ತರೀಕೆರೆ(ಚಿಕ್ಕಮಗಳೂರು): ಗಣಪತಿ ಮೂರ್ತಿ ತರಲು ಯುವಕರು ಹೋಗುತ್ತಿದ್ದ ಮಿನಿ ಗೂಡ್ಸ್ ವಾಹನ ಪಲ್ಟಿಯಾಗಿ ಇಬ್ಬರು ಯುವಕರು ಮೃತಪಟ್ಟಿದ್ದಾರೆ.
ಲಿಂಗದಹಳ್ಳಿ ಗ್ರಾಮದ ಸಹ್ಯಾದ್ರಿಪುರ ನಿವಾಸಿಗಳಾದ ಶ್ರೀಧರ(25) ಮತ್ತು ಧನುಷ್ (30) ಮೃತಪಟ್ಟವರು.
ಇದೇ ಗ್ರಾಮದ ಮಂಜು , ವರುಣ, ಗುರುಮೂರ್ತಿ, ಚಂದ್ರಶೇಖರ ಮತ್ತು ಸಂದೀಪ ಎಂಬುವರು ಗಾಯಗೊಂಡಿದ್ದು, ಶಿವಮೊಗ್ಗದ ಮೆಗ್ಗಾನ್ ಆಸ್ಪತ್ರೆಗೆ ದಾಖಲಿಸಲಾಗಿದೆ.
ಗಣಪತಿ ಮೂರ್ತಿ ತರಲು ಗ್ರಾಮದ ಯುವಕರು ಟಾಟಾ ಏಸ್ ವಾಹನದಲ್ಲಿ ತರೀಕೆರೆಗೆ ಹೊರಟಿದ್ದರು ಎಂದು ಪೊಲೀಸರು ತಿಳಿಸಿದ್ದಾರೆ.