ಚಿಕ್ಕಮಗಳೂರು: ಪರಿಶಿಷ್ಟ ಜಾತಿ ಮತ್ತು ಪರಿಶಿಷ್ಟ ಪಂಗಡದ ಅಭಿವೃದ್ಧಿಗೆ ಮೀಸಲಿಟ್ಟಿದ್ದ ಎಸ್ಸಿಎಸ್ಪಿ/ಟಿಎಸ್ಪಿ ಯೋಜನೆ ಹಣವನ್ನು ಗ್ಯಾರಂಟಿ ಯೋಜನೆಗೆ ಬಳಕೆ ಮಾಡಿರುವ ಕಾಂಗ್ರೆಸ್ ನೇತೃತ್ವದ ರಾಜ್ಯ ಸರ್ಕಾರದ ವಿರುದ್ಧ ಜಿಲ್ಲಾ ಬಿಜೆಪಿ ಕಾರ್ಯಕರ್ತರು ನಗರದ ಆಜಾದ್ ಪಾರ್ಕ್ ವೃತ್ತದಲ್ಲಿ ಶನಿವಾರ ಪ್ರತಿಭಟನೆ ನಡೆಸಿದರು.

ವಿಧಾನಪರಿಷತ್ ಮುಖ್ಯ ಸಚೇತಕರಾದ ಎನ್.ರವಿಕುಮಾರ್ ಮಾತನಾಡಿ, ‘16ನೇ ಬಾರಿ ಬಜೆಟ್ ಮಂಡಿಸಿರುವ ಸಿದ್ದರಾಮಯ್ಯನವರಿಗೆ ಬಹಳ ಅನುಭವ ಇದೆ. ಉತ್ತಮವಾದ ಬಜೆಟ್ ಮಂಡಿಸುತ್ತಾರೆ ಎಂದು ನಾವೆಲ್ಲರೂ ಭಾವಿಸಿದ್ದೆವು ಆದರೆ ಈ ಬಾರಿಯ ಬಜೆಟ್ ರಂಜಾನ್ ಬಜೆಟ್, ಹಲಾಲ್ ಬಜೆಟ್, ಮುಸ್ಲೀಮರ ಬಜೆಟ್ ಆಗಿದೆ’ ಎಂದು ಹೇಳಿದರು.

ಅಲ್ಪಸಂಖ್ಯಾತರಿಗೆ ಶೇ 20 ಸೈಟ್ಗಳನ್ನು ಮೀಸಲಿಡಲಾಗಿದೆ, ರಾಜ್ಯದಲ್ಲಿ ಒಂದು ರೀತಿಯ ಟಿಪ್ಪು ಸುಲ್ತಾನ್ ಸರ್ಕಾರ ಇದೆ ಎಂದು ಭಾಸವಾಗುತ್ತಿದೆ. ಮಸೀದಿಗಳಲ್ಲಿ ಪ್ರಾರ್ಥನೆ ಮಾಡುವವರಿಗೆ ಪ್ರತಿ ತಿಂಗಳು ₹6 ಸಾವಿರ ನೀಡಲು ತೀರ್ಮಾನಿಸಿದೆ. ಮುಸಲ್ಮಾನ ಸಮುದಾಯ ವಿದ್ಯಾರ್ಥಿಗಳಿಗೆ ಶುಲ್ಕ ರಿಯಾಯಿತಿ ನೀಡಿದೆ. ವಕ್ಫ್ ಆಸ್ತಿಗಳ ರಕ್ಷಣೆಗೆ ₹150 ಕೋಟಿ ಮೀಸಲಿಟ್ಟಿದ್ದಾರೆ ಇದು ಖಂಡನೀಯ. ಎಸ್ಸಿ/ ಎಸ್ಟಿ ಸಮುದಾಯವನ್ನು ಕಡೆಗಣಿಸಿದ್ದಾರೆ ಎಂದರು.

ಪ್ರತಿಭಟನೆಯಲ್ಲಿ ಮಾಜಿ ಶಾಸಕ ನಂಜನಗೂಡಿನ ಹರ್ಷವರ್ಧನ್, ಬಿಜೆಪಿ ಜಿಲ್ಲಾಧ್ಯಕ್ಷ ದೇವರಾಜ್ ಶೆಟ್ಟಿ, ಪುಣ್ಯಪಾಲ್, ದೀಪಕ್ ದೊಡ್ಡಯ್ಯ, ಪುಟ್ಟಸ್ವಾಮಿ, ಪುಷ್ಪರಾಜ್, ಸಚಿನ್, ಕುರುವಂಗಿ ವೆಂಕಟೇಶ್, ಕೇಶವ, ನರೇಂದ್ರ ಇದ್ದರು.

ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ವಾಟ್ಸ್ಆ್ಯಪ್, ಎಕ್ಸ್, ಫೇಸ್ಬುಕ್ ಮತ್ತು ಇನ್ಸ್ಟಾಗ್ರಾಂನಲ್ಲಿ ಪ್ರಜಾವಾಣಿ ಫಾಲೋ ಮಾಡಿ.