ಭಾನುವಾರ, ನವೆಂಬರ್ 29, 2020
19 °C

ಚಿಕ್ಕಮಗಳೂರು: ಹೆಣ್ಣು ಹುಲಿ ಕಳೇಬರ ಪತ್ತೆ

ಪ್ರಜಾವಾಣಿ ವಾರ್ತೆ Updated:

ಅಕ್ಷರ ಗಾತ್ರ : | |

Prajavani

ಚಿಕ್ಕಮಗಳೂರು: ಜಿಲ್ಲೆಯ ಭದ್ರಾ ವನ್ಯಜೀವಿ ವಿಭಾಗದ ಹೆಬ್ಬೆ ವಲಯದ ತೇಗೂರುಗುಡ್ಡ ವ್ಯಾಪ್ತಿಯಲ್ಲಿ ಮಂಗಳವಾರ ಹುಲಿ ಕಳೇಬರ ಪತ್ತೆಯಾಗಿದೆ.

ಅರಣ್ಯ ಸಿಬ್ಬಂದಿ ಗಸ್ತಿನಲ್ಲಿದ್ದಾಗ ಶವ ಕಾಣಿಸಿದೆ. ಸಾವಿಗೆ ಕಾರಣ ತಿಳಿದಿಲ್ಲ.

‌‘ಹೆಣ್ಣು ಹುಲಿ ಕಳೇಬರ ಪತ್ತೆಯಾಗಿದೆ. ವಯಸ್ಸು 5ರಿಂದ 6 ವರ್ಷ. ಮೃತಪಟ್ಟು ಎರಡ್ಮೂರು ದಿನಗಳಾಗಿವೆ’ ಎಂದು ಹುಲಿ ಯೋಜನೆ ಕ್ಷೇತ್ರ ನಿರ್ದೇಶಕ ತಾಕತ್‌ ಸಿಂಗ್‌ ರಾಣವತ್‌ ‘ಪ್ರಜಾವಾಣಿ’ಗೆ ತಿಳಿಸಿದರು.

‘ಶಿವಮೊಗ್ಗದಿಂದ ವನ್ಯಜೀವಿ ವಿಭಾಗದ ಪಶುವೈದ್ಯರ ಸ್ಥಳಕ್ಕೆ ಬಂದಿದ್ದಾರೆ. ಬುಧವಾರ ಮರಣೋತ್ತರ ಪರೀಕ್ಷೆ ನಡೆಯಲಿದೆ’ ಎಂದು ತಿಳಿಸಿದರು.

ಪ್ರಜಾವಾಣಿ ಫೇಸ್‌ಬುಕ್ ಪುಟವನ್ನು ಲೈಕ್ ಮಾಡಿ, ಪ್ರಮುಖ ಸುದ್ದಿಗಳ ಅಪ್‌ಡೇಟ್ಸ್ ಪಡೆಯಿರಿ.

ಪ್ರಜಾವಾಣಿಯನ್ನು ಟ್ವಿಟರ್‌ನಲ್ಲಿ ಇಲ್ಲಿ ಫಾಲೋ ಮಾಡಿ.

ಟೆಲಿಗ್ರಾಂ ಮೂಲಕ ನಮ್ಮ ಸುದ್ದಿಗಳ ಅಪ್‌ಡೇಟ್ಸ್ ಪಡೆಯಲು ಇಲ್ಲಿ ಕ್ಲಿಕ್ ಮಾಡಿ.