ಶನಿವಾರ, 4 ಮೇ 2024
×
ADVERTISEMENT
ಈ ಕ್ಷಣ :
ADVERTISEMENT
ADVERTISEMENT

ಬಿಜೆಪಿ ಕಾರ್ಯಕರ್ತರ ಸಂಭ್ರಮಾಚರಣೆ

15ನೇ ರಾಷ್ಟ್ರಪತಿಯಾಗಿ ದೌಪದಿ ಮುರ್ಮು ಪ್ರಮಾಣ
Last Updated 26 ಜುಲೈ 2022, 6:32 IST
ಅಕ್ಷರ ಗಾತ್ರ

ಚಿಕ್ಕಮಗಳೂರು: ಭಾರತದ 15ನೇ ರಾಷ್ಟ್ರಪತಿಯಾಗಿ ದೌಪದಿ ಮುರ್ಮು ಅವರು ಪ್ರಮಾಣ ವಚನ ಸ್ವೀಕರಿಸಿದ ಅಂಗವಾಗಿ ಬಿಜೆಪಿ ಕಾರ್ಯಕರ್ತರು ನಗರದಲ್ಲಿ ಸಂಭ್ರಮಾಚರಣೆ ಮಾಡಿದರು.

ಆಜಾದ್ ಪಾರ್ಕ್‌ ವೃತ್ತದಲ್ಲಿ ಸಮಾವೇಶಗೊಂಡುಪಟಾಕಿ ಸಿಡಿಸಿ, ಸಿಹಿ ಹಂಚಿ, ಕುಣಿದು, ಜಯಘೋಷ ಕೂಗಿ ಹರ್ಷ ವ್ಯಕ್ತಪಡಿಸಿದರು.

ಬಿಜೆಪಿ ಎಸ್‌ಸಿ ಮೋರ್ಚಾದ ಜಿಲ್ಲಾ ಘಟಕದ ಅಧ್ಯಕ್ಷ ಕೆ.ಪಿ.ವೆಂಕಟೇಶ್ ಮಾತನಾಡಿ, ಬುಡಕಟ್ಟು ಸಮುದಾಯದ ಮಹಿಳೆಯೊಬ್ಬರನ್ನು ದೇಶದ ಪ್ರಥಮ ಪ್ರಜೆಯಾಗಿ ಆಯ್ಕೆ ಮಾಡಿರುವುದು ಸಂತಸದ ಸಂಗತಿ. ಸಾಮಾಜಿಕ ನ್ಯಾಯ, ಮಹಿಳಾ ಸಮಾನತೆ ನಿಟ್ಟಿನಲ್ಲಿಇದೊಂದು ದಿಟ್ಟು ಹೆಜ್ಜೆ ಎಂದು ಬಣ್ಣಿಸಿದರು.

ದ್ರೌಪದಿ ಮುರ್ಮು ಅವರುಉತ್ತಮವಾಗಿ ಕಾರ್ಯನಿರ್ವಹಿಸಿ ದೇಶದ ಸರ್ವ ಜನರ ಅಭಿವೃದ್ಧಿಗೆ ಶ್ರಮಿಸಲಿ ಎಂದು ಆಶಯ ವ್ಯಕ್ತಪಡಿಸಿದರು.

ಪಕ್ಷದ ಜಿಲ್ಲಾ ಸಂಘಟನಾ ಕಾರ್ಯದರ್ಶಿ ಸೀತಾರಾಮಭರಣ್ಯ ಮಾತನಾಡಿ,ಬಿಜೆಪಿ ಆಡಳಿತದಲ್ಲಿ ಈವರೆಗೆ ಮೂರು ಬಾರಿ ರಾಷ್ಟ್ರಪತಿಯನ್ನು ಆಯ್ಕೆ ಮಾಡುವ ಅವಕಾಶ ಸಿಕ್ಕಿದೆ. ಡಾ.ಎಪಿಜೆ ಅಬ್ದುಲ್‌ ಕಲಾಂ, ರಾಮನಾಥ್ ಕೋವಿಂದ್ ಈ ಹಿಂದೆ ರಾಷ್ಟ್ರಪತಿಯಾಗಿ ಕಾರ್ಯನಿರ್ವಹಿಸಿದದರು.ಈಗ ದೌಪದಿ ಮುರ್ಮು ಅವರಿಗೆ ಅವಕಾಶ ಸಿಕ್ಕಿದೆ ಎಂದರು.

