ಮಂಗಳವಾರ, 7 ಮೇ 2024
×
ADVERTISEMENT
ಈ ಕ್ಷಣ :
ADVERTISEMENT
ADVERTISEMENT

ಸಿ–ವಿಜಿಲ್‌ನಲ್ಲಿ 15 ಪ್ರಕರಣ ದಾಖಲು, ಇತ್ಯರ್ಥ

Last Updated 27 ಮಾರ್ಚ್ 2019, 15:53 IST
ಅಕ್ಷರ ಗಾತ್ರ

ಚಿಕ್ಕಮಗಳೂರು: ಚುನಾವಣೆ ನೀತಿ ಸಂಹಿತೆ ಉಲ್ಲಂಘನೆಗೆ ಸಂಬಂಧಿಸಿದಂತ ‘ಸಿ–ವಿಜಿಲ್‌’ ಆ್ಯಪ್‌ನಲ್ಲಿ ಈವರೆಗೆ 15 ಪ್ರಕರಣಗಳು ದಾಖಲಾಗಿವೆ. ಈ ಪೈಕಿ ಏಳು ‍ಪ್ರಕರಣ ಇತ್ಯರ್ಥಪಡಿಸಲಾಗಿದೆ, ಎಂಟು ಪ್ರಕರಣ ಕೈಬಿಡಲಾಗಿದೆ ಎಂದು ಜಿಲ್ಲಾಧಿಕಾರಿ ಡಾ.ಬಗಾದಿ ಗೌತಮ್‌ ಇಲ್ಲಿ ಬುಧವಾರ ತಿಳಿಸಿದರು.

ಪೋಸ್ಟರ್‌, ಬ್ಯಾನರ್‌ ತೆರವು ಮಾಡಿಲ್ಲ ಎಂಬುದಕ್ಕೆ ಸಂಬಂಧಿಸಿದಂತೆ ಹೆಚ್ಚು ಪ್ರಕರಣಗಳು ದಾಖಲಾಗಿದ್ದವು. ಯಾವುದೇ ಪ್ರಕರಣ ಬಾಕಿ ಇಲ್ಲ ಎಂದು ಪತ್ರಿಕಾಗೋಷ್ಠಿಯಲ್ಲಿ ತಿಳಿಸಿದರು.

ಜಿಲ್ಲೆಯಾದ್ಯಂತ ಪೋಸ್ಟರ್‌, ಬ್ಯಾನರ್, ಗೋಡೆಬರಹಗಳನ್ನು ತೆರವುಗೊಳಿಸಲು ಕ್ರಮ ವಹಿಸಲಾಗಿದೆ. ಈವರೆಗೆ ಸಾರ್ವಜನಿಕ ಕಟ್ಟಡಗಳಲ್ಲಿ 2,847 ಹಾಗೂ ಖಾಸಗಿ ಕಟ್ಟಡಗಳಲ್ಲಿ 1,326 ಗೋಡೆಬರಹ, ಪೋಸ್ಟರ್ಸ್‌, ಬ್ಯಾನರ್‌ಗಳನ್ನು ತೆರವುಗೊಳಿಸಲಾಗಿದ ಎಂದು ವಿವರ ನೀಡಿದರು.

ಚುನಾವಣಾ ಕಾರ್ಯಕ್ಕೆ ನಿಯೋಜಿಸಿರುವ ವಾಹನಗಳಿಗೆ ಜಿಪಿಎಸ್‌ ಅಳವಡಿಕೆ ಪ್ರಕ್ರಿಯೆ ಪ್ರಗತಿಯಲ್ಲಿದೆ. ಈವರೆಗೆ 130 ವಾಹನಗಳಿಗೆ ಜಿಪಿಎಸ್‌ ಅಳವಡಿಸಲಾಗಿದೆ ಎಂದು ತಿಳಿಸಿದರು.

ಜಿಲ್ಲಾಧಿಕಾರಿ ಕಚೇರಿಯ ಚುನಾವಣೆ ಶಾಖೆಯಲ್ಲಿ ಜ.25ರಿಂದ ಮತದಾರರ ಮಾಹಿತಿ ಕೇಂದ್ರ (1950) ತೆರೆಯಲಾಗಿದೆ. ಈವರೆಗೆ 247 ಕರೆಗಳು ಬಂದಿವೆ. ಕೋರಿದ ಮಾಹಿತಿ ಒದಗಿಸಲಾಗಿದೆ ಎಂದು ತಿಳಿಸಿದರು.

