಿರಿಯ ಸಿವಿಲ್ ಮತ್ತು ಜೆಎಂಎಫ್‌ ಕೋರ್ಟ್‌ ವಿಧಿಸಿದೆ.

ನ್ಯಾಯಾಧೀಶರಾದ ಅನಿತಾ ಅವರು ಈ ಆದೇಶ ನೀಡಿದ್ದಾರೆ. ಹಲ್ಲೆ (ಐಪಿಸಿ 324) ಕೃತ್ಯಕ್ಕೆ ಆರು ತಿಂಗಳು ಜೈಲು, ₹ 3,000 ದಂಡ, ಶಾಂತಿ ಭಂಗ (ಐಪಿಸಿ 504) ಕೃತ್ಯಕ್ಕೆ ಮೂರು ತಿಂಗಳು ಜೈಲು, ₹ 1,000 ದಂಡ ಹಾಗೂ ಜೀವ ಬೆದರಿಕೆ (ಐಪಿಸಿ 506) ಹಾಕಿದ್ದಕ್ಕೆ ಒಂದು ತಿಂಗಳು ಜೈಲು, ₹ 1,000 ದಂದ ವಿಧಿಸಿದ್ದಾರೆ.

ಏನಿದು ಪ್ರಕರಣ: 2012ರ ನವೆಂಬರ್‌ 27ರಂದು ಈ ಪ್ರಕರಣ ನಡೆದಿತ್ತು. ಮನೆಯ ಹಿಂಭಾಗದಲ್ಲಿ ಬೇಲೆ ನಿರ್ಮಾಣ ಸಂದರ್ಭದಲ್ಲಿ ಸುರೇಶ್‌ ಬಿದಿರು ಕೋಲಿನಿಂದ ಕೆ.ಜಿ.ಪ್ರಕಾಶ್‌ ತಲೆಗೆ ಹೊಡೆದು ಗಾಯಗೊಳಿಸಿದ್ದ. ಅಲ್ಲದೇ ಕೊಲೆ ಮಾಡುವುದಾಗಿ ಬೆದರಿಕೆ ಹಾಕಿದ್ದ.

ಕೊಪ್ಪ ಠಾಣೆ ಪೊಲೀಸರು ಪ್ರಕರಣ ದಾಖಲಿಸಿಕೊಂಡು ಕೋರ್ಟ್‌ಗೆ ದೋಷಾರೋಪಣೆ ಪಟ್ಟಿ ಸಲ್ಲಿಸಿದ್ದರು. ಸರ್ಕಾರದ ಪರವಾಗಿ ಸಹಾಯಕ ಪಬ್ಲಿಕ್‌ ಪ್ರಾಸಿಕ್ಯುಟರ್‌ ಶಾಂಭವಿ ವಾದ ಮಂಡಿಸಿದ್ದರು.

ಬರಹ ಇಷ್ಟವಾಯಿತೆ?

 • 0

  Happy
 • 0

  Amused
 • 0

  Sad
 • 0

  Frustrated
 • 0

  Angry

Comments:

0 comments

Write the first review for this !