ಬುಧವಾರ, 24 ಏಪ್ರಿಲ್ 2024
×
ADVERTISEMENT
ಈ ಕ್ಷಣ :
ADVERTISEMENT
ADVERTISEMENT

ಬಾಳೆಹೊನ್ನೂರು: ಲಂಟಾನ ಕಳೆ ಕೀಳಲು ₹ 25 ಲಕ್ಷ ವೆಚ್ಚ!

ಅರಣ್ಯ ಇಲಾಖೆಯ ಕೊಪ್ಪ ವಿಭಾಗ– ಸಮಗ್ರ ತನಿಖೆಗೆ ಒತ್ತಾಯ
Last Updated 1 ನವೆಂಬರ್ 2020, 4:17 IST
ಅಕ್ಷರ ಗಾತ್ರ

ಬಾಳೆಹೊನ್ನೂರು: ಅರಣ್ಯ ಇಲಾಖೆಯ ಕೊಪ್ಪ ವಿಭಾಗ ವಲಯದ ಹುಲ್ಲುಗಾವಲು ರಕ್ಷಿಸುವ ಉದ್ದೇಶದಿಂದ ಲಂಟಾನ ಕಳೆಯನ್ನು ಕೀಳಲು 2019-20ನೇ ಸಾಲಿನಲ್ಲಿ ₹ 25 ಲಕ್ಷ ವೆಚ್ಚ ಮಾಡಿರುವುದು ಮಾಹಿತಿ ಹಕ್ಕು ಕಾಯ್ದೆಯಡಿ ಪಡೆದ ಮಾಹಿತಿಯಿಂದ ಬೆಳಕಿಗೆ ಬಂದಿದೆ.

ಕೊಪ್ಪ ವಲಯದ ನುಗ್ಗಿ ಗ್ರಾಮದ ಸರ್ವೆ ನಂ 10,105,120 ರಲ್ಲಿನ 7 ಹೆಕ್ಟೇರ್ ಪ್ರದೇಶದಲ್ಲಿ ಬೆಳೆದ ಲಂಟಾನ ಕೀಳಲು ಹೆಕ್ಟೇರ್‌ಗೆ ತಲಾ ₹ 57 ಸಾವಿರದಂತೆ ಒಟ್ಟು ₹ 3.99 ಲಕ್ಷ ವ್ಯಯಿಸಲಾಗಿದೆ. ನರಸಿಂಹರಾಜಪುರ ವ್ಯಾಪ್ತಿಯ ಮಲ್ಲಂದೂರು ಸರ್ವೆ ನಂ. 5 ರಲ್ಲಿ ಐದು ಹೆಕ್ಟೇರ್ ಹಾಗೂ ಕೊನೊಡಿ ಗ್ರಾಮದ ಸರ್ವೆ ನಂ. 65ರ ಐದು ಹೆಕ್ಟೇರ್ ಪ್ರದೇಶದಲ್ಲಿನ ಲಂಟಾನ ಕೀಳಲು ₹ 5.70 ಲಕ್ಷ ಖರ್ಚು ಮಾಡಲಾಗಿದೆ.

ಬಾಳೆಹೊನ್ನೂರು ವಲಯದ ಹುಯಿಗೆರೆ ಸರ್ವೆ ನಂ. 83ರಲ್ಲಿನ 5 ಎಕರೆಗೆ ₹ 3.99 ಲಕ್ಷ, ಕಳಸ ವಲಯದ ತೋಟದೂರು ಗ್ರಾಮದ ಸರ್ವೆ ನಂ. 58, 55 ರಲ್ಲಿ ಒಟ್ಟು 12.86 ಹೆಕ್ಟೇರ್‌ಗೆ ₹ 7.33 ಲಕ್ಷ ಹಾಗೂ ಶೃಂಗೇರಿ ವಲಯದ ಮಲ್ನಾಡ್ ಗ್ರಾಮದ ಸರ್ವೆ ನಂ. 90ರಲ್ಲಿನ ಲಂಟಾನ ನಿರ್ಮೂಲನೆಗೆ ₹ 3.99 ಲಕ್ಷ ಖರ್ಚು ಮಾಡಿರುವುದು ತಿಳಿದುಬಂದಿದೆ.

