ಚಿಕ್ಕಮಗಳೂರು: ‘ರಾಜ್ಯದಲ್ಲಿ ನೂರಕ್ಕೂ ಹೆಚ್ಚಿರುವ ಸಮಾಜದ ಉಪಪಂಗಡಗಳು ಒಂದಾಗುವ ಮೂಲಕ ವೀರಶೈವ ಲಿಂಗಾಯತರೆಂದು ಪ್ರತಿಪಾದಿಸಬೇಕು’ ಎಂದು ಮಹಿಳಾ ಮತ್ತು ಮಕ್ಕಳ ಕಲ್ಯಾಣ ಇಲಾಖೆ ಸಚಿವೆ ಲಕ್ಷ್ಮಿ ಹೆಬ್ಬಾಳಕರ ಹೇಳಿದರು.

ನಗರದ ಎಐಟಿ ಕಾಲೇಜು ಸಮೀಪದ ವೀರಶೈವ ಲಿಂಗಾಯಿತ ಸಮುದಾಯ ಭವನದಲ್ಲಿ ಶನಿವಾರ ನಡೆದ ರೇಣುಕಾಚಾರ್ಯ ಮತ್ತು ಬಸವೇಶ್ವರರ ಜಯಂತಿ ಕಾರ್ಯಕ್ರಮ ಉದ್ಘಾಟಿಸಿ ಅವರು ಮಾತನಾಡಿದರು.

ವೀರಶೈವ ಮತ್ತು ಲಿಂಗಾಯತ ಸಮಾಜವು ಹಸುವಿನಂತೆ. ಹಿಂದೆ ಬಂದರೆ ಒಡೆಯುವುದಿಲ್ಲ, ಮುಂದೆ ಬಂದರೆ ಹಾಯುವುದಿಲ್ಲ. ನಾಡಿನ ಪ್ರತಿಯೊಂದು ಜಾತಿ, ಧರ್ಮ, ಸಮಾಜವನ್ನು ಜೊತೆಗೂಡಿಸಿಕೊಂಡು ಅಸುಯೆಪಡದೇ ಪ್ರೀತಿಯಿಂದ ಕಾಣುವ ಸಮಾಜ ವೀರಶೈವ-ಲಿಂಗಾಯಿತ ಎಂದು ಹೇಳಿದರು.

ಸಾಮಾಜಿಕ, ಶೈಕ್ಷಣಿಕ, ಆರ್ಥಿಕ ಹಾಗೂ ರಾಜಕೀಯವಾಗಿ ಮುನ್ನೆಲೆಗೆ ಕರೆತರಲು ಎಲ್ಲಾ ಉಪಪಂಗಡಗಳು ಒಂದಾಗುವುದು ಮುಖ್ಯ. ಬಸವಣ್ಣನವರ ಆದರ್ಶದಲ್ಲಿ ಸಾಗುತ್ತಿರುವ ಈ ಸಮುದಾಯ ಒಗ್ಗಟ್ಟು ಪ್ರದರ್ಶಿಸಬೇಕು ಎಂದು ತಿಳಿಸಿದರು.

ಸರ್ಕಾರದ ಅನುದಾನ, ಸಮಾಜದ ಮುಖಂಡರು, ದಾನಿಗಳ ಸಹಕಾರದಿಂದ ಬೃಹತ್ ಮಟ್ಟದಲ್ಲಿ ನಿರ್ಮಾಣವಾಗುತ್ತಿರುವ ಸಮುದಾಯ ಭವನ ಅಂತಿಮವಾಗಿ ಪೂರ್ಣಗೊಳ್ಳುತ್ತಿರುವುದು ಸ್ವಾಗತಾರ್ಹ. ಹೀಗಾಗಿ ಸಮಾಜದ ಮಗಳಾಗಿ ತಾವು ಸಮುದಾಯ ಭವನಕ್ಕೆ ₹10 ಲಕ್ಷ ದೇಣಿಗೆ ನೀಡುವುದಾಗಿ ಭರವಸೆ ನೀಡಿದರು.

‘ನಿಸರ್ಗದ ಸೊಬಗು, ಸಂಸ್ಕೃತಿ, ಧಾರ್ಮಿಕತೆಯ ಪ್ರತೀಕದಿಂದ ಕೂಡಿರುವ ಜಿಲ್ಲೆ ಶ್ರೀಮಂತಿಕೆಯನ್ನು ಹೊಂದಿದೆ. ಇಲ್ಲಿನ ನಿವಾಸಿಗಳು ಸುಸಂಸ್ಕೃತ ಹಾಗೂ ಹೃದಯವಂತರು. ಜಿಲ್ಲೆಗೆ ಬಂದ ನನಗೆ ತವರು ಮನೆಯಂತೆ ಸ್ವಾಗತ ನೀಡಿರುವುದು ಸಂತಸ ತಂದಿದೆ’ ಎಂದರು.

