ಭಾನುವಾರ, ಸೆಪ್ಟೆಂಬರ್ 22, 2019
27 °C

ಇಬ್ಬರ ಬಂಧನ; ಗಾಂಜಾ ಗಿಡ ವಶ

Published:
Updated:
Prajavani

ಚಿಕ್ಕಮಗಳೂರು: ಮನೆಯ ಹಿಂಭಾಗದ ಹಿತ್ತಲಿನಲ್ಲಿ ಗಾಂಜಾ ಬೆಳೆದಿದ್ದ ಪ್ರಕರಣದಲ್ಲಿ ತಾಲ್ಲೂಕಿನ ಲಕ್ಯಾ ಹೋಬಳಿಯ ಮಾಚೇನಹಳ್ಳಿಯ ಓಂಕಾರಪ್ಪ (50), ಮಲ್ಲಿಕಾರ್ಜುನ(50) ಎಂಬುವರನ್ನು ಬಂಧಿಸಿ, ಗಾಂಜಾ ಗಿಡಗಳನ್ನು ವಶಪಡಿಸಿಕೊಂಡಿದ್ದಾರೆ.

ಅಬಕಾರಿ ಇನ್‌ಸ್ಪೆಕ್ಟರ್‌ ಎಂ.ಆರ್‌. ಶೇಖರ್‌ ನೇತೃತ್ವದ ತಂಡ ಮಧ್ಯಾಹ್ನ 1 ಗಂಟೆ ಸುಮಾರಿಗೆ ಕಾರ್ಯಚರಣೆ ನಡೆಸಿ ಇಬ್ಬರನ್ನು ಬಂಧಿಸಿದ್ದಾರೆ. ಸುಮಾರು 20 ಕೆ.ಜಿ ಗಾಂಜಾ ಗಿಡ ವಶಪಡಿಸಿಕೊಂಡಿದ್ದಾರೆ.

‘ಹಿತ್ತಲಿನಲ್ಲಿ ಸುಮಾರು ಎಂಟು ಗಿಡಗಳನ್ನು ಬೆಳೆದಿದ್ದರು. 5ರಿಂದ 10 ಅಡಿ ಎತ್ತರ ಇದ್ದವು. 20 ಕೆ.ಜಿ ಗಾಂಜಾಕ್ಕೆ ಸುಮಾರು ₹ 50 ಸಾವಿರ ಬೆಲೆ ಇದೆ. ಆರೋಪಿಗಳನ್ನು ಕೋರ್ಟ್‌ಗೆ ಹಾಜರುಪಡಿಸುತ್ತೇವೆ’ ಎಂದು ಅಬಕಾರಿ ಇನ್‌ಸ್ಪೆಕ್ಟರ್‌ ಶೇಖರ್‌ ‘ಪ್ರಜಾವಾಣಿ’ಗೆ ತಿಳಿಸಿದರು.

ಅಬಕಾರಿ ಉಪನಿರೀಕ್ಷಕ ಲೋಕೇಶ್‌, ರಕ್ಷಕ ವಿಜಯ್‌, ಉಮೇಶ್‌ ಕಾರ್ಯಾಚರಣೆಯಲ್ಲಿದ್ದರು.

Post Comments (+)