ಚಿಕ್ಕಮಗಳೂರು ಉಡುಪಿ ಕ್ಷೇತ್ರದಲ್ಲಿ14 ಮಂದಿ ಒಟ್ಟು 26 ನಾಮಪತ್ರ ಸಲ್ಲಿಸಿದ್ದಾರೆ. ಹಾಸನ ಕ್ಷೇತ್ರದಲ್ಲಿ 11 ಮಂದಿ ಒಟ್ಟು18 ನಾಮಪತ್ರ ಸಲ್ಲಿಸಿದ್ದಾರೆ. ಅಭ್ಯರ್ಥಿಗಳು , ರಾಜಕೀಯ ಪಕ್ಷಗಳು ಮಾಡುವ ಖರ್ಚಿನ ಮೇಲೆ ನಿಗಾ ವಹಿಸಲು ಜಿಲ್ಲಾ ಮಟ್ಟದಲ್ಲಿ ವೆಚ್ಚ ನಿಗಾ ಕೋಶ ಹಾಗೂ ವಿಧಾನಸಭಾ ಭಾಗವಾರು ಸಹಾಯಕ ವೆಚ್ಚ ವೀಕ್ಷಕರನ್ನು ನೇಮಿಸಲಾಗಿದೆ. ಚುನಾವಣೆ ಪ್ರಚಾರಕ್ಕೆ ಸಂಬಂಧಿಸಿದಂತೆ ಸಭೆ– ಸಮಾರಂಭ ನಡೆಸಲು ಅನುಮತಿ ಪಡೆಯುವುದು ಕಡ್ಡಾಯ. ಧ್ವನಿವರ್ಧಕವನ್ನು ಅನುಮತಿ ಪಡೆದು ಬೆಳಿಗ್ಗೆ 6ರಿಂದ ರಾತ್ರಿ 10 ಗಂಟೆವರೆಗೆ ಮಾತ್ರ ಉಪಯೋಗಿಸಲು ಅವಕಾಶ ಇದೆ ಎಂದರು.

ಜಿಲ್ಲೆಯಲ್ಲಿ 9,144 ಪರವಾನಗಿ ಹೊಂದಿರುವ ಶಸ್ತ್ರಾಸ್ತ್ರಗಳು ಇವೆ. ಈ ಪೈಕಿ ಈವರೆಗೆ 8,858 ಶಸ್ತ್ರಾಸ್ತ್ರಗಳು ಜಮೆಯಾಗಿವೆ 233 ಪರವಾನಗಿದಾರರಿಗೆ ಶಸ್ತ್ರಾಸ್ತ್ರ ಇಟ್ಟುಕೊಳ್ಳಲು ಅನುಮತಿ ನೀಡಲಾಗಿದೆ. 53 ಶಸ್ತ್ರಾಸ್ತ್ರ ಜಮೆ ಬಾಕಿ ಇದೆ ಎಂದರು.

ಬ್ಯಾಂಕುಗಳ ಅಧಿಕಾರಿಗಳೊಂದಿಗೆ ಸಭೆ ಮಾಡಲಾಗಿದೆ. ಅಭ್ಯರ್ಥಿ ಮತ್ತು ಪಕ್ಷದ ಖಾತೆಯಿಂದ ಒಂದು ಲಕ್ಷಕ್ಕಿಂತ ಹೆಚ್ಚು ಹಣ ಡ್ರಾ ಮಾಡುವುದು, ಅಭ್ಯರ್ಥಿಯ ಸಂಬಂಧಿಕರು ಖಾತೆಗಳಿಂದ ಒಮ್ಮೆಗೆ ಒಂದು ಲಕ್ಷಕ್ಕಿಂತ ಹೆಚ್ಚು ಡ್ರಾ ಮಾಡುವುದು, ಒಂದೇ ಖಾತೆಯಿಂದ ಹಲವಾರು ಖಾತೆಗಳಿಂದ ಹಣ ಸಂದಾಯ, ಖಾತೆಯಿಂದ ಒಂದು ಲಕ್ಷಕ್ಕಿಂತ ಜಾಸ್ತಿ ವರ್ಗಾವಣೆಗೆ ಸಂಬಂಧಿಸಿದಂತೆ ಪ್ರತಿದಿನ ವಿವರ ನೀಡುವಂತೆ ಸೂಚಿಸಲಾಗಿದೆ ಎಂದು ತಿಳಿಸಿದರು.

