ಭಾನುವಾರ, ಜೂನ್ 13, 2021
21 °C

ಕೋವಿಡ್‌: ನಾಲ್ವರು ಸಾವು, 69 ಮಂದಿಗೆ ಸೋಂಕು

ಪ್ರಜಾವಾಣಿ ವಾರ್ತೆ Updated:

ಅಕ್ಷರ ಗಾತ್ರ : | |

ಚಿಕ್ಕಮಗಳೂರು: ಜಿಲ್ಲೆಯಲ್ಲಿ ಕೋವಿಡ್–19ನಿಂದಾಗಿ ನಾಲ್ವರು ಭಾನುವಾರ ಸಾವಿಗೀಡಾಗಿದ್ದಾರೆ. 69 ಮಂದಿಗೆ ಕೋವಿಡ್‌ ದೃಢಪಟ್ಟಿದ್ದು, 12 ಮಂದಿ ಗುಣಮುಖರಾಗಿ ಬಿಡುಗಡೆಯಾಗಿದ್ದಾರೆ.

ಚಿಕ್ಕಮಗಳೂರು ತಾಲ್ಲೂಕಿನ 56 ವರ್ಷದ ಪುರುಷ, 77 ವರ್ಷದ ಮಹಿಳೆ, ಕಡೂರು ತಾಲ್ಲೂಕಿನ 62ವರ್ಷದ ಪುರುಷ, 50ವರ್ಷದ ಮಹಿಳೆ ಮೃತಪಟ್ಟವರು. ಮೂವರು ಜಿಲ್ಲಾ ಕೋವಿಡ್ ಆಸ್ಪತ್ರೆಯಲ್ಲಿ ಒಬ್ಬರು ಖಾಸಗಿ ಆಸ್ಪತ್ರೆಯಲ್ಲಿ ಮೃತಪಟ್ಟಿದ್ದಾರೆ.

ತಾಲ್ಲೂಕುವಾರು ಸೋಂಕಿತರ ಸಂಖ್ಯೆ: ಚಿಕ್ಕಮಗಳೂರು– 33, ಕಡೂರು– 18, ತರೀಕೆರೆ– 17, ನರಸಿಂಹರಾಜಪುರ– ಒಬ್ಬರಿಗೆ ಸೋಂಕು ಪತ್ತೆಯಾಗಿದೆ.

ಜಿಲ್ಲೆಯಲ್ಲಿ 799 ಸಕ್ರಿಯ ಪ್ರಕರಣಗಳು ಇವೆ. 1,323 ಮಂದಿ ಗುಣಮುಖರಾಗಿದ್ದಾರೆ. 49 ಮಂದಿ (ಶಿವಮೊಗ್ಗದ ಮೆಗ್ಗಾನ್‌ ಆಸ್ಪತ್ರೆಯಲ್ಲಿ ಮೃತಪಟ್ಟ ಜಿಲ್ಲೆಯ ಇಬ್ಬರು ಸಹಿತ) ಮೃತಪಟ್ಟಿದ್ದಾರೆ.

ಜಿಲ್ಲೆಯ ವಿವಿಧೆಡೆ 459 ನಿಯಂತ್ರಿತ ವಲಯ (ಕಂಟೈನ್‌ಮೆಂಟ್‌ ಝೋನ್‌) ಗಳು ಇವೆ.

ಫಲಿತಾಂಶ 2021 ಪೂರ್ಣ ಮಾಹಿತಿ ಇಲ್ಲಿದೆ

ತಾಜಾ ಸುದ್ದಿಗಳಿಗಾಗಿ ಪ್ರಜಾವಾಣಿ ಆ್ಯಪ್ ಡೌನ್‌ಲೋಡ್ ಮಾಡಿಕೊಳ್ಳಿ: ಆಂಡ್ರಾಯ್ಡ್ ಆ್ಯಪ್ | ಐಒಎಸ್ ಆ್ಯಪ್

ಪ್ರಜಾವಾಣಿ ಫೇಸ್‌ಬುಕ್ ಪುಟವನ್ನುಫಾಲೋ ಮಾಡಿ.

ಈ ವಿಭಾಗದಿಂದ ಇನ್ನಷ್ಟು