ಮೂಡಿಗೆರೆ: ತಾಲ್ಲೂಕಿನ ಬಣಕಲ್ ಪ್ರಾಥಮಿಕ ಕೃಷಿ ಪತ್ತಿನ ಸಹಕಾರಿ ಸಂಘದ ಆಡಳಿತ ಮಂಡಳಿ ನೂತನ ಅಧ್ಯಕ್ಷರಾಗಿ ಬಿಜೆಪಿ ಬೆಂಬಲಿತ ಅಭ್ಯರ್ಥಿ ಬಿ.ಎಸ್. ನಾರಾಯಣಗೌಡ, ಉಪಾಧ್ಯಕ್ಷರಾಗಿ ಬಿ.ಆರ್. ರಂಗನಾಥ್ ಅವಿರೋಧವಾಗಿ ಆಯ್ಕೆಯಾದರು.

ಅಧ್ಯಕ್ಷ ಹಾಗೂ ಉಪಾಧ್ಯಕ್ಷ ಸ್ಥಾನಗಳಿಗೆ ನಡೆದ ಚುನಾವಣೆ ಪ್ರಕ್ರಿಯೆಯಲ್ಲಿ ಬಿ.ಎಸ್. ನಾರಾಯಣಗೌಡ, ಬಿ.ಆರ್. ರಂಗನಾಥ್ ಹೊರತು ಪಡಿಸಿ ಬೇರೆ ಯಾರೂ ನಾಮಪತ್ರ ಸಲ್ಲಿಸದ ಕಾರಣ ಚುನಾವಣಾ ಅಧಿಕಾರಿ ಜ್ಯೋತಿಲಕ್ಷ್ಮಿ ಅಧ್ಯಕ್ಷ ಹಾಗೂ ಉಪಾಧ್ಯಕ್ಷರ ಅವಿರೋಧ ಆಯ್ಕೆಯನ್ನು ಪ್ರಕಟಿಸಿದರು.

ಅಭಿನಂದನಾ ಸಮಾರಂಭದಲ್ಲಿ ಮಾತನಾಡಿದ ನೂತನ ಅಧ್ಯಕ್ಷ ನಾರಾಯಣಗೌಡ, ‘ಎಲ್ಲರನ್ನೂ ವಿಶ್ವಾಸಕ್ಕೆ ತೆಗೆದುಕೊಂಡು ರೈತರ ಸೇವೆ ಮಾಡಲು ಶ್ರಮಿಸುತ್ತೇನೆ. ಸಹಕಾರ ಸಂಘದಿಂದ ರೈತರಿಗೆ ದೊರೆಯುವ ಎಲ್ಲಾ ಸೌಲಭ್ಯಗಳ ಜೊತೆಯಲ್ಲಿ ಸಾಧ್ಯವಾಗುವ ಎಲ್ಲಾ ರೀತಿಯ ಸಹಕಾರವನ್ನು ಕೊಡಲು ಬದ್ಧನಾಗಿದ್ದೇನೆʼ ಎಂದರು.

ಉಪಾಧ್ಯಕ್ಷ ಬಿ.ಆರ್. ರಂಗನಾಥ್ ಮಾತನಾಡಿ, ‘ಪ್ರಾಮಾಣಿಕವಾಗಿ ಒಗ್ಗಟ್ಟಿನಿಂದ ಕೆಲಸ ಮಾಡುತ್ತೇನೆ. ಪ್ರಾಥಮಿಕ ಕೃಷಿ ಪತ್ತಿನ ಸಹಕಾರ ಸಂಘದ ನಿರ್ದೇಶಕರ ಚುನಾವಣೆಯಲ್ಲಿ ಜಯಗಳಿಸಿ ಆಡಳಿತ ಮಂಡಳಿ ಉಪಾಧ್ಯಕ್ಷನಾಗಿ ಅಧಿಕಾರ ಪಡೆಯಲು ಸಹಕರಿಸಿ ಎಲ್ಲಾ ಸದಸ್ಯರುಗಳಿಗೆ ತುಂಬು ಹೃದಯದ ಧನ್ಯವಾದ ನ ಸಲ್ಲಿಸುತ್ತೇನೆʼ ಎಂದರು.

ನಿರ್ದೇಶಕರಾದ ಬಿ.ಎಂ. ಭರತ್, ಬಿ.ಎಸ್. ವಿಕ್ರಂ, ಗಜೇಂದ್ರ ಟಿ.ಎಂ, ಅಭಿಲಾಷ್ ಎ.ಆರ್, ಕಲ್ಲೇಶ್ ಬಿ.ಎಸ್, ಕೆ.ಕೆ. ಯತೀಶ್, ಮಮತಾ ಎಚ್.ಕೆ, ರವೀಂದ್ರ ಬಿ.ಎಂ, ಲಕ್ಷ್ಮಿ ಜಿ.ಬಿ, ಶರತ್ ಬಿ.ಬಿ. ಮುಖ್ಯ ಕಾರ್ಯನಿರ್ವಹಣಾಧಿಕಾರಿ ನಿಶಾಂತ್ ಇದ್ದರು.

ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ವಾಟ್ಸ್ಆ್ಯಪ್, ಎಕ್ಸ್, ಫೇಸ್ಬುಕ್ ಮತ್ತು ಇನ್ಸ್ಟಾಗ್ರಾಂನಲ್ಲಿ ಪ್ರಜಾವಾಣಿ ಫಾಲೋ ಮಾಡಿ.