ಚಿಕ್ಕಮಗಳೂರು: ‘ಜಯಂತಿಗಳನ್ನು ಆಚರಿಸಬೇಕೇ, ಬೇಡವೇ ಎಂಬ ಬಗ್ಗೆ ಜನನಾಯಕರು, ಸಮುದಾಯಗಳ ಮುಖಂಡರ ಸಮಾಲೋಚಿಸಿ ವರದಿ ಸಲ್ಲಿಸುವಂತೆ ಜಿಲ್ಲಾಧಿಕಾರಿಗಳಿಗೆ ಸೂಚನೆ ನೀಡಿದ್ದೇನೆ. ಈ ವಿಚಾರವನ್ನು ಕೆ.ಪಿ. ನಂಜುಂಡಿ ಅವರೊಂದಿಗೂ ಮಾತನಾಡಿದ್ದೆ’ ಎಂದು ಕನ್ನಡ ಮತ್ತು ಸಂಸ್ಕೃತಿ ಸಚಿವ ಸಿ.ಟಿ. ರವಿ ಪ್ರತಿಕ್ರಿಯಿಸಿದರು.

ಅಮರಶಿಲ್ಪಿ ಜಕಣಾಚಾರಿ ಜಯಂತಿಯನ್ನು ಸರ್ಕಾರದಿಂದ ಆಚರಿಸಲು ಮುಖ್ಯಮಂತ್ರಿ ಸೂಚಿಸಿದರೂ ಸಿ.ಟಿ. ರವಿ ಒಪ್ಪಿಲ್ಲ ಎಂದು ವಿಧಾನ ಪರಿಷತ್ತಿನ ಬಿಜೆಪಿ ಸದಸ್ಯ ಕೆ.ಪಿ.ನಂಜುಂಡಿ ಹೇಳಿಕೆಗೆ ಸಂಬಂಧಿಸಿದಂತೆ ‘ಪ್ರಜಾವಾಣಿ’ಗೆ ಗುರುವಾರ ಪ್ರತಿಕ್ರಿಯಿಸಿದ ಅವರು, ‘ಜಕಣಾಚಾರಿ ಅವರು ದೇಶ ಕಂಡ ಶ್ರೇಷ್ಠ ಶಿಲ್ಪಿ, ಬೇಲೂರು, ಹಳೇಬೀಡು ಸಹಿತ ಅನೇಕ ದೇಗುಲಗಳು ಅವರ ಕಲಾವೈಭವಕ್ಕೆ ಸಾಕ್ಷಿಯಾಗಿವೆ. ಶಿಲ್ಪಕಲಾ ಕ್ಷೇತ್ರದಲ್ಲಿ ಅವರ ಹೆಸರಿನಲ್ಲಿ ಪ್ರಶಸ್ತಿ ನೀಡಲಾಗುತ್ತಿದೆ. ಸರ್ಕಾರದ ವತಿಯಿಂದ ವಿಶ್ವಕರ್ಮ ಜಯಂತಿ ಈಗಾಗಲೇ ಆಚರಿಸಲಾಗುತ್ತಿದೆ’ ಎಂದು ಉತ್ತರಿಸಿದರು.

‘ಸಿ.ಎಂ ಅವರಿಗೆ ಪರಮಾಧಿಕಾರ ಇದೆ. ಜಯಂತಿ ಘೋಷಣೆ ಮಾಡಿ, ಅನುಷ್ಠಾನ ಮಾಡಲು ಅವರಿಗೆ ಅಧಿಕಾರ ಇದೆ. ಜಯಂತಿ ಆಚರಣೆಗೆ ಹೊಸದಾಗಿ ಇಲಾಖೆ ಆರಂಭಿಸಿ ಅದಕ್ಕೆ ನಂಜುಂಡಿ ಅವರನ್ನೇ ಸಚಿವರನ್ನಾಗಿ ಮಾಡಿದರೂ ನನ್ನ ಅಭ್ಯಂತರ ಇಲ್ಲ’ ಎಂದರು.

ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ವಾಟ್ಸ್ಆ್ಯಪ್, ಎಕ್ಸ್, ಫೇಸ್‌ಬುಕ್ ಮತ್ತು ಇನ್ಸ್ಟಾಗ್ರಾಂನಲ್ಲಿ ಪ್ರಜಾವಾಣಿ ಫಾಲೋ ಮಾಡಿ.