ಗುರುವಾರ , ಆಗಸ್ಟ್ 5, 2021
23 °C
ಕೋವಿಡ್‌: 11 ಮಂದಿ ಗುಣಮುಖ

ಒಬ್ಬರು ಸಾವು; 41 ಮಂದಿಗೆ ದೃಢ

ಪ್ರಜಾವಾಣಿ ವಾರ್ತೆ Updated:

ಅಕ್ಷರ ಗಾತ್ರ : | |

ಚಿಕ್ಕಮಗಳೂರು: ಜಿಲ್ಲೆಯಲ್ಲಿ ಕೋವಿಡ್‌ನಿಂದಾಗಿ ವೃದ್ಧರೊಬ್ಬರು ಭಾನುವಾರ ಮೃತಪಟ್ಟಿದ್ದಾರೆ. 41 ಮಂದಿಗೆ ಸೋಂಕು ದೃಢಪಟ್ಟಿದ್ದು, 11 ಮಂದಿ ಗುಣಮುಖರಾಗಿ ಆಸ್ಪತ್ರೆಯಿಂದ ಬಿಡುಗಡೆಯಾಗಿದ್ದಾರೆ.

ನಗರದ ಪಂಪಾನಗರದ 62 ವರ್ಷದ ಪುರುಷ (ಪಿ–140244) ಮೃತಪಟ್ಟವರು. ಈ ವ್ಯಕ್ತಿಗೆ ಮಧುಮೇಹ, ಅಧಿಕ ರಕ್ತದೊತ್ತಡ, ಹೃದಯ ಸಂಬಂಧಿ ರೋಗಗಳೂ ಇದ್ದವು ಎಂದು ವೈದ್ಯರು ತಿಳಿಸಿದ್ದಾರೆ.

ಜಿಲ್ಲೆಯಲ್ಲಿ ಮೃತರ ಸಂಖ್ಯೆ 24ಕ್ಕೆ (ಶಿವಮೊಗ್ಗದ ಮೆಗ್ಗಾನ್‌ ಆಸ್ಪತ್ರೆಯ ಎರಡು ಪ್ರಕರಣ ಸಹಿತ) ಏರಿದೆ.

ತಾಲ್ಲೂಕುವಾರು ಸೋಂಕಿತರ ಸಂಖ್ಯೆ: ಚಿಕ್ಕಮಗಳೂರು– 30, ತರೀಕೆರೆ–5, ಕಡೂರು– 4, ಅಜ್ಜಂಪುರ ಹಾಗೂ ಮೂಡಿಗೆರೆಯ ತಲಾ ಒಬ್ಬರಿಗೆ ಸೋಂಕು ಪತ್ತೆಯಾಗಿದೆ.

ಜಿಲ್ಲೆಯಲ್ಲಿ 614 ಸಕ್ರಿಯ ಪ್ರಕರಣಗಳು ಇವೆ. 440 ಮಂದಿ ಗುಣಮುಖರಾಗಿದ್ದಾರೆ. ಈವರೆಗಿನ ಒಟ್ಟು ಪ್ರಕರಣಗಳ ಸಂಖ್ಯೆ 1087ಕ್ಕೆ ತಲುಪಿದೆ. ಜಿಲ್ಲೆಯ ವಿವಿಧೆಡೆ 357ನಿಯಂತ್ರಿತ ವಲಯ (ಕಂಟೈನ್ಮೆಂಟ್‌ ಝೋನ್‌) ಇವೆ.

ಪಟ್ಟಿ

ಜಿಲ್ಲೆಯಲ್ಲಿ ಒಟ್ಟು: 1087

ದಿನದ ಏರಿಕೆ: 41 

ಸಕ್ರಿಯ ಪ್ರಕರಣ: 614

ದಿನದ ಏರಿಕೆ: 29 

ಗುಣಮುಖ: 440

ದಿನದ ಏರಿಕೆ: 11 

ಸಾವು: 24 (ಶಿವಮೊಗ್ಗದ ಮೆಗ್ಗಾನ್ ಆಸ್ಪತ್ರೆಯ 2 ಪ್ರಕರಣ ಸಹಿತ)

ದಿನದ ಏರಿಕೆ : 1

ತಾಜಾ ಮಾಹಿತಿ ಪಡೆಯಲು ಪ್ರಜಾವಾಣಿ ಟೆಲಿಗ್ರಾಂ ಚಾನೆಲ್ ಸೇರಿಕೊಳ್ಳಿ

ತಾಜಾ ಸುದ್ದಿಗಳಿಗಾಗಿ ಪ್ರಜಾವಾಣಿ ಆ್ಯಪ್ ಡೌನ್‌ಲೋಡ್ ಮಾಡಿಕೊಳ್ಳಿ: ಆಂಡ್ರಾಯ್ಡ್ ಆ್ಯಪ್ | ಐಒಎಸ್ ಆ್ಯಪ್

ಪ್ರಜಾವಾಣಿ ಫೇಸ್‌ಬುಕ್ ಪುಟವನ್ನುಫಾಲೋ ಮಾಡಿ.

ಈ ವಿಭಾಗದಿಂದ ಇನ್ನಷ್ಟು