ಶನಿವಾರ, 27 ಏಪ್ರಿಲ್ 2024
×
ADVERTISEMENT
ಈ ಕ್ಷಣ :
ADVERTISEMENT
ADVERTISEMENT

 ಸಹಕಾರಿ ಸಂಘಕ್ಕೆ ₹11.05 ಲಕ್ಷ ಲಾಭ

Last Updated 24 ಸೆಪ್ಟೆಂಬರ್ 2022, 5:24 IST
ಅಕ್ಷರ ಗಾತ್ರ

ತರೀಕೆರೆ: ಹಾದಿಕೆರೆ ಪ್ರಾಥಮಿಕ ಕೃಷಿ ಪತ್ತಿನ ಸಹಕಾರ ಸಂಘವು 2021–22ನೇ ಸಾಲಿನಲ್ಲಿ ₹11.05 ಲಕ್ಷ ಲಾಭ ಗಳಿಸಿದೆ’ ಎಂದು ಸಂಘದ ಮುಖ್ಯ ಕಾರ್ಯನಿರ್ವಣಾಧಿಕಾರಿ ಅಂಬರೀಶ್ ಹೇಳಿದರು.

ಸಂಘದಿಂದ ಶೂನ್ಯ ಬಡ್ಡಿದರದಲ್ಲಿ ₹12.22 ಕೋಟಿ ಬೆಳೆಸಾಲ ನೀಡಲಾಗಿದೆ’ ಎಂದರು.

ಸಂಘದ ಸದಸ್ಯರು ಅಕಾಲಿಕ ಮರಣ ಹೊಂದಿದರೆ ಅವರಿಗೆ ₹25 ಸಾವಿರ ಕೋಡುತ್ತಿದ್ದರು. ಅದನ್ನು ₹10 ಸಾವಿರಕ್ಕೆ ಇಳಿಸಿರುವುದು ಸರಿಯಲ್ಲ’ ಎಂದು ಸದಸ್ಯರಾದ ಮಲ್ಲೇಶಪ್ಪ ಆಕ್ಷೇಪ ವ್ಯಕ್ತಪಡಿಸಿದರು. ಕೋವಿಡ್ ಕಾರಣ ಮರಣ ನಿಧಿಯನ್ನು ಕಡಿತಗೂಳಿಸಲಾಗಿದೆ, ಮುಂದಿನ ದಿನಗಳಲ್ಲಿ ಅದನ್ನು ಸರಿಪಡಿಸಲಾಗುವುದು’ ಎಂದು ಮುಖ್ಯ ಕಾರ್ಯನಿರ್ವಣಾಧಿಕಾರಿ ಅಂಬರೀಶ್ ಹೇಳಿದರು.

ಎಚ್‌. ಎಸ್. ಬಸವರಾಜ್, ಮಲ್ಲೇಶಪ್ಪ, ಮಂಜುನಾಥ, ಇದ್ದರು. ರೇಣುಕಪ್ಪ ಸಭೆಯ ಅಧ್ಯಕ್ಷತೆ ವಹಿಸಿದ್ದರು. ನಿರ್ದೇಶಕರಾದ ಚನ್ನಬಸಪ್ಪ, ಚಿಕ್ಕಣ್ಣ, ಎಚ್‌.ಎಸ್. ಶೇಖರಪ್ಪ, ಚಂದ್ರಪ್ಪ, ಓಂಕಾರಪ್ಪ, ಗೀತಾ, ಗಂಗಮ್ಮ, ಧರ್ಮನಾಯ್ಕ, ಮಹೇಶ್ವರಪ್ಪ, ವೆಂಕಟೇಶ್, ಜಯಲಕ್ಷೀ ಇದ್ದರು. ಅಂಬರೀಶ್ ಸ್ವಾಗತಿಸಿದರು. ಯತೀಶ್ ವಂದಿಸಿದರು.

ತಾಜಾ ಸುದ್ದಿಗಾಗಿ ಪ್ರಜಾವಾಣಿ ಟೆಲಿಗ್ರಾಂ ಚಾನೆಲ್ ಸೇರಿಕೊಳ್ಳಿ | ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ನಮ್ಮ ಫೇಸ್‌ಬುಕ್ ಪುಟ ಫಾಲೋ ಮಾಡಿ.

ADVERTISEMENT
ADVERTISEMENT
ADVERTISEMENT
ADVERTISEMENT
ADVERTISEMENT