ಶುಕ್ರವಾರ, ಡಿಸೆಂಬರ್ 2, 2022
20 °C

‘ಮತದಾನಕ್ಕಾಗಿ ಮಾತ್ರ ಭಾಗವಹಿಸುವಿಕೆ ಸಲ್ಲದು’

ಪ್ರಜಾವಾಣಿ ವಾರ್ತೆ Updated:

ಅಕ್ಷರ ಗಾತ್ರ : | |

Prajavani

ಬಾಳೆಹೊನ್ನೂರು: ಮತದಾನದ ಉದ್ದೇಶದಿಂದ ಮಾತ್ರ ಸಹಕಾರಿ ಸಭೆಗಳಲ್ಲಿ ಭಾಗವಹಿಸಿದರೆ, ವ್ಯವಸ್ಥೆ ದುರ್ಬಲಗೊಳ್ಳುತ್ತದೆ ಎಂದು ರಾಜ್ಯ ಅಡಿಕೆ ಸಹಕಾರ ಸಂಘಗಳ ಮಹಾಮಂಡಳಿ ಅಧ್ಯಕ್ಷ ವೈ.ಎಸ್.ಸುಬ್ರಹ್ಮಣ್ಯ ಹೇಳಿದರು.

ಬಾಳೆಹೊನ್ನೂರಿನ ಪ್ರಾಥಮಿಕ ಕೃಷಿ ಪತ್ತಿನ ಸಹಕಾರ ಸಂಘ ಹಾಗೂ ವಿವಿಧ ಸಹಕಾರ ಯೂನಿಯನ್, ಸಹಕಾರ ಮಹಾಮಂಡಳ ಸಹಯೋಗದಲ್ಲಿ ಆಯೋಜಿಸಿದ್ದ  ಸಹಕಾರ ಸಪ್ತಾಹದಲ್ಲಿ ಅವರು ಮಾತನಾಡಿದರು. 

ಶಾಸಕ ಟಿ.ಡಿ.ರಾಜೇಗೌಡ ಮಾತನಾಡಿ, ಗೃಹ, ವಾಹನ ಸಾಲ ನೀಡುವ ಮೂಲಕ ಸಹಕಾರ ಕ್ಷೇತ್ರ ಬದಲಾವಣೆಯೊಂದಿಗೆ ದಾಪುಗಾಲು ಇಡುತ್ತಿದೆ ಎಂದರು.

ಬಾಳೆಹೊನ್ನೂರು ಸಂಘದ ಅಧ್ಯಕ್ಷ ಟಿ.ಎಂ.ಉಮೇಶ್ ಮಾತನಾಡಿ, ಸಹಕಾರಿ ಕ್ಷೇತ್ರದಲ್ಲಿ ಆದ್ಯತೆ ಮೇಲೆ ಸಾಲ ನೀಡಲಾಗುತ್ತಿದೆ. ರೈತರಿಗೆ ಅಡಿಕೆ ಸುಲಿಯುವ ಯಂತ್ರದ ಖರೀದಿಗೆ ನಮ್ಮ ಸಂಘದಲ್ಲಿ ಸಾಲ ನೀಡಲಾಗುತ್ತಿದೆ ಎಂದರು.

ಹಿರಿಯ ಪಿಗ್ಮಿ ಸಂಗ್ರಾಹಕ ಯಜ್ಞಪುರುಷಭಟ್ ಅವರನ್ನು ಗೌರವಿಸಲಾಯಿತು. ಕರ್ನಾಟಕ ಮಹಿಳಾ ಸಹಕಾರ ಬ್ಯಾಂಕ್ ಅಧ್ಯಕ್ಷೆ ಬಿ.ಸಿ.ಗೀತಾ, ಲ್ಯಾಂಪ್ಸ್ ಸಹಕಾರ ಮಹಾಮಂಡಳಿ ಅಧ್ಯಕ್ಷ ಬಿ.ಎನ್.ಮುತ್ತಪ್ಪ, ಜಿಲ್ಲಾ ಸಹಕಾರ ಯೂನಿಯನ್ ಅಧ್ಯಕ್ಷ ಜಿ.ಎಸ್.ಮಹಾಬಲ, ಸಹಕಾರ ಮಹಾಮಂಡಳಿ ನಿರ್ದೇಶಕ ಎಚ್.ಕೆ.ದಿನೇಶ್, ಕೆ.ಟಿ.ವೆಂಕಟೇಶ್, ಎಚ್.ಎಸ್.ಇನೇಶ್, ಎಂ.ಎಸ್.ಪ್ರವೀಣ್, ಕೆ.ಆರ್.ರಾಘವೇಂದ್ರ, ಸುಧಾ ಎಸ್ ಪೈ, ಸುರೇಂದ್ರ, ಸಂದೀಪ್ ಕುಮಾರ್, ಎಂ.ಸಿ ಚಂದ್ರಶೇಖರ್, ಚೈತನ್ಯ ವೆಂಕಿ, ಕೆ.ಟಿ.ಗೋವಿಂದೇಗೌಡ, ಹಿರಿಯಣ್ಣ, ಸಿಇಒ ಎಚ್‌.ಉಮೇಶ್ ಇದ್ದರು.

ತಾಜಾ ಮಾಹಿತಿ ಪಡೆಯಲು ಪ್ರಜಾವಾಣಿ ಟೆಲಿಗ್ರಾಂ ಚಾನೆಲ್ ಸೇರಿಕೊಳ್ಳಿ

ತಾಜಾ ಸುದ್ದಿಗಳಿಗಾಗಿ ಪ್ರಜಾವಾಣಿ ಆ್ಯಪ್ ಡೌನ್‌ಲೋಡ್ ಮಾಡಿಕೊಳ್ಳಿ: ಆಂಡ್ರಾಯ್ಡ್ ಆ್ಯಪ್ | ಐಒಎಸ್ ಆ್ಯಪ್

ಪ್ರಜಾವಾಣಿ ಫೇಸ್‌ಬುಕ್ ಪುಟವನ್ನುಫಾಲೋ ಮಾಡಿ.

ಈ ವಿಭಾಗದಿಂದ ಇನ್ನಷ್ಟು