ಶಾಸಕ ಎಚ್.ಡಿ.ತಮ್ಮಯ್ಯ ಮಾತನಾಡಿ, ‘ಶೈಕ್ಷಣಿವಾಗಿ ಒಗ್ಗಟ್ಟಾಗಲು ಒಳಪಂಗಡ ಮರೆತು ವೀರಶೈವ-ಲಿಂಗಾಯಿತರು ಒಂದಾಗಬೇಕು. ಜತೆಗೆ ಸಮುದಾಯದ ಬೆಳವಣಿಗೆಗೆ ಸಹಕರಿಸಬೇಕು’ ಎಂದು ತಿಳಿಸಿದರು.

ನೂತನ ಸಮುದಾಯ ಭವನಕ್ಕೆ ಪಕ್ಷಾತೀತವಾಗಿ ಎಲ್ಲರೂ ಆರ್ಥಿಕವಾಗಿ ಕೈಜೋಡಿಸಿದ್ದಾರೆ. ಬಾಕಿ ಕೆಲಸಕ್ಕೆ ಸಚಿವೆ ಲಕ್ಷ್ಮಿ ಹೆಬ್ಬಾಳಕರ ನೇತೃತ್ವದಲ್ಲಿ ಮುಖ್ಯಮಂತ್ರಿ ಅವರೊಂದಿಗೆ ನಿಯೋಗ ತೆರಳಿ ಉಳಿದ ಕೆಲಸಕ್ಕೆ ಅನುದಾನ ಕೋರಲಾಗುವುದು. ಕೂಡಲೇ ಭವನ ಲೋಕಾರ್ಪಣೆ ಮಾಡಲಾಗುವುದು ಎಂದರು.

ಪ್ರಾಸ್ತಾವಿಕವಾಗಿ ಮಾತನಾಡಿದ ಸಮಾಜದ ಪ್ರಧಾನ ಕಾರ್ಯದರ್ಶಿ ಎಂ.ಸಿ.ಶಿವಾನಂದಸ್ವಾಮಿ, ‘ಬಸವೇಗೌಡ ಕುಟುಂಬದವರ ಸಹಕಾರದಿಂದ ಪ್ರಾರಂಭಿಸಿದ ಸಮುದಾಯ ಭವನವು 9 ಎಕರೆ ಪ್ರದೇಶದಲ್ಲಿ ಅಚ್ಚುಕಟ್ಟಾಗಿ ನಿರ್ಮಾಣವಾಗುತ್ತಿದೆ. ಜತೆಗೆ ಶಾಸಕರು ಸಮಾಜದ ಬಗ್ಗೆ ಕಾಳಜಿ ವಹಿಸಿ ₹2 ಕೋಟಿ ಅನುದಾನ ಒದಗಿಸಿಕೊಟ್ಟಿದ್ದಾರೆ’ ಎಂದು ಹೇಳಿದರು.

ವೀರಶೈವ ಲಿಂಗಾಯಿತ ಸಮಾಜದ ಅಧ್ಯಕ್ಷ ಬಿ.ಎ.ಶಿವಶಂಕರ್ ವಹಿಸಿದ್ದರು. ನೈಸರ್ಗಿಕ ಕೃಷಿಕ ಚಂದ್ರಶೇಖರ ನಾರಣಾಪುರ ಅವರು ರೇಣುಕಾಚಾರ್ಯ ಮತ್ತು ಬಸವೇಶ್ವರರ ಕುರಿತು ಉಪನ್ಯಾಸ ನೀಡಿದರು.

ಅಖಿಲ ಭಾರತ ವೀರಶೈವ ಲಿಂಗಾಯತ ಮಹಾಸಭಾದ ಜಿಲ್ಲಾ ಘಟಕದ ಅಧ್ಯಕ್ಷ ಎಚ್.ಎಂ.ಲೋಕೇಶ್, ಉಪಾಧ್ಯಕ್ಷ ಎಚ್.ಎನ್.ನಂಜೇಗೌಡ, ಕಾಫಿ ಬೆಳೆಗಾರ ಎ.ಬಿ.ಸುದರ್ಶನ್, ಎಚ್.ಎಂ.ರೇಣುಕಾರಾಧ್ಯ, ಎಂ.ಎಸ್.ನಿರಂಜನ್, ಕಾರ್ಯದರ್ಶಿಗಳಾದ ಸಿ.ಬಿ.ನಂದೀಶ್, ಡಿ.ಎಸ್.ಮಮತ, ಖಜಾಂಚಿ ಎಸ್.ದೇವರಾಜ್, ಮುಖಂಡರಾದ ಕೆ.ಸಿ.ನಿಶಾಂತ್, ದಿವಾಕರ್, ಬಸವರಾಜು, ಜಗದೀಶ್, ಜಿ.ಕೆ.ನಂಜೇಶ್ ಇದ್ದರು.

ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ವಾಟ್ಸ್ಆ್ಯಪ್, ಎಕ್ಸ್, ಫೇಸ್ಬುಕ್ ಮತ್ತು ಇನ್ಸ್ಟಾಗ್ರಾಂನಲ್ಲಿ ಪ್ರಜಾವಾಣಿ ಫಾಲೋ ಮಾಡಿ.