ಶುಕ್ರವಾರ, 26 ಏಪ್ರಿಲ್ 2024
×
ADVERTISEMENT
ಈ ಕ್ಷಣ :
ADVERTISEMENT
ADVERTISEMENT

ಪಹಣಿಗಾಗಿ ರೈತರು ಲಂಚ ನೀಡಬೇಡಿ

ಅಕ್ರಮ-– ಸಕ್ರಮ ಸಮಿತಿಯ ಸಭೆಯಲ್ಲಿ ವಿಧಾನ ಪರಿಷತ್ ಸದಸ್ಯ ಪ್ರಾಣೇಶ್
Last Updated 16 ಸೆಪ್ಟೆಂಬರ್ 2020, 5:36 IST
ಅಕ್ಷರ ಗಾತ್ರ

ಶೃಂಗೇರಿ: ‘ಅಕ್ರಮ ಸಕ್ರಮಕ್ಕೆ ನೀಡಲಾದ ಅರ್ಜಿಗಳಲ್ಲಿ ಸಣ್ಣ ರೈತರ ಅರ್ಜಿಗಳನ್ನು ಮೊದಲು ಎತ್ತಿಕೊಳ್ಳಲಾಗುವುದು’ ಎಂದು ಕಸಬಾ ಹೋಬಳಿಯ ಬಗರ್ ಹುಕುಂ ಅಕ್ರಮ-ಸಕ್ರಮ ಸಮಿತಿ ಅಧ್ಯಕ್ಷ ಮತ್ತು ವಿಧಾನ ಪರಿಷತ್ ಸದಸ್ಯ ಎಂ.ಕೆ.ಪ್ರಾಣೇಶ್ ತಿಳಿಸಿದರು.

ತಾಲ್ಲೂಕು ಕಚೇರಿಯಲ್ಲಿ ಬಗರ್ ಹುಕುಂ ಅಕ್ರಮ-ಸಕ್ರಮ ಸಮಿತಿಯ ಮೊದಲ ಸಭೆ ನಡೆಸಿ ಪತ್ರಕರ್ತರೊಂದಿಗೆ ಅವರು ಮಾತನಾಡಿದರು.

‘ಸರ್ಕಾರವು ತಮಗೆ ಶೃಂಗೇರಿ ವಿಧಾನಸಭಾ ಕ್ಷೇತ್ರದ ಮೂರು ತಾಲ್ಲೂಕಿನ 4 ಹೋಬಳಿಗಳ ಅಕ್ರಮ-ಸಕ್ರಮದ ಜವಾಬ್ದಾರಿ ವಹಿಸಿದೆ. ಸರ್ಕಾರವು ರೈತರಿಗೆ ಅನುಕೂಲ ಮಾಡಿಕೊಡುವ ಉದ್ದೇಶದಿಂದ ಎರಡು ಸಮಿತಿಯನ್ನು ಇಲ್ಲಿ ರಚಿಸಿದ್ದು, ನಾವು ಯಾವುದೇ ರಾಜಕಾರಣ ಮಾಡದೇ ರೈತರ ಹಿತ ರಕ್ಷಣೆಗೆ ಆದ್ಯತೆ ಕೊಡುತ್ತೇವೆ. ಇಂದು ಇಲ್ಲಿನ ಕಡತಗಳ ಸಂಖ್ಯೆಗಳ ಮಾಹಿತಿಯನ್ನು ಕ್ರೋಡೀಕರಿಸಿದ್ದು ಅ.15 ರೊಳಗೆ ಪೂರ್ಣ ಪ್ರಮಾಣದ ಕಲಾಪ ನಡೆಸಲಾಗುವುದು’ ಎಂದರು.

