ಗುರುವಾರ, 25 ಏಪ್ರಿಲ್ 2024
×
ADVERTISEMENT
ಈ ಕ್ಷಣ :
ADVERTISEMENT
ADVERTISEMENT

ಚಿಕ್ಕಮಗಳೂರು: ಬೆಂಕಿ ಅನಾಹುತ, ಮನೆಗೆ ಹಾನಿ

Last Updated 20 ಮಾರ್ಚ್ 2021, 3:27 IST
ಅಕ್ಷರ ಗಾತ್ರ

ಚಿಕ್ಕಮಗಳೂರು: ನಗರದ ಜಯನಗರ ಬಡಾವಣೆಯ ಮನೆಯೊಂದರಲ್ಲಿ ಶುಕ್ರವಾರ ಅಗ್ನಿ ಅನಾಹುತ ಸಂಭವಿಸಿದ್ದು, ಮನೆಯಲ್ಲಿದ್ದ ವಸ್ತುಗಳು ಸುಟ್ಟು ಕರಕಲಾಗಿದೆ. ಪಕ್ಕದ ಮನೆಗಳ ಚಾವಣಿ, ಗೋಡೆಗಳಿಗೂ ಹಾನಿಯಾಗಿದೆ.

ಮಧ್ಯಾಹ್ನ 2 ಗಂಟೆ ಹೊತ್ತಿಗೆ ಅವಘಡ ಸಂಭವಿಸಿದೆ.ಕಾಮಧೇನು ರಸ್ತೆಯಲ್ಲಿನ ಈ ಹೆಂಚಿನ ಮನೆಯಲ್ಲಿ ಪವನ್ ಎಂಬವರು ಬಾಡಿಗೆಗೆ ಇದ್ದರು.

ಮನೆಯ ಅಟ್ಟಕ್ಕೆ ತಗುಲಿದಬೆಂಕಿ ಇಡೀ ಮನೆಗೆ ವ್ಯಾಪಿಸಿದೆ. ಟಿವಿ, ಹೊಲಿಗೆ ಯಂತ್ರ, ಪೀಠೋಪಕರಣ, ಬಟ್ಟೆ, ಧಾನ್ಯ ಇತರ ವಸ್ತುಗಳು ಬೆಂಕಿಗೆ ಆಹುತಿಯಾಗಿವೆ.

‘ಜೀವನೋಪಾಯಕ್ಕೆಮೂಡಿಗೆರೆ ರಸ್ತೆಯಲ್ಲಿ ಬಟ್ಟೆ ಇಸ್ತ್ರಿ ಅಂಗಡಿ, ಕ್ಯಾಂಟೀನ್ ಇಟ್ಟುಕೊಂಡಿದ್ದೇನೆ. ಡಿಪಿ ಸ್ವಿಚ್‌ ಬಳಿ ಶಾರ್ಟ್‌ ಸರ್ಕಿಟ್‌ ಆಗಿ ಬೆಂಕಿ ಹೊತ್ತಿಕೊಂಡಿದೆ. ಧರ್ಮಸ್ಥಳ ಸಂಘದಲ್ಲಿ ಸಾಲ ಪಡೆದುಕೊಂಡಿದ್ದ ಹಣ ಹಾಗೂ ತಾಯಿಯ ಚಿನ್ನದ ಸರ ಬೀರಿನಲ್ಲಿದ್ದವು. ಮನೆಯಲ್ಲಿದ್ದ ವಸ್ತುಗಳೆಲ್ಲವೂ ಸುಟ್ಟಿವೆ. ದಿಕ್ಕು ತೋಚದಂತಾಗಿದೆ’ ಎಂದುಪವನ್‌ ದುಃಖಪಟ್ಟರು.

‘ಕಾಮಧೇನು ರಸ್ತೆಯಲ್ಲಿನ 15*30 ಅಡಿಯ ಹಂಚಿನ ಮನೆ ಪೂರ್ಣವಾಗಿ ಬೆಂಕಿಗಾಹುತಿಯಾಗಿದೆ. ವಿದ್ಯುತ್ ಶಾರ್ಟ್‌ಸರ್ಕಿಟ್‌‌ನಿಂದ ಬೆಂಕಿ ಹೊತ್ತಿಕೊಂಡಿರುವ ಸಾಧ್ಯತೆ ಇದೆ’ ಎಂದು ಜಿಲ್ಲಾ ಅಗ್ನಿ ಶಾಮಕ ಅಧಿಕಾರಿ ಕೆ.ಪಿ.ಶಶಧರ್ ತಿಳಿಸಿದರು.

‘ಮಾಹಿತಿ ನೀಡಿದ ಐದು ನಿಮಿಷದಲ್ಲಿ ಅಗ್ನಿ ಶಾಮಕ ದಳದವರು ಅವಘಡದ ಸ್ಥಳದಲ್ಲಿದ್ದರು. ಸಮಯಕ್ಕೆ ಸರಿಯಾಗಿ ಬಂದಿದ್ದರಿಂದ ಹೆಚ್ಚಿನ ಅವಘಡ ತಪ್ಪಿತು. ತಡವಾಗಿದ್ದರೆ ಅಕ್ಕಪಕ್ಕದ ಮನೆಗಗಳು ಪೂರ್ಣವಾಗಿ ಹಾನಿಯಾಗುತ್ತಿದ್ದವು’ ಎಂದು ಸ್ಥಳೀಯರು ಹೇಳಿದರು.

ತಾಜಾ ಸುದ್ದಿಗಾಗಿ ಪ್ರಜಾವಾಣಿ ಟೆಲಿಗ್ರಾಂ ಚಾನೆಲ್ ಸೇರಿಕೊಳ್ಳಿ | ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ನಮ್ಮ ಫೇಸ್‌ಬುಕ್ ಪುಟ ಫಾಲೋ ಮಾಡಿ.

ADVERTISEMENT
ADVERTISEMENT
ADVERTISEMENT
ADVERTISEMENT
ADVERTISEMENT