ಗುರುವಾರ, 25 ಏಪ್ರಿಲ್ 2024
×
ADVERTISEMENT
ಈ ಕ್ಷಣ :
ADVERTISEMENT
ADVERTISEMENT

ಪರಿಹಾರ ನೀಡಲು ಕಾಫಿ ಬೆಳೆಗಾರರ ಆಗ್ರಹ

Last Updated 10 ಸೆಪ್ಟೆಂಬರ್ 2022, 5:21 IST
ಅಕ್ಷರ ಗಾತ್ರ

ಸಂಗಮೇಶ್ವರಪೇಟೆ (ಬಾಳೆಹೊನ್ನೂರು): ಭಾರಿ ಮಳೆಯಿಂದ ಕಾಫಿ ಬೆಳೆಗೆ ಹಾನಿಯಾಗಿದ್ದು ಸರ್ಕಾರ ಕೂಡಲೇ ಪರಿಹಾರ ನೀಡುವಂತೆ ಜಿಲ್ಲಾಧಿಕಾರಿ ಮತ್ತು ಎನ್‌ಡಿಆರ್‌ಎಫ್ ತಂಡಕ್ಕೆ ಕಾಫಿ ಬೆಳೆಗಾರರು ಮನವಿ ಮಾಡಿದರು.

ಖಾಂಡ್ಯ ಪ್ಲಾಂಟರ್ಸ್‌ ಕ್ಲಬ್‌ನಲ್ಲಿ ಅಧಿಕಾರಿಗಳನ್ನು ಭೇಟಿ ಮಾಡಿ ಮನವಿ ಸಲ್ಲಿಸಿದರು. ಸರಾಸರಿ 60ರಿಂದ 70 ಇಂಚು ಮಳೆಯಾಗುತ್ತಿದ್ದ ಈ ಭಾಗದಲ್ಲಿ ಈ ಬಾರಿ ವಾಡಿಕೆಗಿಂತ ಗರಿಷ್ಠ 100ರಿಂದ 120 ಇಂಚು ಮಳೆಯಾಗಿದೆ. ಇದರಿಂದಾಗಿ ಕಾಫಿ, ಅಡಿಕೆ, ಕಾಳುಮೆಣಸು, ಭತ್ತ ಮುಂತಾದ ಬೆಳೆಗಳಿಗೆ ಶೇ 40ರಷ್ಟು ಹಾನಿಯಾಗಿದ್ದು ರೈತರು ಸಂಕಷ್ಟಕ್ಕೆ ಸಿಲುಕಿದ್ದಾರೆ. ಖಾಂಡ್ಯ ಹೋಬಳಿಯ ಕೆಲವು ಗ್ರಾಮಗಳಲ್ಲಿ ದಿನಕ್ಕೆ 5ರಿಂದ 6 ಇಂಚು ಮಳೆ ಸುರಿದು ಜಮೀನು, ಬೆಳೆಗಳು ಕೊಚ್ಚಿ ಹೋಗಿ, ರಸ್ತೆಗಳಿಗೆ ಹಾನಿಯಾಗಿದೆ. ಬೆಳೆ ಹಾನಿಯಾದ ಕಾರಣ ಬ್ಯಾಂಕ್‌ಗಳಲ್ಲಿ ಸಾಲ ಪಡೆದು ಕೃಷಿ ಮಾಡುತ್ತಿರುವ ರೈತರಿಗೆ ಸಾಲ ತೀರಿಸಿ, ಜೀವನ ಸಾಗಿಸುವುದು ಕಷ್ಟಸಾಧ್ಯವಾಗಿದೆ. ಹೋಬಳಿಯಾದ್ಯಂತ ಆಗಿರುವ ಮಳೆಹಾನಿ ಕುರಿತು ರಾಜ್ಯ ಮತ್ತು ಕೇಂದ್ರ ಸರ್ಕಾರಕ್ಕೆ ವರದಿ ಸಲ್ಲಿಸಿ ರೈತರಿಗೆ ಅನುಕೂಲ ಮಾಡಿಕೊಡುವಂತೆ ಮನವಿಯಲ್ಲಿ ವಿನಂತಿಸಲಾಗಿದೆ.

ವಿಧಾನ ಪರಿಷತ್ ಸದಸ್ಯ ಎಸ್.ವಿ.ಮಂಜುನಾಥ್, ಖಾಂಡ್ಯ ಬೆಳೆಗಾರರ ಸಂಘದ ಅಧ್ಯಕ್ಷ ಎಸ್.ವಿ.ಶಂಕರ್, ಉಪಾಧ್ಯಕ್ಷ ಬಿ.ಶ್ರೀಧರ್, ಕಾರ್ಯದರ್ಶಿ ಬಿ.ಎಸ್.ರತ್ನಾಕರ್, ಕೆಜಿಎಫ್ ನಿರ್ಧೇಶಕ ಗೋಕುಲ್ ಸಾರಗೋಡು, ಕೆಜಿಎಫ್ ಅಧ್ಯಕ್ಷ ಡಾ.ಎಚ್.ಟಿ.ಮೋಹನ್ ಕುಮಾರ್ ಇದ್ದರು.

ತಾಜಾ ಸುದ್ದಿಗಾಗಿ ಪ್ರಜಾವಾಣಿ ಟೆಲಿಗ್ರಾಂ ಚಾನೆಲ್ ಸೇರಿಕೊಳ್ಳಿ | ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ನಮ್ಮ ಫೇಸ್‌ಬುಕ್ ಪುಟ ಫಾಲೋ ಮಾಡಿ.

ADVERTISEMENT
ADVERTISEMENT
ADVERTISEMENT
ADVERTISEMENT
ADVERTISEMENT