ಶುಕ್ರವಾರ, 26 ಏಪ್ರಿಲ್ 2024
×
ADVERTISEMENT
ಈ ಕ್ಷಣ :
ADVERTISEMENT
ADVERTISEMENT

ಮೂಡಿಗೆರೆ| ಪಟ್ಟಣಕ್ಕೆ ಬಂದ ಕಾಡಾನೆ: ಆತಂಕ ಸೃಷ್ಟಿಸಿದ ಗಜಸಂಚಾರ

ಆತಂಕ ಸೃಷ್ಟಿಸಿದ ಗಜಸಂಚಾರ
Last Updated 4 ಅಕ್ಟೋಬರ್ 2022, 6:03 IST
ಅಕ್ಷರ ಗಾತ್ರ

ಮೂಡಿಗೆರೆ: ಪಟ್ಟಣದ ಮೇಗಲಪೇಟೆಯಲ್ಲಿ ಸೋಮವಾರ ನಸುಕಿನ ಜಾವ 3 ಗಂಟೆ ಸುಮಾರಿಗೆ ಮೂರು ಕಾಡಾನೆಗಳು ಕಾಣಿಸಿಕೊಂಡು ಆತಂಕ ಸೃಷ್ಟಿಸಿದವು.

ಭಾನುವಾರ ತಡರಾತ್ರಿ ಹಂಸೆ ಗ್ರಾಮಕ್ಕೆ ಬಂದ ಕಾಡಾನೆಗಳು, ಹಳಸೆಯಿಂದ ಕುನ್ನಳ್ಳಿ, ಛತ್ರಮೈದಾನ ಮಾರ್ಗವಾಗಿ, ಬೀಜುವಳ್ಳಿಗೆ ಬಂದಿದ್ದು, ಸುಮಾರು 11.30 ರ ಸುಮಾರಿಗೆ ಮೂಡಿಗೆರೆ – ಬೇಲೂರು ರಾಜ್ಯ ಹೆದ್ದಾರಿಯನ್ನು ದಾಟಿವೆ. ಬಳಿಕ ಮೇಗಲಪೇಟೆಯ ಜೆನಿತ್ ಶಾಮಿಲ್ ಹಿಂಭಾಗಕ್ಕೆ ಬಂದ ಮೂರು ಕಾಡಾನೆಗಳು ಹಲವು ರೈತರ ಕಾಫಿ ತೋಟಗಳಲ್ಲಿ ತಿರುಗಾಡಿ ವೇಣುಗೋಪಾಲ್ ಎಂಬುವವರ ಮನೆಯ ಗೇಟನ್ನು ಮುರಿದು ಹೆದ್ದಾರಿಗೆ ಇಳಿದಿವೆ. ಹೆದ್ದಾರಿಯಲ್ಲಿ ಸುಮಾರು 200 ಮೀ. ನಷ್ಟು ಸಂಚರಿಸಿರುವ ಕಾಡಾನೆಗಳು, ನವರತ್ನ ಪೆಟ್ರೋಲ್ ಬಂಕ್ ಪಕ್ಕದ ಕಾಫಿ ತೋಟದಲ್ಲಿ ಸಂಚರಿಸಿ ಹೆಸ್ಗಲ್ ಗ್ರಾಮಕ್ಕೆ ಬಂದಿದ್ದು, ಬೆಳ್ಳಿಗ್ಗೆ ಹಳ್ಳದಗಂಡಿ ಮೂಲಕ ತತ್ಕೊಳ ಮೀಸಲು ಅರಣ್ಯಕ್ಕೆ ತೆರಳಿವೆ.

ಮೇಗಲಪೇಟೆ, ಹೆಸ್ಗಲ್, ಬಾಪುನಗರ, ಶಕ್ತಿನಗರ, ತತ್ಕೊಳ ಭಾಗಗಳಲ್ಲಿ ಆತಂಕದ ವಾತಾವರಣ ಉಂಟಾಗಿತ್ತು. ಹಗಲಿನಲ್ಲಿಯೂ ಜನರು ಓಡಾಡಲು ಹಿಂಜರಿಯುತ್ತಿದ್ದ ದೃಶ್ಯ ಕಂಡು ಬಂದಿತು.

ತಾಜಾ ಸುದ್ದಿಗಾಗಿ ಪ್ರಜಾವಾಣಿ ಟೆಲಿಗ್ರಾಂ ಚಾನೆಲ್ ಸೇರಿಕೊಳ್ಳಿ | ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ನಮ್ಮ ಫೇಸ್‌ಬುಕ್ ಪುಟ ಫಾಲೋ ಮಾಡಿ.

ADVERTISEMENT
ADVERTISEMENT
ADVERTISEMENT
ADVERTISEMENT
ADVERTISEMENT