ಶುಕ್ರವಾರ, 19 ಏಪ್ರಿಲ್ 2024
×
ADVERTISEMENT
ಈ ಕ್ಷಣ :
ADVERTISEMENT
ADVERTISEMENT

ಚಿಕ್ಕಮಗಳೂರು ಜಿಲ್ಲಾ ಸಾಹಿತ್ಯ ಸಮ್ಮೇಳನಕ್ಕೆ ಚಾಲನೆ: ಮುಂದುವರಿದ ವಿರೋಧ

Last Updated 10 ಜನವರಿ 2020, 7:26 IST
ಅಕ್ಷರ ಗಾತ್ರ
ADVERTISEMENT
""
""
""
""
""
""
""

ಶೃಂಗೇರಿ:ಚಿಕ್ಕಮಗಳೂರು ಜಿಲ್ಲಾ ಕನ್ನಡ ಸಾಹಿತ್ಯ ಸಮ್ಮೇಳನಕ್ಕೆ ಶುಕ್ರವಾರಚಾಲನೆ ನೀಡಲಾಯಿತು.

ಪ್ರೊ.ಕೆ.ಪುಟ್ಟಯ್ಯ ಅವರು ರಾಷ್ಟಧ್ವಜ, ಪೂರ್ಣಿಮಾ ಸಿದ್ದಪ್ಪ ನಾಡಧ್ವಜ ಮತ್ತು ಪರಿಷತ್ತಿನ ಜಿಲ್ಲಾ ಘಟಕದ ಅಧ್ಯಕ್ಷ ಅಶೋಕ ಕುಂದೂರು ಕನ್ನಡ ಸಾಹಿತ್ಯ ಪರಿಷತ್ ಧ್ವಜಾರೋಹಣ ನೆರವೇರಿಸಿದರು.

ಶಾಸಕ ಟಿ.ಡಿ ರಾಜೇಗೌಡಉದ್ಘಾಟಿಸಿದರು.ಸಮ್ಮೇಳನದ ಪ್ರವೇಶ ದ್ವಾರದ ಬಳಿ ಕೆಲ ಸಮಯ ಮಾತಿನ ಚಕಮಕಿ ನಡೆಯಿತು. ಪೊಲೀಸರು ಹತೋಟಿಗೆ ತರಲು ಯತ್ನಿಸಿದರು.

ಸಮ್ಮೇಳನ ಸಭಾಂಗಣದಲ್ಲಿಮೈಕ್ ಬಳಕೆಗೆ ಪೊಲೀಸರು ನಿರ್ಬಂಧ ವಿಧಿಸಿದ್ದಾರೆ. ಅನುಮತಿ ಕೊಡಲು ಸಾಹಿತ್ಯಾಸ್ತಕರು ಪಟ್ಟು ಹಿಡಿದಿದ್ದಾರೆ. ಪಟ್ಟಣದ ಬಹುತೇಕ ಅಂಗಡಿ ಮುಂಗಟ್ಟುಗಳು ಬಾಗಿಲು ಹಾಕಿವೆ. ಜನಸಂಚಾರ ವಿರಳವಾಗಿದೆ.

ಜೈಶ್ರೀರಾಮ್‌ ಮತ್ತು ವಿಠಲ ಹೆಗ್ಡೆ ವಿರುದ್ಧಘೋಷಣೆ ಕೂಗುತ್ತಾ ಕಾರ್ಯಕ್ರಮದ ಸಭಾಂಗಣಕ್ಕೆ ನುಗ್ಗಲು ಯತ್ನಿಸಿದ ನಕ್ಸಲ್‌ ವಿರೋಧಿ ಹೋರಾಟ ಸಮಿತಿ ಮತ್ತು ಇತರ ಸಂಘಟನೆಗಳ ಕಾರ್ಯಕರ್ತರನ್ನು ಪೊಲೀಸರುವಶಕ್ಕೆ ಪಡೆದು ಬಿಡುಗಡೆ ಮಾಡಿದರು.

ಜಿಲ್ಲಾಧಿಕಾರಿ ಮತ್ತು ಜಿಲ್ಲಾ ಪೊಲೀಸ್‌ ವರಿಷ್ಠಾಧಿಕಾರಿ ಸಹ ಸ್ಥಳಕ್ಕೆ ಬಂದಿದ್ದರು.

ವಿಠಲ್ ಹೆಗ್ಡೆ ವಿರುದ್ಧ ಪ್ರತಿಭಟನೆ
ಸಭಾಂಗಣದ ಬಳಿ ಹಿರಿಯ ಅಧಿಕಾರಿಗಳು
ಸಾಹಿತ್ಯ ಸಮ್ಮೇಳನ ಸಭಾಂಗಣದಲ್ಲಿರುವ ಪುಸ್ತಕ ಮಳಿಗೆಗಳಿಗೆ ಸಮ್ಮೇಳನದ ಅಧ್ಯಕ್ಷ ಕಲ್ಕುಳಿ ವಿಠಲ ಹೆಗಡೆ ಭೇಟಿ ನೀಡಿದರು.
ಶೃಂಗೇರಿ ಸಾಹಿತ್ಯ ಸಮ್ಮೇಳನದಲ್ಲಿ ಪದಾಧಿಕಾರಿಗಳು
ಸಾಹಿತ್ಯ ಸಮ್ಮೇಳನ ನಡೆಯುವ ಬಿಜಿಎಸ್ ಸಮುದಾಯ ಭವನದ ಎದುರು ಪೊಲೀಸ್ ಕಾವಲು
ಶೃಂಗೇರಿ ಪಟ್ಟಣದ ರಸ್ತೆಗಳಲ್ಲಿ ಶುಕ್ರವಾರ ಮುಂಜಾನೆ ಜನಸಂಚಾರ ಹೆಚ್ಚಾಗಿ ಕಂಡುಬರಲಿಲ್ಲ
ಶೃಂಗೇರಿ ಬಸ್ ನಿಲ್ದಾಣದಲ್ಲಿ ಪೊಲೀಸ್ ಬಂದೋಬಸ್ತ್

ಇನ್ನಷ್ಟು...

ತಾಜಾ ಸುದ್ದಿಗಾಗಿ ಪ್ರಜಾವಾಣಿ ಟೆಲಿಗ್ರಾಂ ಚಾನೆಲ್ ಸೇರಿಕೊಳ್ಳಿ | ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ನಮ್ಮ ಫೇಸ್‌ಬುಕ್ ಪುಟ ಫಾಲೋ ಮಾಡಿ.

ADVERTISEMENT
ADVERTISEMENT
ADVERTISEMENT
ADVERTISEMENT
ADVERTISEMENT