ಶುಕ್ರವಾರ, 19 ಏಪ್ರಿಲ್ 2024
×
ADVERTISEMENT
ಈ ಕ್ಷಣ :
ADVERTISEMENT
ADVERTISEMENT

ಮೂಡಿಗೆರೆ: ಪಾದಯಾತ್ರಿಗಳಿಗೆ ಅನ್ನಸಂತರ್ಪಣೆ

Last Updated 11 ಮಾರ್ಚ್ 2021, 14:39 IST
ಅಕ್ಷರ ಗಾತ್ರ

ಮೂಡಿಗೆರೆ: ರಾಜ್ಯದ ನಾನಾ ಭಾಗಗಳಿಂದ ಮೂಡಿಗೆ ಮಾರ್ಗವಾಗಿ ಧರ್ಮಸ್ಥಳಕ್ಕೆ ತೆರಳಿದ ಪಾದಯಾತ್ರಿಗಳಿಗೆ ಮೂಡಿಗೆರೆ ಸಮಾಜ ಸೇವಾ ಸಂಘದ ವತಿಯಿಂದ 5ನೇ ವರ್ಷದ ಅನ್ನ ಸಂತರ್ಪಣೆ ಕಾರ್ಯಕ್ರಮ ನಡೆಸಲಾಯಿತು.

ತಾಲ್ಲೂಕಿನ ನೀರುಗಂಡಿ ಗ್ರಾಮದ ಬಳಿ ಎಸ್‌ಎಲ್‌ಆರ್‌ ಕಾಫಿ ಕ್ಯೂರಿಂಗ್ ಆವರಣದಲ್ಲಿ ಸಾವಿರಾರು ಮಂದಿ ಪಾದಯಾತ್ರಿಗಳು ಉಳಿದುಕೊಳ್ಳವಷ್ಟು ಶಾಮಿಯಾನ ವ್ಯವಸ್ಥೆಯನ್ನು ಕಲ್ಪಿಸಿ, ಶೌಚಾಲಯ, ಸ್ನಾನಗೃಹಗಳನ್ನು ನಿರ್ಮಿಸಿ ವಿಶ್ರಾಂತಿ ಪಡೆದುಕೊಳ್ಳಲು ಅವಕಾಶ ಕಲ್ಪಿಸಲಾಗಿತ್ತು. ನಾಲ್ಕು ದಿನಗಳ ಕಾಲ ಹಗಲಿರುಳು ನಡೆದ ಈ ಸೇವಾ ಕಾರ್ಯದಲ್ಲಿ, ಪಾದಯಾತ್ರಿಗಳಿಗೆ ಆರೋಗ್ಯ ತಪಾಸಣೆ, ಚಿಕಿತ್ಸೆ, ಅನ್ನ ದಾಸೋಹವನ್ನು ನಿರಂತರವಾಗಿ ನಡೆಸಲಾಯಿತು.

ತುಮಕೂರಿನ ಸದ್ದೀಕ್ಷ ಚಾರಿಟಬಲ್ ಸಂಸ್ಥೆ ವತಿಯಿಂದ ಪಾದಯಾತ್ರಿಗಳಿಗೆ ಆಯುರ್ವೇದಿಕ್ ಚಿಕಿತ್ಸೆ ಕೂಡ ನೀಡಲಾಯಿತು. ಸಮಿತಿಯ ಪದಾಧಿಕಾರಿಗಳು, ಸೇವಕರು ಭಾಗವಹಿಸಿ ಹಗಲಿರುಳು ಸೇವಾ ಕಾರ್ಯದಲ್ಲಿ ತೊಡಗಿಸಿಕೊಂಡಿದ್ದರು.

ತಾಜಾ ಸುದ್ದಿಗಾಗಿ ಪ್ರಜಾವಾಣಿ ಟೆಲಿಗ್ರಾಂ ಚಾನೆಲ್ ಸೇರಿಕೊಳ್ಳಿ | ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ನಮ್ಮ ಫೇಸ್‌ಬುಕ್ ಪುಟ ಫಾಲೋ ಮಾಡಿ.

ADVERTISEMENT
ADVERTISEMENT
ADVERTISEMENT
ADVERTISEMENT
ADVERTISEMENT