‘ಈಗಾಗಲೇ ಮಂಜೂರಾತಿಯಾಗಿ ಹಕ್ಕುಪತ್ರ ನೀಡಿರುವ 366 ಅರ್ಜಿದಾರರಿಗೆ ಜಿಲ್ಲಾಧಿಕಾರಿಯೊಂದಿಗೆ ಚರ್ಚಿಸಿ, ಪಹಣಿಯನ್ನು ಮೊದಲು ಕೊಡುತ್ತೇವೆ. ಇದಕ್ಕಾಗಿ ಯಾರೂ ಲಂಚ ಕೊಡಬಾರದು ಅಥವಾ ಮಧ್ಯವರ್ತಿಗಳನ್ನು ಆಶ್ರಯಿಸಬಾರದು’ ಎಂದು ಮನವಿ ಮಾಡಿದರು.

‘ನಮ್ಮ ಸರ್ಕಾರ ಈಗ ಇಲ್ಲಿಗೆ ಕಾಯಂ ತಹಶೀಲ್ದಾರರನ್ನು ನೇಮಿಸಿದ್ದು, ತಾಲ್ಲೂಕು ಕಚೇರಿಯ ಯಾವ ಸಿಬ್ಬಂದಿ ಯೂ ಇನ್ನು ಕರ್ತವ್ಯದಿಂದ ತಪ್ಪಿಸಿಕೊಳ್ಳಲು ಸಾಧ್ಯವಿಲ್ಲ. ಕೊಟ್ಟ ಜವಾಬ್ದಾರಿಯನ್ನು ನಿಗದಿತ ಸಮಯ ದಲ್ಲಿ ಮುಗಿಸಬೇಕು’ ಎಂದು ಅಧಿಕಾರಿ ಗಳಿಗೆ ತಾಕೀತು ಮಾಡಿದ್ದೇನೆ' ಎಂದರು.

‘ಫಾರಂ ನಂ.53 ರಲ್ಲಿ 573 ಅರ್ಜಿಗಳು ಮತ್ತು 57 ರಲ್ಲಿ 4,429 ಅರ್ಜಿಗಳು ಬಾಕಿ ಉಳಿದಿರುತ್ತವೆ. ಕೆಲವು ಪ್ರಕರಣಗಳಲ್ಲಿ ಸೊಪ್ಪಿನ ಬೆಟ್ಟ ತಕರಾರು, ಸರ್ಕಾರದ ಮಂಜೂರಾತಿ ಮೊದಲಾದ ಸಮಸ್ಯೆ ಇವೆ. ಸೊಪ್ಪಿನ ಬೆಟ್ಟದಲ್ಲಿನ ಮಂಜೂರಾತಿ ಸಮಸ್ಯೆಗೆ ಅಧಿವೇಶನದಲ್ಲಿ ಪರಿಹಾರ ಕಂಡುಕೊ ಳ್ಳುವ ಪ್ರಯತ್ನ ಮಾಡುತ್ತೇವೆ’ ಎಂದರು.

ಬಿಜೆಪಿ ತಾಲ್ಲೂಕು ಅಧ್ಯಕ್ಷ ತಲಗಾರು ಉಮೇಶ್, ಜಿಲ್ಲಾ ಪ್ರಧಾನ ಕಾರ್ಯದರ್ಶಿ ಅಂಬ್ಲೂರು ರಾಮಕೃಷ್ಣ, ನಯನ, ಜಿಲ್ಲಾ ಪಂಚಾಯಿತಿ ಸದಸ್ಯ ಬಿ.ಶಿವಶಂಕರ್, ಶಿಲ್ಪಾರವಿ, ಹೊಸೂರು ಮಂಜುನಾಥ್ ಇದ್ದರು.

ತಾಜಾ ಸುದ್ದಿಗಾಗಿ ಪ್ರಜಾವಾಣಿ ಟೆಲಿಗ್ರಾಂ ಚಾನೆಲ್ ಸೇರಿಕೊಳ್ಳಿ | ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ನಮ್ಮ ಫೇಸ್‌ಬುಕ್ ಪುಟ ಫಾಲೋ ಮಾಡಿ.

ADVERTISEMENT
ADVERTISEMENT
ADVERTISEMENT
ADVERTISEMENT
ADVERTISEMENT