ಒಬ್ಬರು ₹ 50 ಸಾವಿರದವರೆಗೆ ನಗದು ಇಟ್ಟುಕೊಳ್ಳಲು ಅವಕಾಶ ಇದೆ. ಹಣ ಸಾಗಣೆ ಬಗ್ಗೆ ನಿಗಾ ಇಡಲಾಗಿದೆ. ಅಂಬುಲೆನ್ಸ್‌ಗಳನ್ನೂ ಮಾಡಲಾಗುತ್ತಿದೆ. ಆದಾಯ ತೆರಿಗೆ ನೋಡಲ್‌ ಅಧಿಕಾರಿಯಾಗಿ ಅಭಿನವ್‌ ಪಿಟ್ಟಾ ಎಂಬುವರನ್ನು ನೇಮಕ ಮಾಡಿದೆ ಎಂದರು.

ಜಿಲ್ಲೆಯ ವಿಧಾನಸಭಾ ಕ್ಷೇತ್ರವಾರು ಚಿಕ್ಕಮಗಳೂರು–12 ಹಾಗೂ ಉಳಿದ ನಾಲ್ಕು ಕ್ಷೇತ್ರಗಳಲ್ಲಿ ತಲಾ 2 ಒಟ್ಟು 20 ಸಖಿ ಮತಗಟ್ಟೆಗಳು, ಐದೂ ಕ್ಷೇತ್ರಗಳಲ್ಲಿ ತಲಾ 5 ರಂತೆ 25 ವೆಬ್‌ಕಾಸ್ಟಿಗ್‌ ಮತಗಟ್ಟೆಗಳು, ಶೃಂಗೇರಿ ಮತ್ತು ಚಿಕ್ಕಮಗಳೂರು ಕ್ಷೇತ್ರದಲ್ಲಿ ತಲಾ ಒಂದು ಒಟ್ಟು ಎರಡು ಸಾಂಪ್ರದಾಯಿಕ ಮತಗಟ್ಟೆ, ಚಿಕ್ಕಮಗಳೂರು ಮತ್ತು ತರೀಕೆರೆ ಕ್ಷೇತ್ರದಲ್ಲಿ ತಲಾ ಒಂದು ಒಟ್ಟು ಎರಡು ಅಂಗವಿಕಲರ ಮತಗಟ್ಟೆಗಳನ್ನು ತೆರೆಯಲಾಗುವುದು ಎಂದರು.

ಜಿಲ್ಲೆಯ ವಿಧಾನಸಭಾ ಕ್ಷೇತ್ರವಾರು ಯುವ ಮತದಾರರು (18ರಿಂದ 19 ವರ್ಷದವರು) ಶೃಂಗೇರಿ– 2867, ಮೂಡಿಗೆರೆ– 2083, ಚಿಕ್ಕಮಗಳೂರು– 3183, ತರೀಕೆರೆ– 2467 ಕಡೂರು– 2757 ಒಟ್ಟು 13,357 ಇದ್ದಾರೆ. ಪೂರಕ ಪಟ್ಟಿಯಲ್ಲಿನವರನ್ನು ಸೇರಿಸಿದ ನಂತರ ಇನ್ನು ಹೆಚ್ಚಾಗಬಹುದು ಎಂದರು.

ಜ.16ರಿಂದ ಮಾರ್ಚ್‌ 16ರವರೆಗಿನ ನಿರಂತರ ನೋಂದಣಿ (ನಮೂನೆ 6, 7, 8, 8ಎ) ಪ್ರಕ್ರಿಯೆಯಲ್ಲಿ ಐದೂ ವಿಧಾನಸಭಾ ಕ್ಷೇತ್ರಗಳಿಂದ 28663 ಅರ್ಜಿಗಳು ಸ್ವೀಕೃತವಾಗಿವೆ. ಕ್ಷೇತ್ರವಾರು ಶೃಂಗೇರಿ 6124, ಮೂಡಿಗೆರೆ 5945, ಚಿಕ್ಕಮಗಳೂರು 8271, ತರೀಕೆರೆ 3977 ಹಾಗೂ ಕಡೂರು 4346 ಅರ್ಜಿಗಳು ಸ್ವೀಕೃತವಾಗಿವೆ ಎಂದು ವಿವರ ನೀಡಿದರು.

ಚಿಕ್ಕಮಗಳೂರು ಜಿಲ್ಲೆಯಲ್ಲಿ ಒಟ್ಟು 9,26,035 ಮತದಾರರು ಇದ್ದಾರ. ಉಡುಪಿ–ಚಿಕ್ಕಮಗಳೂರು ಲೋಕಸಭಾ ಕ್ಷೇತ್ರದಲ್ಲಿ ಒಟ್ಟು 14,94,444 ಹಾಗೂ ಹಾಸನ ಲೋಕಸಭಾ ಕ್ಷೇತ್ರದಲ್ಲಿ 16,29,587 ಮತದಾರರು ಇದ್ದಾರೆ ಎಂದರು.