ಎಸ್‌.ಟಿ ಮೋರ್ಚಾದ ಮಹಿಳಾ ಘಟಕದ ಪ್ರಧಾನ ಕಾರ್ಯದರ್ಶಿ ರೇಖಾ ಅನಿಲ್‌ ಮಾತನಾಡಿ, ಬುಡಕಟ್ಟು ಸಮುದಾಯದ ಮಹಿಳೆಯೊಬ್ಬರು ದೇಶದ ಅತ್ಯುನ್ನತ ಸ್ಥಾನ ಅಲಂಕರಿಸಿರುವುದು ಸಮುದಾಯದ ಗೌರವ ಹೆಚ್ಚಿಸಿದೆ. ಅವರ ಪರಿಶ್ರಮ, ರಾಜಕೀಯ ಸಾಧನೆ ಸಮುದಾಯಕ್ಕೆ ಮಾದರಿ ಎಂದು ಅಭಿಪ್ರಾಯಪಟ್ಟರು

ಜಿಲ್ಲಾ ಉಪಾಧ್ಯಕ್ಷ ಪ್ರೇಮ್‌ಕುಮಾರ್ ಮಾತನಾಡಿ, ದೌಪದಿ ಮುರ್ಮು ಅವರ ಆಯ್ಕೆ ಇತಿಹಾಸದಲ್ಲಿ ಮೈಲುಗಲ್ಲಾಗಿದೆ ಎಂದರು.

ಮಹಿಳಾ ಕಾರ್ಯಕರ್ತೆಯರು ಡ್ರಮ್ ಸೆಟ್‌ ತಾಳಕ್ಕೆ ಹೆಜ್ಜೆಹಾಕಿದರು. ಪಕ್ಷದ ಮುಖಂಡರಾದ ಈಶ್ವರಹಳ್ಳಿ ಮಹೇಶ್‌, ನಂದೀಶ್‌, ಲಕ್ಷ್ಮಣ್‌, ಪ್ರದೀಪ್‌, ನರಸಿಂಹ, ವರಸಿದ್ಧಿ ವೇಣುಗೋಪಾಲ್‌, ಹಂಪಯ್ಯ, ಮಧುಕುಮಾರ್ ರಾಜ್ ಅರಸ್‌, ಬಿ.ರಾಜಪ್ಪ, ನಾರಾಯಣಸ್ವಾಮಿ, ಪುಷ್ಪರಾಜ್‌, ಕನಕರಾಜ್ ಅರಸ್‌, ದೀಪಾನಾಗೇಶ್‌, ತೋಟದಹಳ್ಳಿ ಶಿವಣ್ಣ, ರಾಜೇಶ್, ಸಂತೋಷ್‌ ಕೋಟ್ಯನ್‌ ಇದ್ದರು.

ತಾಜಾ ಸುದ್ದಿಗಾಗಿ ಪ್ರಜಾವಾಣಿ ಟೆಲಿಗ್ರಾಂ ಚಾನೆಲ್ ಸೇರಿಕೊಳ್ಳಿ | ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ನಮ್ಮ ಫೇಸ್‌ಬುಕ್ ಪುಟ ಫಾಲೋ ಮಾಡಿ.

ADVERTISEMENT
ADVERTISEMENT
ADVERTISEMENT
ADVERTISEMENT
ADVERTISEMENT