ದಾಖಲೆಯಲ್ಲಿ ಮಾತ್ರ ಕಳೆ ಕಿತ್ತಿದ್ದಾರೆ: ತೋಟದೂರು ವ್ಯಾಪ್ತಿಯಲ್ಲಿ ಸುಮಾರು ₹ 7.33 ಲಕ್ಷ ವ್ಯಯಿಸಿ 12.86 ಹೆಕ್ಟೇರ್ ಜಾಗದಲ್ಲಿ ಲಂಟಾನ ನಿರ್ಮೂಲನೆ ಮಾಡಿದ್ದು, ಗ್ರಾಮದ ಯಾರಿಗೂ ಕಂಡು ಬಂದಿಲ್ಲ. ದಾಖಲೆಯಲ್ಲಿ ಮಾತ್ರ ಮಾಡಿ ಹಣ ಜೇಬಿಗೆ ಇಳಿಸಿರಬಹುದು ಎಂಬುದು ನಮ್ಮ ಅನುಮಾನ. 1978, 80ರಲ್ಲಿ ಯಪಟೋರಿಯಂ, ಲಂಟಾನ ಬಾರಿ ಪ್ರಮಾಣದಲ್ಲಿ ಕಾಣಿಸಿಕೊಂಡಿತ್ತು. ಆದರೆ, ಇತ್ತೀಚೆಗೆ ಹುಲ್ಲನ್ನು ಮೀರಿ ಬೆಳೆಯುವ ಕಳೆಯಾಗಿ ಕಂಡು ಬಂದಿಲ್ಲ. ಅಲ್ಲೊಂದು ಇಲ್ಲೊಂದು ಗಿಡ ಇರುವುದು ಜೀವ ವೈವಿಧ್ಯದ ಭಾಗ. ಈ ಗಿಡಗಳು ಬೇರೆ ಗಿಡಗಳಿಗೆ, ಜೀವವೈವಿಧ್ಯಕ್ಕೆ ಧಕ್ಕೆ ತರುವುದಿಲ್ಲ. ಈ ಬಗ್ಗೆ ಸಮಗ್ರ ತನಿಖೆ ಅಗತ್ಯವಿದೆ’ ಎಂದು ಪಶ್ಚಿಮಘಟ್ಟ ಕಾರ್ಯಪಡೆ ಸದಸ್ಯ ಗಜೇಂದ್ರ ಗೊರಸುಕೊಡಿಗೆ ಒತ್ತಾಯಿಸಿದ್ದಾರೆ.

ದುಡ್ಡು ಹೊಡೆಯೋ ಯೋಜನೆ: ‘ಲಂಟಾನ ನೈಸರ್ಗಿಕ ಬೆಳೆಯುವಂತ ಹದು. ಕಾಡು ಬೆಳೆಯುತ್ತಿದ್ದಂತೆ ಅದು ತನ್ನಷ್ಟಕ್ಕೆ ಸತ್ತು ಹೋಗುತ್ತದೆ. ಆ ಗಿಡಕ್ಕೆ ಬಿಸಿಲು ಬೇಕು. ಅದನ್ನು ತೆಗೆದರೆ ಅಲ್ಲಿ ಇನ್ನೊಂದು ಜಾತಿಯ ಕಳೆ ಬೆಳೆಯುತ್ತದೆ. ಇದೊಂದು ಅರಣ್ಯ ಇಲಾಖೆಯ ವ್ಯರ್ಥ ಪ್ರಯತ್ನ. ದುಡ್ಡು ತಿನ್ನೋಕೆ ಮಾಡ್ತಿರೋ ಕೆಲಸ. ಮಳೆಯ ಸಂದರ್ಭದಲ್ಲಿ ಮಣ್ಣು ಕೊಚ್ಚಿಕೊಂಡು ಹೋಗಬಾರದು ಎಂಬ ಕಾರಣಕ್ಕೆ ಪ್ರಕೃತಿಯಿಂದ ಉಂಟಾದ ಸೃಷ್ಟಿಯೇ ಲಂಟಾನ. ಇಲಾಖೆಯ ಕಾರ್ಯವೈಖರಿ ಸಂಪೂರ್ಣ ಅವೈಜ್ಞಾನಿಕ’ ಎಂದು ಪರಿಸರ ಹೋರಾಟಗಾರ ಕಲ್ಕುಳಿ ವಿಠಲ ಹೆಗ್ಡೆ ಆರೋಪಿಸಿದ್ದಾರೆ.

ತಾಜಾ ಸುದ್ದಿಗಾಗಿ ಪ್ರಜಾವಾಣಿ ಟೆಲಿಗ್ರಾಂ ಚಾನೆಲ್ ಸೇರಿಕೊಳ್ಳಿ | ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ನಮ್ಮ ಫೇಸ್‌ಬುಕ್ ಪುಟ ಫಾಲೋ ಮಾಡಿ.

ADVERTISEMENT
ADVERTISEMENT
ADVERTISEMENT
ADVERTISEMENT
ADVERTISEMENT