ಪರಿಶೀಲಿಸಿ ಕ್ರಮ: ಡಿಸಿ
‘ಜೆಡಿಎಸ್‌ನ ನಿಖಿಲ್‌ ಕುಮಾರಸ್ವಾಮಿ ಅವರು ಈಚೆಗೆ ಶೃಂಗೇರಿಗೆ ಬಂದಿದ್ದಾಗ ನೀತಿ ಸಂಹಿತೆ ಉಲ್ಲಂಘಿಸಿದ್ದಾರೆ ಎಂದು ಆರೋಪಿಸಿ ಬಿಜೆಪಿಯವರು ದೂರು ನೀಡಿದ್ದಾರೆ. ವಿಡಿಯೋ ದಶ್ಯಾವಳಿ, ಇತರ ಮಾಹಿತಿ ನೀಡುವಂತೆ ಸಂಬಂಧಪಟ್ಟ ಸಹಾಯಕ ಚುನಾವಣಾಧಿಕಾರಿ ತಿಳಿಸಲಾಗಿದೆ. ಪರಿಶೀಲಿಸಿ ಕ್ರಮ ವಹಿಸಲಾಗುವುದು’ ಎಂದು ಜಿಲ್ಲಾಧಿಕಾರಿ ಬಗಾದಿ ಗೌತಮ್‌ ಪ್ರತಿಕ್ರಿಯಿಸಿದರು.

ವಿಧಾನಸಭಾ ಕ್ಷೇತ್ರವಾರುಕಂಟ್ರೋಲ್‌, ಬ್ಯಾಲೆಟ್‌ಯುನಿಟ್‌,ವಿವಿಪ್ಯಾಟ್‌ ಅಂಕಿಅಂಶ

ಕ್ಷೇತ್ರ ಬ್ಯಾಲೆಟ್‌ ಯುನಿಟ್‌ ಕಂಟ್ರೋಲ್‌ ಯನಿಟ್‌ ವಿವಿಪ್ಯಾಟ್‌

ಶೃಂಗೇರಿ 310 310 329

ಮೂಡಿಗೆರೆ 280 280 297

ಚಿಕ್ಕಮಗಳೂರು 312 312 331

ತರೀಕೆರೆ 276 276 293

ಕಡೂರು 303 303 322

ಕಾಯ್ದಿರಿಸಿದವು 386 – –

ಒಟ್ಟು 1867 1481 1572

(ಜಿಲ್ಲೆಯ ಕಡೂರು ವಿಧಾನಸಭಾ ಕ್ಷೇತ್ರವು ಹಾಸನ ಲೋಕಸಭಾ ಕ್ಷೇತ್ರ ವ್ಯಾಪ್ತಿಗೆ, ಉಳಿದವು ಉಡುಪಿ–ಚಿಕ್ಕಮಗಳೂರು ಲೋಕಸಭಾ ಕ್ಷೇತ್ರ ವ್ಯಾಪ್ತಿಗೆ ಒಳಪಟ್ಟಿವೆ)

ಜಿಲ್ಲೆಯ ವಿಧಾನಸಭಾಕ್ಷೇತ್ರವಾರು ನೇಮಿಸಿರುವ ಮತಗಟ್ಟೆ ಅಧಿಕಾರಿ,ಸಿಬ್ಬಂದಿ

ಕ್ಷೇತ್ರ ಮತಗಟ್ಟೆ ಪಿಆರ್‌ಒ ಎಪಿಆರ್‌ಒ ಪಿಒ ಒಟ್ಟು

ಶೃಂಗೇರಿ 256 297 246 470 1013

ಮೂಡಿಗೆರೆ 231 220 142 394 756

ಚಿಕ್ಕಮಗಳೂರು 257 414 452 797 1663

ತರೀಕೆರೆ 228 261 286 667 1214

ಕಡೂರು 250 337 403 724 1464

ಒಟ್ಟು 1222 1529 1529 3052 6110

ತಾಜಾ ಸುದ್ದಿಗಾಗಿ ಪ್ರಜಾವಾಣಿ ಟೆಲಿಗ್ರಾಂ ಚಾನೆಲ್ ಸೇರಿಕೊಳ್ಳಿ | ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ನಮ್ಮ ಫೇಸ್‌ಬುಕ್ ಪುಟ ಫಾಲೋ ಮಾಡಿ.

ADVERTISEMENT
ADVERTISEMENT
ADVERTISEMENT
ADVERTISEMENT
ADVERTISEMENT