ತರೀಕೆರೆ: ಪಟ್ಟಣದಲ್ಲಿ ಶನಿವಾರ ರಾತ್ರಿ ಎರಡು ಗುಂಪುಗಳ ನಡುವೆ ಘರ್ಷಣೆ ನಡೆದು ಚೌಡೇಶ್ವರಿ ಕಾಲೋನಿಯ ವರುಣ್ (22) ಕೊಲೆಯಾಗಿದ್ದಾರೆ.
ಶಾಸಕ ಜಿ.ಎಚ್. ಶ್ರೀನಿವಾಸ್ ಅವರ ಅಭಿನಂದನಾ ಸಮಾರಂಭ ಆಯೋಜಿಸಲಾಗಿತ್ತು. ಪಟ್ಟಣದ ಪ್ರಮುಖ ಬೀದಿಗಳಲ್ಲಿ ಮೆರವಣಿಗೆ ಸಾಗುವಾಗ ಡಿಜೆ ಹಾಡು ಬದಲಿಸುವ ವಿಚಾರಕ್ಕೆ ಎರಡು ಗುಂಪುಗಳ ನಡುವೆ ಜಗಳ ಆರಂಭವಾಗಿದೆ. ಆ ಸಂದರ್ಭದಲ್ಲಿ ವರುಣ್ ಅವರಿಗೆ ಇರಿಯಲಾಗಿದೆ. ಜತೆಯಲ್ಲಿದ್ದ ಸಂಜಯ್ ಹಾಗೂ ಮಂಜುನಾಥ ಎಂಬುವರಿಗೂ ಗಾಯಗಳಾಗಿವೆ.
ಆರೋಪಿಗಳಾದ ವೇದಮೂರ್ತಿ, ನವೀನ್, ನಿತಿನ್, ಗೂಳಿ ಶರತ್, ಈಶ್ವರ್, ಗಗನ್, ಧನುಷ್, ಕೀರ್ತಿ ಅವರನ್ನು ಪೊಲೀಸರು ಬಂಧಿಸಿದ್ದಾರೆ.
ತಾಜಾ ಸುದ್ದಿಗಾಗಿ ಪ್ರಜಾವಾಣಿ ಟೆಲಿಗ್ರಾಂ ಚಾನೆಲ್ ಸೇರಿಕೊಳ್ಳಿ | ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ನಮ್ಮ ಫೇಸ್‌ಬುಕ್ ಪುಟ ಫಾಲೋ ಮಾಡಿ.